ಕೋಲಂಬಿಯಾ: ಅತಿಯಾಸೆ ಗತಿಗೇಡು ಎಂದು ಹಿರಿಯರು ಹೇಳುವುದು ಸುಮ್ಮನೆ ಅಲ್ಲ ಅಲ್ಲವೆ? ಅತಿಯಾಗಿ ಆಸೆಪಟ್ಟು ಪ್ರಾಣಕ್ಕೆ ಸಂಚಕಾರ ತಂದುಕೊಂಡ ಕೋಲಂಬಿಯಾದ ಯುವಕನೊಬ್ಬನ ಕಥೆ ಇಲ್ಲಿದೆ ನೋಡಿ..
ಸುಮಾರು 25 ವರ್ಷದ ಈ ಯುವಕ ಮೀನನ್ನು ಹಿಡಿಯಲು ಹೋಗಿದ್ದಾನೆ. ಮೀನು ಸಿಗುತ್ತದೋ ಇಲ್ಲವೋ ಎಂದು ಗಾಳ ಬೀಸಿದ್ದಾನೆ. ಈತನ ಅದೃಷ್ಟಕ್ಕೆ ಒಂದು ಮೀನು ಗಾಳಕ್ಕೆ ಸಿಕ್ಕೇ ಬಿಟ್ಟಿದೆ. ಅದನ್ನು ತೆಗೆದುಕೊಂಡು ಹೋಗಿದ್ದರೆ ಪರವಾಗಿರಲಿಲ್ಲ. ಆದರೆ ಈ ಯುವಕ ಹಾಗೆ ಮಾಡಲಿಲ್ಲ. ಇಷ್ಟು ಬೇಗ ಒಂದು ಮೀನು ಸಿಕ್ಕ ಮೇಲೆ ಇನ್ನೊಂದು ಸಿಗಬಹುದು ಎಂದು ಪುನಃ ಗಾಳ ಹಾಕಿದ್ದಾನೆ.
ಆಗಲೂ ಅವನ ಅದೃಷ್ಟ ಖುಲಾಯಿಸಿದೆ. ಇನ್ನೊಂದು ಮೀನು ಗಾಳಕ್ಕೆ ಸಿಲುಕಿಬಿಟ್ಟಿದೆ. ಈತನ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ಮೊದಲು ಹಿಡಿದ ಮೀನನ್ನು ಎಲ್ಲಿ ಇಟ್ಟುಕೊಳ್ಳುವುದು ಎಂದು ಈತನಿಗೆ ತಿಳಿಯಲಿಲ್ಲ. ಕೆಳಗಡೆ ಇಟ್ಟು, ಮತ್ತೊಂದು ಮೀನನ್ನು ತೆಗೆಯಲು ಹೋದರೆ ಯಾರಾದರೂ ಅಥವಾ ಏನಾದರೂ ಬಂದು ಅದನ್ನು ತೆಗೆದುಕೊಂಡು ಹೋದರೆ ಎಂಬ ಭಯದಿಂದ ಆ ಮೀನನ್ನು ಬಾಯಲ್ಲಿ ಕಚ್ಚಿ ಇಟ್ಟುಕೊಂಡ. ಇದು ಸುಮಾರು ಏಳು ಇಂಚಿನ ಮೀನಾಗಿತ್ತು.
ಈ ಮೀನನ್ನು ಕಚ್ಚಿ ಇಟ್ಟುಕೊಂಡು ಗಾಳಕ್ಕೆ ಬಿದ್ದ ಇನ್ನೊಂದು ಮೀನನ್ನು ಹಿಡಿಯಲು ಮುಂದಾದ. ಆದರೆ ಈ ಸಮಯದಲ್ಲಿ ಅವರ ಅದೃಷ್ಟ ಕೆಟ್ಟಿತ್ತು. ಬಾಯಲ್ಲಿ ಕಚ್ಚಿ ಹಿಡಿದುಕೊಂಡಿದ್ದ ಏಳು ಇಂಚಿನ ಮೀನು ಬಾಯೊಳಗೆ ಗುಳುಂ ಎಂದು ಹೋಗಿಬಿಟ್ಟಿದೆ. ಗಂಟಲಲ್ಲಿ ಸಿಲುಕಿಕೊಂಡಿದೆ.
ಉಸಿರಾಡಲು ಸಾಧ್ಯವಾಗದ ಯುವಕ ಕೂಡಲೇ ಆಸ್ಪತ್ರೆಗೆ ಓಡಿದ. ಗಂಟಲಿನಲ್ಲಿ ಮೀನು ಸಿಕ್ಕಿ ಹಾಕಿಕೊಂಡಿದ್ದರಿಂದ ಮಾತನಾಡಲೂ ಸಾಧ್ಯವಾಗಲಿಲ್ಲ. ಕೂಡಲೇ ವೈದ್ಯರು ಆತನ ಗಂಟಲಿನಸ್ಕ್ಯಾನ್ ಮಾಡಿದ್ದಾರೆ. ಹಾಗೂ ಗಂಟಲಿನಲ್ಲಿದ್ದ ಮೀನನ್ನ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯನ್ನು 2 ದಿನಗಳ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇಡಲಾಗಿತ್ತು. ಸದ್ಯ ಜೀವಕ್ಕೆ ಅಪಾಯವಾಗಲಿಲ್ಲ.
ಮಾಲ್ ಒಳಗೆ ನುಗ್ಗಿ ಗುಂಡಿನ ದಾಳಿ- ಓರ್ವ ಗ್ರಾಹಕನ ಸಾವು, ಕೆಲವರಿಗೆ ಗಂಭೀರ ಗಾಯ
ಪ್ರೇಮಿಗಳ ದಿನದ ಮೊದಲು- ಈ ದಿನದ ನಂತರ… ಜಾಲತಾಣದಲ್ಲಿ ರಾಹುಲ್ ಗಾಂಧಿ…
ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…