ಕಣ್ಣೆದುರೇ ಕುಟುಂಬಸ್ಥರ ಮೇಲೆ ಥರ್ಡ್‌ ಡಿಗ್ರಿ ಪ್ರಯೋಗಿಸಿದ ಪೊಲೀಸರು: ಬೆದರಿ ಯುವತಿಯ ಆತ್ಮಹತ್ಯೆ

ಫರೀದಾಬಾದ್‌ (ಹರಿಯಾಣ): ವಂಚನೆ ಪ್ರಕರಣವೊಂದರಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ಬಾಯಿ ಬಿಡಿಸಲು ಆತನ ಇಡೀ ಕುಟುಂಬಸ್ಥರ ಮೇಲೆ ಪೊಲೀಸರು ಹೀನಾಯವಾಗಿ ನಡೆಸಿಕೊಂಡಿದ್ದನ್ನು ಕಂಡು ಬೆದರಿಹೋದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫರೀದಾಬಾದ್‌ನಲ್ಲಿ ನಡೆದಿದೆ.

ರಾಜೇಂದ್ರ ಪಾರ್ಕ್ ನಿವಾಸಿ ಆಶಾ (21) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡವಳು. ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ್ದ ಪಾಲಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರಾದರೂ ಅಷ್ಟರಲ್ಲಿಯೇ ಯುವತಿ ಪ್ರಾಣ ಬಿಟ್ಟಿದ್ದಳು.

ತನ್ನ ಮಗಳ ಸಾವಿಗೆ ಪೊಲೀಸರೇ ಕಾರಣ ಎಂದುಕೊಂಡು ಯುವತಿಯು ಪಾಲಕರು ಶವವನ್ನು ಹಿಂದಕ್ಕೆ ಪಡೆದುಕೊಳ್ಳಲು ಹಿಂದೇಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಫರಿದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರ ವಿರುದ್ಧ ತನಿಖೆ ನಡೆಸಲಾಗುತ್ತಿದೆ.

ಯುವತಿಯ ಮಾವ ಸುರೇಶ್‌ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಆರೋಪಿ. ವಂಚನೆ ಪ್ರಕರಣದಲ್ಲಿ ರಾಹುಲ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ರಾಜೇಂದ್ರನ ಹೆಸರನ್ನೂ ಕೂಡ ಆತ ಹೇಳಿದ್ದ. ಈತ ಕೂಡ ತನ್ನ ಗ್ಯಾಂಗ್‌ನಲ್ಲಿ ಇರುವುದಾಗಿ ಹೇಳಿದ್ದ. ಆದರೆ ಪೊಲೀಸರು ವಿಚಾರಣೆ ಮಾಡಿದಾಗ ರಾಜೇಂದ್ರ ತಪ್ಪನ್ನು ಒಪ್ಪಿಕೊಂಡಿರಲಿಲ್ಲಿ. ಈ ಹಿನ್ನೆಲೆಯಲ್ಲಿ ಆತನ ಬಾಯಿ ಬಿಡಿಸಲು ಪೊಲೀಸರು ಥರ್ಡ್‌ ಡಿಗ್ರಿ ಪ್ರಯೋಗ ಮಾಡಿದ್ದಾರೆ. ಬೆತ್ತಲೆಗೊಳಿಸಿ ಹೊಡೆದಿದ್ದಾರೆ ಎಂಬ ಆರೋಪವಿದೆ. ಮಾತ್ರವಲ್ಲದೇ ಆತನು ಬಾಯಿ ಬಿಡದ ಕಾರಣ, ಆಶಾ ಅವರ ಕುಟುಂಬಸ್ಥರ ಮೇಲೂ ಹೀನಾಯವಾಗಿ ಪೊಲೀಸರು ನಡೆದುಕೊಂಡಿದ್ದಾರೆ.

ಇವೆಲ್ಲವನ್ನೂ ಕಣ್ಣಾರೆ ಕಂಡ ಆಶಾ ನಲುಗಿ ಹೋಗಿದ್ದಾಳೆ. ಪೊಲೀಸರು ತನಗೂ ಹೀಗೇ ಮಾಡಿದರೆ ಗತಿಯೇನು ಎಂದು ಹೆದರಿ ನೇಣಿಗೆ ಶರಣಾಗಿದ್ದಾಳೆ.
ಸದ್ಯ ಇನ್ಸ್‌ಪೆಕ್ಟರ್ ಬಸಂತ್ ಕುಮಾರ್, ಸಂದೀಪ್ ಅವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಇವರ ವಿರುದ್ಧ ಕ್ರಮಕ್ಕೆ ಭರವಸೆ ನೀಡಿದ ನಂತರ ಪಾಲಕರು ಮಗಳ ಶವವನ್ನು ವಾಪಸ್‌ ಪಡೆದುಕೊಂಡಿದ್ದಾರೆ.

ಪ್ರತಿಭಟನೆಯಲ್ಲಿಯೇ ಪಂಬಾಬ್‌ನ ‘ರೈತ’ ಮೃತಪಟ್ಟದ್ದು ನಿಜನಾ? ವೈರಲ್‌ ಫೋಟೋದ ಹಿಂದಿನ ಅಸಲಿಯತ್ತೇನು?

ಮೀಟ್‌ ಆಗದಿದ್ರೆ ಆತ್ಮಹತ್ಯೆ ಮಾಡ್ಕೋಳ್ತೇನೆ ಅಂದದ್ದಕ್ಕೆ ಹೋಟೆಲ್‌ಗೆ ಹೋ‌ಗ್ತಿದ್ದೆ… ಈಗ ಆತ ನಾಪತ್ತೆ!…

ವಿದೇಶದಿಂದ ಬಂದರು, ಕಣ್ಮರೆಯಾಗಿ ಹೋದರು! 151 ಮಂದಿಯಿಂದ ಇಡೀ ರಾಜ್ಯಕ್ಕೆ ಕಂಟಕ?

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…