ನೌಕಾಪಡೆಯಲ್ಲಿ ಮತ್ತೊಂದು ಮೈಲಿಗಲ್ಲು: ಬಹು ವಿಶೇಷತೆಯ ಐಎನ್​ಎಸ್​ ವಿಕ್ರಾಂತ್ ಪ್ರಧಾನಿಯಿಂದ ಲೋಕಾರ್ಪಣೆ

blank

ಕೊಚ್ಚಿ (ಕೇರಳ): ನೌಕಾಪಡೆಗೆ ಸ್ವದೇಶಿ ‘ಐಎನ್​​ಎಸ್​ ವಿಕ್ರಾಂತ್’​ ಸೇರ್ಪಡೆಯ ಮೂಲಕ ಭಾರತ ಹೊಸದೊಂದು ಇತಿಹಾಸ ಬರೆಯಿತು. ಕೊಚ್ಚಿನ್​​ ಶಿಪ್​ಯಾರ್ಡ್​​​​ ಲಿಮಿಟೆಡ್​​​​ನಲ್ಲಿ ‘ಐಎನ್​​ಎಸ್​ ವಿಕ್ರಾಂತ್​’ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು.

262 ಮೀ ಉದ್ದ ಮತ್ತು 62 ಮೀ ಅಗಲದ ವಿಕ್ರಾಂತ್ ಹಡಗಿನಲ್ಲಿ ಸುಮಾರು 2,200 ವಿಭಾಗಗಳಿವೆ, ಸುಮಾರು 1,600 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ಇದು ಭಾರತದ ಮಹತ್ವದ ಮೈಲಿಗಲ್ಲು. ಈ ಯುದ್ಧನೌಕೆಯನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಉಕ್ಕು ಸೇರಿದಂತೆ ಕಚ್ಚಾವಸ್ತು ಹಾಗೂ ಬಿಡಿಭಾಗಗಳನ್ನು ಬಳಸುವಾಗಲೂ ದೇಶೀಯ ಕಂಪನಿಗಳಿಗೇ ಆದ್ಯತೆ ನೀಡಲಾಗಿದೆ. ಜಗತ್ತಿನ ಕೆಲವೇ ದೇಶಗಳಿಗೆ ಸ್ವತಂತ್ರವಾಗಿ ವಿಮಾನವಾಹಕ ಯುದ್ಧನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ. ವಿಕ್ರಾಂತ್ ಮೂಲಕ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಿದೆ. ಕೇರಳದಲ್ಲಿ ಪವಿತ್ರ ಓಣಂ ಹಬ್ಬದ ದಿನ ಈ ಸಾಧನೆ ಸಾಧ್ಯವಾಗಿದೆ. ಸ್ವಾವಲಂಬನೆಯ ಆಶಯವನ್ನು ವಿಕ್ರಾಂತ್ ಯುದ್ಧನೌಕೆ ಈಡೇರಿಸಿದೆ ಎಂದು ಹೇಳಿದರು.

ಐಎನ್​ಎಸ್​ ವಿಕ್ರಾಂತ್​ ಕೇವಲ ಹಡಗಷ್ಟೇ ಅಲ್ಲ, ಅದೊಂದು ತೇಲುವ ವಾಯುನೆಲೆಯೂ ಹೌದು. ಈ ಯುದ್ಧ ನೌಕೆ 13 ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಇದರಲ್ಲಿ ಉತ್ಪತ್ತಿಗುವ ವಿದ್ಯುತ್​ನಿಂದ 5,000 ಮನೆಗಳಿಗೆ ಬೆಳಕು ಕೊಡಬಹುದು. ಇದು ನಮ್ಮ ದೇಶದ ಸ್ವಾವಲಂಬನೆಯ ಪ್ರತೀಕ. ಭಾರತೀಯ ನೌಕಾಪಡೆಯು ವಿವಿಧ ಹಂತಗಳಲ್ಲಿ ಮಹಿಳೆಯರ ಸೇರ್ಪಡೆಗೆ ಅವಕಾಶ ಕಲ್ಪಿಸಿದೆ ಎಂದು ಮೋದಿ ನುಡಿದರು.

ಭಾರತವು ಐಎನ್​ಎಸ್​ ವಿಕ್ರಾಂತ್​ ಮೂಲಕ ವಸಾಹತು ಅವಮಾನಗಳನ್ನು ನಿವಾರಿಸಿಕೊಂಡಿದೆ. ನಮ್ಮ ಸಾಗರ ಹಿತಾಸಕ್ತಿಗಳನ್ನು ನಾವು ರಕ್ಷಿಸಿಕೊಳ್ಳುತ್ತೇವೆ. ಇದೇ ನೌಕೆಯಲ್ಲಿ ಸಾಕಷ್ಟು ಮಹಿಳೆಯರೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೋದಿ ನುಡಿದರು.

ವಿಕ್ರಾಂತ್ ಎಂದರೆ ವಿಜಯಶಾಲಿ ಮತ್ತು ಧೀರ ಎಂದರ್ಥ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ 2005 ಏಪ್ರಿಲ್ ತಿಂಗಳಲ್ಲಿ ನೌಕೆಗಾಗಿ ಲೋಹ ಕತ್ತರಿಸುವ ಕಾರ್ಯ ನಡೆದಿತ್ತು. ಇದರ ನಿರ್ಮಾಣಕ್ಕೆ ಅಗತ್ಯವಾದ ಯುದ್ಧನೌಕೆ ದರ್ಜೆಯ ಉಕ್ಕನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್​ಡಿಎಲ್​) ಮತ್ತು ಭಾರತೀಯ ನೌಕಾಪಡೆಯ ಸಹಯೋಗದೊಂದಿಗೆ ಪಡೆಯಲಾತ್ತು.2009ರ ಫೆಬ್ರುವರಿಯಲ್ಲಿ ಹಡಗಿನ ಕೀಲ್ ಅನ್ನು ಹಾಕಲಾಯಿತು. 2013ರ ಆಗಸ್ಟ್​ನಲ್ಲಿ ಹಡಗಿನ ಯಶಸ್ವಿ ಚಾಲನೆಯೊಂದಿಗೆ ಹಡಗಿನ ನಿರ್ಮಾಣದ ಮೊದಲ ಹಂತವು ಪೂರ್ಣಗೊಂಡಿತ್ತು. (ಏಜೆನ್ಸೀಸ್​)

VIDEO: ಸಿಎಂ ಮಮತಾ ಬಾಯಲ್ಲಿ ಆರ್​ಎಸ್​ಎಸ್​ನ ಶ್ಲಾಘನೆ- ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ!

ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲು- ಐಸಿಯುನಲ್ಲಿ ಚಿಕಿತ್ಸೆ

Share This Article

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…