More

  ಎಲಿಜಬೆತ್ ಕಿರೀಟ ಅಲಂಕರಿಸಿದ್ದ ಕೊಹಿನೂರು ವಜ್ರದತ್ತ ಎಲ್ಲರ ಚಿತ್ತ! ಇದರ ಉತ್ತರಾಧಿಕಾರಿ ಇವರೇನಾ?

  ಬ್ರಿಟನ್​: ಭಾರತದಿಂದ ಬ್ರಿಟಿಷರು ಲೂಟಿ ಹೊಡೆದು ಕೊಂಡೊಯ್ದ ಹಲವು ಅಮೂಲ್ಯ ವಸ್ತುಗಳ ಪೈಕಿ ಅಗ್ರ ಸ್ಥಾನದಲ್ಲಿರುವ ಕೊಹಿನೂರು ವಜ್ರ ಇಷ್ಟು ವರ್ಷ ಎಲಿಜಬೆತ್ ರಾಣಿಯ ಕಿರೀಟದಲ್ಲಿತ್ತು. ಇದೀಗ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಕೊಹಿನೂರ್ ವಜ್ರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಅಮೂಲ್ಯ ವಜ್ರವು ಮುಂದಿನ ದಿನಗಳಲ್ಲಿ ಇದು ಯಾರ ಪಾಲಾಗುತ್ತದೆ ಎಂಬ ಚರ್ಚೆ ಇದೀಗ ಬ್ರಿಟನ್​ನಲ್ಲಿ ಆರಂಭವಾಗಿದೆ.

  ರಾಜಕುಮಾರ ಚಾರ್ಲ್ಸ್​​ ಬ್ರಿಟನ್​ನ ರಾಜನಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕೋಹಿನೂರು ವಜ್ರ ಯಾರ ಪಾಲಾಗುತ್ತದೆ ಎನ್ನುವ ವಿಷಯ ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಪ್ರಿನ್ಸ್ ಚಾರ್ಲ್ಸ್ ಅವರು ಪಟ್ಟಕ್ಕೇರಿದ ನಂತರ ಅವರ ಪತ್ನಿ, ಡಚೆಸ್ ಆಫ್ ಕಾರ್ನವಾಲ್ ಕ್ಯಾಮಿಲಾ ಸಹಜವಾಗಿ ರಾಣಿಯ ಸ್ಥಾನ ಪಡೆಯಲಿದ್ದಾರೆ. ಇದಕ್ಕೆ ಕಾರಣ, ಈ ವರ್ಷದ ಆರಂಭದಲ್ಲಿಯೇ ರಾಣಿ ಎಲಿಜಬೆತ್ ಈ ಘೋಷಣೆ ಮಾಡಿದ್ದರು. ಇದನ್ನು ಗಣನೆಗೆ ತೆಗೆದುಕೊಂಡರೆ ಕೊಹಿನೂರ್ ವಜ್ರ ಕ್ಯಾಮಿಲಾ ಅವರ ಸುಪರ್ದಿಗೆ ಹೋಗುವ ಸಾಧ್ಯತೆ ಇದೆ.

  ಕೊಹಿನೂರ್ ವಜ್ರದ ಹಿನ್ನೆಲೆ:
  ಇದು 105.6 ಕ್ಯಾರೆಟ್​ನ ಐತಿಹಾಸಿಕ ಹಿನ್ನೆಲೆಯ ವಜ್ರವಾಗಿದೆ. ಅಮೂಲ್ಯ ಪ್ಲಾಟಿನಮ್ ಲೋಹದಿಂದ ಇದನ್ನು ತಯಾರಿಸಲಾಗಿದೆ. 1937ರಲ್ಲಿ ಕಿಂಗ್ ಜಾರ್ಜ್ -6 ಅವರ ರಾಜ್ಯಾಭಿಷೇಕದ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಪಾಲ್ಗೊಳ್ಳುವಾಗ ಕ್ವೀನ್ ಎಲಿಜಬೆತ್ (ನಂತರ ಇವರನ್ನು ಕ್ವೀನ್ ಮದರ್ ಎಂದು ಕರೆಯಲಾಯಿತು) ಧರಿಸಿದ್ದ ಪ್ಲಾಟಿನಂ ಕಿರೀಟದಲ್ಲಿ ಕೊಹಿನೂರ್ ವಜ್ರವನ್ನು ಸೇರಿಸಲಾಗಿತ್ತು.

  ರಾಜಕುಮಾರ ಫಿಲಿಪ್ ಅವರನ್ನು 1947ರ ನವೆಂಬರ್ 20ರಂದು 2ನೇ ಎಲಿಜಬೆತ್ ಮದುವೆಯಾಗಿದ್ದರು. 6ನೇ ಕಿಂಗ್ ಜಾರ್ಜ್​ ಮೃತಪಟ್ಟ ನಂತರ, 1952ರ ಫೆಬ್ರುವರಿ 6ರಂದು ಅವರು ಮಹಾರಾಣಿಯಾಗಿ ಪಟ್ಟಕ್ಕೇರಿದ್ದರು. ಅಂದಿನಿಂದ ಈ ವಜ್ರ ಅವರ ಬಳಿ ಇತ್ತು. ಪ್ರಸ್ತುತ ಈ ಕಿರೀಟವನ್ನು ಟವರ್ ಆಫ್ ಲಂಡನ್​ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

  See also  ಸರ್ಕಾರ ರಚನೆಗೂ ಮುನ್ನ ಶುರುವಾಯ್ತು ಸಚಿವ ಸ್ಥಾನಕ್ಕೆ ಸ್ಪರ್ಧೆ; ವಿವಿಧ ಸಮುದಾಯದ ನಾಗರಿಕರಿಂದಲೂ ಒತ್ತಡ

  ಅಂದಹಾಗೆ ಈ ವಜ್ರ ಪತ್ತೆಯಾಗಿದ್ದು ಭಾರತದಲ್ಲಿ. 14ನೇ ಶತಮಾನದಲ್ಲಿ ಈ ವಜ್ರ ಮೊದಲ ಬಾರಿಗೆ ಪತ್ತೆಯಾಗಿತ್ತು. 1849ರಲ್ಲಿ ಬ್ರಿಟಿಷರು ಪಂಜಾಬನ್ನು ವಶಪಡಿಸಿಕೊಂಡ ನಂತರ ಕ್ವೀನ್ ವಿಕ್ಟೋರಿಯಾ ಅವರ ಸುಪರ್ದಿಗೆ ಇದು ಸೇರಿತ್ತು. ಆಗಿನಿಂದ ಇದು ಬ್ರಿಟಿಷ್ ಕಿರೀಟದ ಆಭರಣಗಳಲ್ಲೊಂದಾಗಿದೆ. ಅಂದಿನಿಂದ ಇದು ಬ್ರಿಟಿಷ್ ರಾಜಮನೆತನದ ಕಿರೀಟದಲ್ಲಿ ಸ್ಥಾನ ಪಡೆದಿದೆ. ಕೊಹಿನೂರ್ ವಜ್ರವು ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಭಾರತವೂ ಸೇರಿದಂತೆ ನಾಲ್ಕು ದೇಶಗಳು ವಾಗ್ವಾದ ನಡೆಸುತ್ತಿವೆ.

  ಪ್ರಿನ್ಸ್ ಚಾರ್ಲ್ಸ್​ ಅವರ ಕಿಂಗ್ ಪಟ್ಟಾಭಿಷೇಕ ಸಮಯದಲ್ಲಿ ರಾಣಿ ಕ್ಯಾಮಿಲಾ ಈ ಕಿರೀಟವನ್ನು ತಮ್ಮ ತಲೆಗೆ ಧರಿಸಲಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

  ರಾಣಿ ಎಲಿಜಬೆತ್​ ನಿಧನ, ಬ್ರಿಟನ್​ನಲ್ಲಿ 10 ದಿನ ರಾಷ್ಟ್ರೀಯ ಶೋಕ: ಪ್ರಧಾನಿ ಮೋದಿ ಸಂತಾಪ

  ಅನೇಕ ಪ್ರಥಮಗಳ ಒಡತಿ ರಾಣಿ ಎಲಿಜಬೆತ್​! ಇಲ್ಲಿದೆ ಜೀವನಪಥ… ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts