ಬೆಂಗಳೂರು: ನಂದಿನಿ ಹಾಲಿನ ದರವು ಶೀಘ್ರದಲ್ಲಿಯೇ ಮೂರು ರೂಪಾಯಿಗೆ ಏರಿಕೆಯಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಕೆಎಂಎಫ್ ಈ ಬಗ್ಗೆ ಚಿಂತನೆ ನಡೆಸಿರುವುದಾಗಿ ವರದಿಯಾಗಿತ್ತು. ಆದರೆ ಹಿಂದೊಮ್ಮೆ ಈ ಬಗ್ಗೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಲಿನ ದರ ಹೆಚ್ಚಳ ಮಾಡಲು ಕೆಎಂಎಫ್ ಮನವಿ ಮಾಡಿಕೊಂಡಿದೆ. ಆದರೆ ಪರಿಸ್ಥಿತಿಯನ್ನು ನೋಡಿಕೊಂಡು ಈ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದರು.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ಸದ್ಯ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ವಿದ್ಯುತ್ ಬಿಲ್ ಕೂಡ ಸದ್ಯದಲ್ಲಿ ಏರುವುದಿಲ್ಲ. ಆದ್ದರಿಂದ ಜನಸಾಮಾನ್ಯರು ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ ಬೊಮ್ಮಾಯಿ.
ಈ ಸಂದರ್ಭದಲ್ಲಿ ಕರೊನಾ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ವಾರಾಂತ್ಯದ ಕರ್ಫೂ ಇಲ್ಲ ಎಂದು ಮೈಮರೆಯುವುದು ಬೇಡ..ಲಾಕ್ ಡೌನ್ ಹೇರದಂತೆ ತಡೆಯುವುದು ಜನರ ಕೈಯ್ಯಲ್ಲೇ ಇದೆ…ಇವತ್ತು ಮಧ್ಯಾಹ್ನ ಅಂತಾರಾಜ್ಯ ಜಲವಿವಾದಗಳ ಪರಿಹಾರದ ಬಗ್ಗೆ ತಜ್ಞರ ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಸೆಲ್ಫಿ ಹುಚ್ಚಿಗೆ ಬೈಕ್ ಸ್ಟಂಟ್- ಸಾವು ಬದುಕಿನ ನಡುವೆ ವಿದ್ಯಾರ್ಥಿ: ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ
ಪ್ರಿಯಕರನ ಮೇಲೆ ಕೋಪಗೊಂಡು ಆತನಿಗೆ ಕಳುಹಿಸಿದಳೊಂದು ಮೆಸೇಜ್- ಮರಣದಂಡನೆ ವಿಧಿಸಿದ ಕೋರ್ಟ್!