
ಬೆಂಗಳೂರು: 86 ಕೋಟಿ ರೂ. ಅವ್ಯಹಾರಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ)ನ 20 ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಸರ್ಕಾರ ಏಳು ಮಂದಿಯನ್ನು ವರ್ಗಾಯಿಸಿದೆ.
2018ರಿಂದ 2021ರ ಅವಧಿಯಲ್ಲಿ ನಡೆದ ಯುಎನ್ಐಪಿ, ಕಾಪೆಕ್ಸ್, ಗಂಗಾ ಕಲ್ಯಾಣ, ನೀರು ಸರಬರಾಜು, ಓಟಿಎಂ, ಪ್ರಧಾನಮಂತ್ರಿ ಗ್ರಾಮೀಣ ವಿದ್ಯುದಿಕರಣ ಯೋಜನೆ ಸೇರಿದಂತೆ ನಾಗರಿಕರಿಕರಿಗೆ ನೇರವಾಗಿ ಸಂಬಂಧಪಟ್ಟ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟವಾಗಿತ್ತು. ಈ ಆಧಾರದಲ್ಲಿ ತಪ್ಪಿತಸ್ಥತ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಇಂಧನ ಸಚಿವ ಸುನೀಲ್ ಕುಮಾರ್ ನಿರ್ದೇಶನ ನೀಡಿದ್ದರು.
ಹೆಸ್ಕಾಂನ ಅಥಣಿ ವಿಭಾಗದಲ್ಲಿ ನಾನಾ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆಯಲಾಗಿತ್ತು. ಆದರೆ ಇದರಲ್ಲಿ ಅವ್ಯವಹಾರವಾಗಿದೆ, ಸಂಸ್ಥೆಗೆ ಆಥಿರ್ಕ ನಷ್ಟವುಂಟು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ಅನೇಕ ಸಂಘಟನೆಗಳಿಂದ ದೂರು ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ತಾಂತ್ರಿಕ ನಿರ್ದೇಶಕ, ಹಣಕಾಸು ಅಧಿಕಾರಿಗಳ ತಂಡ ಆಗಸ್ಟ್ 14ರಂದು ಸ್ಥಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾಖಾವಾರು ವರದಿ ನೀಡುವಂತೆ ಸೂಚನೆ ನೀಡಿದ್ದರ ಜತೆಗೆ ಆಂತರಿಕ ತನಿಖೆಗೆ ಸೂಚನೆ ನೀಡಲಾಗಿತ್ತು.
ತನಿಖಾ ಸಂರ್ಭದಲ್ಲಿ ಅಧಿಕಾರಿಗಳ ಕೈವಾಡದಿಂದಲೇ ಅವ್ಯವಹಾರ ಹಾಗೂ ಆಥಿರ್ಕ ನಷ್ಟವುಂಟಾಗಿರುವುದು ದೃಢಪಟ್ಟಿದೆ. ಒಟ್ಟಾರೆಯಾಗಿ 29.72ಕೋಟಿ ರೂ.ನ್ನು ಕಾಮಗಾರಿ ನಿರ್ವಹಣೆ ಮಾಡದೇ ಹಣ ಪಾವತಿ ಮಾಡಿರುವ ಗಂಭೀರ ಲೋಪ ಪತ್ತೆಯಾಗಿದೆ. ಜತೆಗೆ ಇದರಿಂದಾಗಿ ಇಲಾಖೆಗೆ 57.16ಕೋಟಿ ರೂ. ನಿಯಮ ಬಾಹಿರವಾಗಿ ವೆಚ್ಚವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಅವ್ಯವಹಾರಕ್ಕೆ ಕಾರಣರಾದ ಅಥಣಿ ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್, ನಾಲ್ವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, 12 ಶಾಖಾಧಿಕಾರಿಗಳು, ಒಬ್ಬ ಲೆಕ್ಕಾಧಿಕಾರಿ, 1 ಸಹಾಯಕ ಲೆಕ್ಕಾಧಿಕಾರಿ ಹಾಗೂ ಒಬ್ಬ ಕೇಸ್ ವರ್ಕರ್ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಸಚಿವ ಸುನೀಲ್ ಕುಮಾರ್ ನೀಡಿದ ಸೂಚನೆ ಅನ್ವಯ ಹೆಸ್ಕಾಂ ಆದೇಶ ಹೊರಡಿಸಿದೆ.
ಅವ್ಯವಹಾರಕ್ಕೆ ಪರೋಕ್ಷವಾಗಿ ಸಹಕರಿಸಿದ 1ಲೆಕ್ಕಾಧಿಕಾರಿ, ನಾಲ್ವರು ಕಿರಿಯ ತಾಂತ್ರಿಕ ಸಹಾಯಕರು, 1ಹಿರಿಯ ಸಹಾಯಕ ಹಾಗೂ ಒಬ್ಬ ಕೇಸ್ ವರ್ಕರನ್ನು ಬೇರೆಡೆಗೆ ವರ್ಗಾಯಿಸಲಾಗಿದ್ದು, ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಇಂದಿನ ಸಚಿವ ವಿ.ಸುನೀಲ್ ಕುಮಾರ್, ಧನ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ಯಾವುದೇ ಮೂಲೆಯಲ್ಲಿ ಈ ಬಗೆಯ ಘಟನೆಗಳು ನಡೆದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಂತೆ ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
VIDEO: ಮಾಸ್ಕ್ ಹಾಕಿಕೊಂಡೇ ಊಟ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ- ವಿಡಿಯೋ ವೈರಲ್