More

    ಹಾಲು ಮಾರುವ ಸೋಗಿನಲ್ಲಿ ಖೋಟಾನೋಟು ಚಲಾವಣೆ: ಬಿಜೆಪಿ ಮುಖಂಡನೇ ಕಿಂಗ್​ಪಿನ್​

    ಹುಬ್ಬಳ್ಳಿ: ಹಾಲು ಮಾರುವ ಸೋಗಿನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಬಿಜೆಪಿ ಮುಖಂಡ ಸಾಗರ್ ಕಾಶಪ್ಪ ಸೇರಿ ಮೂವರನ್ನು ಧಾರವಾಡ ಜಿಲ್ಲೆ ಕುಂದಗೋಳ ಠಾಣೆ ಪೊಲೀಸ್​​ರು ಬಂಧಿಸಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ 47 ಖೋಟಾ ನೋಟು ಮತ್ತು ಕಲರ್ ಜೆರಾಕ್ಸ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಿಜೆಪಿಯ ಗ್ರಾಮಾಂತರ ಜಿಲ್ಲೆಯ ಸಾಮಾಜಿಕ ಜಾಲತಾಣದ ಸದಸ್ಯರಾಗಿದ್ದಾನೆ ಸಾಗರ ಕಾಶಪ್ಪನವರ. ಖಚಿತ ಮಾಹಿತಿ ಮೇರೆಗೆ ಕುಂದಗೋಳ ಸಿಪಿಐ ಮಾರುತಿ ಗುಳಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕುಂದಗೋಳದಲ್ಲಿ ಹಾಲಿನ ಅಂಗಡಿ ಇಟ್ಟುಕೊಂಡಿರುವ ಸಾಗರ್, ಬೇರೆ ಕಡೆಯಿಂದ ಖೋಟಾ ನೋಟು ತಂದು ಕುಂದಗೋಳ, ಸುತ್ತಮುತ್ತ ಚಲಾವಣೆ ಮಾಡುತ್ತಿದ್ದಾನೆ. ಹಾಲಿನ ವ್ಯಾಪಾರದ ಜತೆ ಖೋಟಾ ನೋಟು ದಂಧೆ ನಡೆಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಜನದಟ್ಟಣೆ ಪ್ರದೇಶವನ್ನೇ ಆಯ್ಕೆ ಮಾಡಿ ಖೋಟಾ ನೋಟು ಚಲಾವಣೆ ಮಾಡಲಾಗುತ್ತಿತ್ತು. ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾಗಲೇ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಕುಂದಗೋಳ ಪಟ್ಟಣದ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರೋ ಮಿಲ್ಕ್ ಪಾರ್ಲರ್​ನಲ್ಲಿ ಖೋಟಾ ನೋಟು ಚಲಾಯಿಸುತ್ತಿದ್ದ ವೇಳೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅಕ್ಕ-ಪಕ್ಕದ ಮನೆಯವರ ಗಲಾಟೆಗೆ ಕಾರಣವಾಯ್ತು ಗಿಳಿ ಹಾಕ್ತಿರೋ ಶಿಳ್ಳೆ! ಮಾಲೀಕನ ವಿರುದ್ಧ ಕೇಸ್​

    ಜಾಲತಾಣದಲ್ಲಿ ಬೈಕಾಟ್​ ಬಿಸಿ ಅನುಭವಿಸ್ತಿರೋ ಆಲಿಯಾ, ಅದ್ರಿಂದ್ಲೇ ಮಾಡಿಕೊಳ್ತಿರೋ ಸಂಪಾದನೆ ಕೇಳಿದ್ರೆ ಶಾಕ್​ ಆಗ್ತೀರಾ

    ಜ್ಞಾನವಾಪಿ ಮಸೀದಿಯತ್ತ ಹೊರಟ ನೇತಾಜಿ ಮರಿ ಮೊಮ್ಮಗಳ ಬಂಧನ! ಶ್ರಾವಣ ಸೋಮವಾರಕ್ಕೆ ಸಿಗಲಿಲ್ಲ ಶಿವನ ಪೂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts