More

  ಇಂಜಿನಿಯರಿಂಗ್​ ಪರೀಕ್ಷೆಯಲ್ಲೂ ಇದೆಂಥ ಗೋಲ್​ಮಾಲ್? ರಷ್ಯನ್​ ಹ್ಯಾಕರ್ಸ್​ ನೆರವು ಪಡೆದಿದ್ದ 820 ವಿದ್ಯಾರ್ಥಿಗಳು!

  ನವದೆಹಲಿ: ಪಿಎಸ್​ಐ, ಕೆಪಿಸಿಸಿ ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ ಇನ್ನೂ ತನಿಖೆ ಮುಂದುವರೆದಿರುವ ನಡುವೆಯೇ ಇದೀಗ ಆತಂಕಕಾರಿ ಎನ್ನುವಂಥ ಇನ್ನೊಂದು ವಿಷಯ ಹೊರಕ್ಕೆ ಬಂದಿದೆ. ಅದೇನೆಂದರೆ, ಜೆಇಇ ಮುಖ್ಯ ಪರೀಕ್ಷೆಯಲ್ಲಿಯೂ ಭಾರಿ ಪ್ರಮಾಣದ ಅಕ್ರಮ ನಡೆದಿರುವುದು!

  ಐಐಟಿಗಳಂತಹ ಭಾರತದ ಉನ್ನತ ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವ ಸಲುವಾಗಿ ಜೆಇಇ (Joint Entrance Examination) ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿಯೂ ಅಕ್ರಮ ನಡೆದಿದ್ದು, ರಷ್ಯಾ ಹ್ಯಾಕರ್ಸ್​ಗಳು 820ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಂಚನೆ ಮಾಡುವಲ್ಲಿ ನೆರವಾಗಿದ್ದಾರೆ ಎಂಬ ಅಂಶವನ್ನು ಸಿಬಿಐ ಹೇಳಿದೆ.

  ಸೈಬರ್​ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ರಷ್ಯಾದ ಹ್ಯಾಕರ್ ಮಿಖಾಯಿಲ್ ಶಾರ್ಗಿನ್ ಅವನನ್ನು ಇದಾಗಲೇ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಇಲ್ಲಿಯವರೆಗೆ 24 ಮಂದಿಯನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಈತ ಆತಂಕಕಾರಿಯಾಗಿರುವ ವಿಷಯವನ್ನು ಹೊರಗೆಡವಿದ್ದಾರೆ. ಸದ್ಯ 820 ವಿದ್ಯಾರ್ಥಿಗಳ ಮಾಹಿತಿ ಸಿಕ್ಕಿದ್ದು, ಇವರ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದು ಸಿಬಿಐ ಹೇಳಿದೆ.

  ಜೆಇಇ ಮುಖ್ಯ ಪರೀಕ್ಷೆಯಲ್ಲಿ ಆನ್‌ಲೈನ್ ವ್ಯವಸ್ಥೆಯನ್ನು ದುರ್ಬಳಕೆ ಮಾಡುವ ಮೂಲಕ ರಷ್ಯಾದ ಈ ಹ್ಯಾಕರ್​ಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಗಳನ್ನು ಗೊತ್ತುಪಡಿಸಿದ ಕೇಂದ್ರಗಳಲ್ಲಿ ನಿಯಂತ್ರಣ-ನಿರ್ಬಂಧಿತ ಕಂಪ್ಯೂಟರ್‌ಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಈ ಕಂಪ್ಯೂಟರ್​ಗಳನ್ನೇ ಹ್ಯಾಕ್​ ಮಾಡಿ ಅದರ “ರಿಮೋಟ್ ಆಕ್ಸೆಸ್” ಪಡೆದು ಪ್ರಶ್ನೆ ಪತ್ರಿಕೆಗಳನ್ನು ಮೊದಲೇ ತಿಳಿಯದಂತೆ ಲೀಕ್​ ಮಾಡಿ ಪರೀಕ್ಷೆ ಬರೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಪರೀಕ್ಷಾ ಸಾಫ್ಟ್​ವೇರ್​ ಅನ್ನು ವಿಶ್ವಪ್ರಸಿದ್ಧ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಒದಗಿಸಿದ್ದು, ಈ ಹ್ಯಾಕರ್​ಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.

  ಇದುವರೆಗಿನ ತನಿಖೆಯು ಹರಿಯಾಣದ ಸೋನೆಪತ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಈ ವಂಚನೆ ನಡೆದಿರುವುದು ತಿಳಿದುಬಂದಿದೆ. ಆರಂಭದಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮೋಸ ಮಾಡಿದ್ದಾರೆ ಎಂದು ನಂಬಲಾಗಿತ್ತು. ಆದರೆ ತನಿಖೆಯ ಆಳಕ್ಕೆ ಹೋದಾಗ ಸಹಸ್ರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿರುವಾಗಿ ಅಂದಾಜಿಸಲಾಗಿದ್ದು, ಸದ್ಯ 820 ವಿದ್ಯಾರ್ಥಿಗಳ ಮಾಹಿತಿ ಸಿಕ್ಕಿದೆ. (ಏಜೆನ್ಸೀಸ್​)

  ಸೈಬರ್​ ಅಪರಾಧಿಗಳಿಗೆ ಶಾಕ್​ ನೀಡಿದ ಸಿಬಿಐ: ಏಕಕಾಲದಲ್ಲಿ ಬೆಂಗಳೂರು ಸೇರಿದಂತೆ 105 ಕಡೆ ದಾಳಿ

  ಪಿಎಫ್​ಐ ಜತೆ 873 ಪೊಲೀಸ್​ ಅಧಿಕಾರಿಗಳ ನಂಟು! ಆತಂಕಕಾರಿ ವಿಷಯ ಎನ್​ಐಎ ತನಿಖೆಯಿಂದ ಬಯಲು

  ಸಂಭ್ರಮದ ಹಿಂದೆಯೇ ಬಂದೆರಗಿದ ಸಾವು! ಬಾಲ್ಯದ ಕನಸು ನನಸಾದ ಖುಷಿಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts