ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ: ಎಸ್.ಎಂ.ಕೃಷ್ಣ ಭವಿಷ್ಯ

ಮದ್ದೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ದಕ್ಷ ಆಡಳಿತ ನೀಡಿರುವುದರಿಂದ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಸ್.ಎಂ‌.ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಸೋಮನಹಳ್ಳಿಯಲ್ಲಿ ಮಾತನಾಡಿದ ಅವರು, ಮೋದಿ ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಮಹತ್ತರ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಜತೆಗೆ ದೇಶದ ಜನತೆ ಒಬ್ಬ ಉತ್ತಮ ದಕ್ಷ ನಾಯಕತ್ವವನ್ನು ಮೋದಿ ನೀಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಹಾಘಟ್ ಬಂದ್ ನಿಂದ ಯಾವುದೇ ಹಿನ್ನಡೆಯಾಗುವುದಿಲ್ಲ. ಘಟಬಂದ್ ನಲ್ಲಿ ಇರುವ ನಾಯಕರು ಆಯಾ ರಾಜ್ಯಕ್ಕೆ ಸಿಮೀತ. ಮೋದಿ ಅವರ ಪ್ರಭಾವ ಎಲ್ಲ ರಾಜ್ಯದಲ್ಲೂ ಇದೆ. ಪ್ರಿಯಾಂಕ ಗಾಂಧಿ ಕಾಂಗ್ರೆಸ್ ನ ಮೂರನೇ ಶಕ್ತಿಯಾಗಿ ಬಂದಿದ್ದಾರೆ. ಈ ಬಗೆ ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯವಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಬಂದಿವೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಯಾವುದೇ ಒಂದು ಕಳಂಕವಿಲ್ಲದೆ ಆಡಳಿತ ನಡೆಸಿರುವುದು ದೇಶದ ಅಭಿವೃದ್ಧಿಗೆ ಅನುಕೂಲವಾಗಿದೆ ಎಂದರು.

ಬಳಿಕ ಸಹೋದರ ಎಸ್.ಎ‌ಂ ಶಂಕರ್ ಆರೋಗ್ಯ ವಿಚಾರಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್‌.ಗುರುಚರಣ್, ತಾಪಂ ಮಾಜಿ ಅಧ್ಯಕ್ಷ ಪಿ.ಸಂದರ್ಶ, ಮುಖಂಡರಾದ ಮಧು, ರಾಘವ, ವಕೀಲ ಟಿ.ಎಸ್.ಸತ್ಯಾನಂದ ಉಪಸ್ಥಿತರಿದ್ದರು.