ನಂದಿನಿ ನಕಲಿ ತುಪ್ಪದ ಹಿಂದಿದ್ಯಾ ‘ಮೈಮುಲ್‌’ ಕೈವಾಡ? ಅಸಲಿ ಲೇಬಲ್‌ ಬಂದದ್ಹೇಗೆ? ಪೊಲೀಸರು ಮೌನ ವಹಿಸಿದ್ದೇಕೆ?

ಮೈಸೂರು: ಕೆಎಂಎಫ್‌ನ ಪ್ರಖ್ಯಾತ ಬ್ರ್ಯಾಂಡ್‌ ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕೆಗೆ ಸಂಬಂಧಿಸಿದಂತೆ ಇದೀಗ ಭಾರಿ ಅನುಮಾನಗಳು ಹರಿದಾಡುತ್ತಿವೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಗೋದಾಮ ಮೇಲೆ ಹ್ಯೂಮನ್ ರೈಟ್ಸ್ ತಂಡದ ಉಪಾಧ್ಯಕ್ಷ ಪ್ರದೀಪ್ ನೇತೃತ್ವದಲ್ಲಿ ದಾಳಿ ಮಾಡಿದಾಗ ನಕಲಿ ತುಪ್ಪ ತಯಾರಿಸುತ್ತಿರುವುದು ತಿಳಿದು ಬಂದಿತ್ತು. ನಕಲಿ ನಂದಿನಿ ತುಪ್ಪ ತಯಾರಿಸಿ ಲೋಡ್ ಮಾಡಿ ಮೈಸೂರು ನಗರಾದ್ಯಂತ ವಿತರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ ತಂಡ ದಾಳಿ ನಡೆಸಿತ್ತು. ನಂದಿನಿ … Continue reading ನಂದಿನಿ ನಕಲಿ ತುಪ್ಪದ ಹಿಂದಿದ್ಯಾ ‘ಮೈಮುಲ್‌’ ಕೈವಾಡ? ಅಸಲಿ ಲೇಬಲ್‌ ಬಂದದ್ಹೇಗೆ? ಪೊಲೀಸರು ಮೌನ ವಹಿಸಿದ್ದೇಕೆ?