ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿರುವ ಯುವತಿ ವಿಚಾರಣೆ ಸತತ ನಾಲ್ಕೂವರೆ ಗಂಟೆ ನಡೆಯಿತು. ಈ ಸಂದರ್ಭದಲ್ಲಿ ಯುವತಿ ತನಿಖಾಧಿಕಾರಿ ಕವಿತಾ ಅವರು ಕೇಳಿರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ.
ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ನಲ್ಲಿ ವಿಚಾರಣೆ ನಡೆಸಿದ ಎಸ್ಐಟಿ ಸತತ ನಾಲ್ಕುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಬೆಳಗ್ಗೆ 10.30ರಿಂದ ವಿಚಾರಣೆ ಆರಂಭಗೊಂಡಿತ್ತು. ತನಿಖಾಧಿಕಾರಿ ಕವಿತಾ ನಾಲ್ಕೂವರೆ ಗಂಟೆ ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಯುವತಿಯನ್ನು ಗೌಪ್ಯ ಸ್ಥಳಕ್ಕೆ ಎಸ್ ಐ ಟಿ ತಂಡ ಕರೆಯೊಯ್ದಿದೆ.
ಈ ಸಂದರ್ಭದಲ್ಲಿ ನಡೆದಿರುವ ಪ್ರಶ್ನೋತ್ತರಗಳು ಹೀಗಿವೆ:
ಎಸ್ಐಟಿ : ನೀವು ಕಿಡ್ನಾಪ್ ಆಗಿದ್ರಾ..? ನಿಮ್ಮನ್ನು ಕಿಡ್ನಾಪ್ ಮಾಡಲಾಗಿತ್ತಾ?
ಯುವತಿ : ಇಲ್ಲ,ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ,ನಾನಾಗಿಯೇ ಹೋಗಿದ್ದೆ
ಎಸ್ಐಟಿ : ಮತ್ತೆ ನಿಮ್ಮ ಪೋಷಕರು ನಿಮ್ಮನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರಲ್ಲ
ಯುವತಿ : ಅವರು ಯಾರದ್ದೋ ಒತ್ತಡದ ಮೇಲೆ ಹೀಗೆ ದೂರು ನೀಡಿದ್ದಾರೆ
ಎಸ್ಐಟಿ : ನೀವು ಇಲ್ಲಿಂದ ಹೋದ ಮೇಲೆ ಕುಟುಂಬಸ್ಥರ ಸಂಪರ್ಕ ಮಾಡಿದ್ರಾ?
ಯುವತಿ :ಹೌದು ನನ್ನ ಗೆಳೆಯ ಆಕಾಶ್ ಫೋನ್ ನಿಂದ ಇಲ್ಲಿಂದ ಹೋದ ನಂತರ ಕೆಲವೊಮ್ಮೆ ಕರೆ ಮಾಡಿದ್ದೆ,ಆಮೇಲೆ ಅವರ ಸಂಪರ್ಕವನ್ನು ನಾನು ಮಾಡಿಲ್ಲ
ಎಸ್ಐಟಿ : ನಿಮ್ಮ ಕುಟುಂಬಸ್ಥರು ಮತ್ತೆ ನೀವು ಕಿಡ್ನಾಪ್ ಆಗಿದ್ದೀರಾ ಅಂತಾನೆ ಹೇಳ್ತಿದ್ರಲ್ಲ
ಯುವತಿ :ಸಿಡಿ ಬಿಡುಗಡೆ ನಂತರ ಒಂದೆರಡು ದಿನ ಕರೆ ಮಾಡಿ ಮಾತಾಡಿದ್ದೆ,ನಂತರ ನಾನು ಕರೆ ಮಾಡಲಿಲ್ಲ,ಸ್ವಲ್ಪ ದಿನದ ಬಳಿಕ ಅವರ ಮೇಲೆ ಯಾರೊ ಒತ್ತಡ ಹಾಕಿ ದೂರು ಕೊಡಿಸಿದ್ದಾರೆ
ಎಸ್ಐಟಿ : ಕುಟುಂಬಸ್ಥರಿಗೂ ಸಂಪರ್ಕಿಸದೇ ಇದ್ದಕ್ಕಿದ್ದಂತೆ ಹೊರಟು ಹೋಗಿದ್ದು ಯಾಕೆ?
ಯುವತಿ: ನನ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿತು.ನನಗೆ ಭಯ ಆಯ್ತು.ಸಿಡಿ ಬಿಡುಗಡೆಯಿಂದ ಮನಸ್ಸಿಗೆ ತುಂಬಾನೇ ನೋವಾಯ್ತು ಹಾಗಾಗಿ ಯಾರ ಕಣ್ಣಿಗೂ ಬಿದ್ದಿಲ್ಲ.ಇಲ್ಲಿ ಇರೋದು ಬೇಡ ಎಂದು ನಿರ್ಧರಿಸಿ ನನ್ನ ಸ್ನೇಹಿತ ಆಕಾಶ್ ಜೊತೆ ಗೋವಾಗೆ ಹೋಗಿದ್ದೆ.ಅಲ್ಲಿಂದ ಬೇರೆ ರಾಜ್ಯಗಳಿಗೂ ತೆರಳಿದ್ದೆ
ಎಸ್ಐಟಿ : ಗೋವಾದಲ್ಲಿ ಹೋಗಿ ಎಲ್ಲಿ ಉಳಿದುಕೊಂಡಿದ್ರಿ?
ಯುವತಿ :ಗೋವಾದಲ್ಲಿ ನನ್ನ ಸ್ನೇಹಿತೆ ಮನೆ ಇದೆ ಅಲ್ಲಿ ಉಳಿದುಕೊಂಡಿದ್ದೆ
ಎಸ್ಐಟಿ : ಮತ್ತೆ ಅಲ್ಲಿಂದ ನಿಮ್ಮ ಊರಿಗಾದರು ಬರಬಹುದಿತ್ತಲ್ವಾ?
ಯುವತಿ :ವಿಡಿಯೋ ವೈರಲ್ ಆದ ಬಳಿಕ ನಾನು ಊರಿಗೆ ಹೋಗೊ ಸ್ಥತಿಯಲ್ಲಿ ಇರಲಿಲ್ಲ
ಎಸ್ಐಟಿ : ಯಾರಾದ್ರು ಬಂಧನದಲ್ಲಿ ನಿಮ್ಮನ್ನ ಇರಿಸಿದ್ರಾ? ನಿಮ್ಮ ತಂದೆ ತಾಯಿ ನಮ್ಮ ಮಗಳು ಬಂಧನದಲ್ಲಿದ್ದಾಳೆ ಎಂದಿದ್ದಾರೆ
ಯುವತಿ : ಇಲ್ಲ ಮೇಡಂ. ನನ್ನನ್ನು ಯಾರು ಬಂಧಿಸಿ ಇಟ್ಟಿರಲಿಲ್ಲ. ನಾನೇ ಕೆಲವರ ಸಹಾಯ ಕೇಳಿದ್ದೆ
ಎಸ್ಐಟಿ : ಕಣ್ಮರೆಯಾದ ಬಳಿ ಎರಡು ವಿಡಿಯೋ ರಿಲೀಸ್ ಮಾಡಿದ್ರಲ್ಲ. ಅದನ್ನು ಯಾರಾದ್ರೂ ಒತ್ತಡ ಹಾಕಿ ಮಾಡಿಸಿದ್ರಾ?
ಯುವತಿ : ಇಲ್ಲ,ನಾನೇ ಮಾಡಿದ್ದ ವಿಡಿಯೋ ಅದೆಲ್ಲ,ನನಗೆ ಯಾರ ಒತ್ತಡವು ಇರಲಿಲ್ಲ
ಎಸ್ಐಟಿ : ಅಜ್ಙಾತ ಸ್ಥಳದಿಂದ ವಿಡಿಯೋ ಮಾಡಿದ್ದು ಯಾಕೆ?ನೀವೆ ನೇರವಾಗಿ ಬರಬಹುದಿತ್ತಲ್ವಾ?
ಯುವತಿ : ರಮೇಶ್ ಜಾರಕಿಹೊಳಿ ದೂರು ದಾಖಲು ಮಾಡಿದ್ರಲ್ವಾ,ಅದರಲ್ಲಿ ನನ್ನನ್ನೂ ಕೂಡ ಅಪರಾಧಿ ಎಂಬಂತೆ ತೋರಿಸೊ ಯತ್ನ ಮಾಡಲಾಯ್ತು ಹಾಗಾಗಿ ವಿಡಿಯೊ ಮೂಲಕ ಸ್ಪಷ್ಟನೆ ಕೊಡಬೇಕಾಯ್ತು
ಎಸ್ಐಟಿ : ನೀವು ಬೆಂಗಳೂರಿನಿಂದ ತೆರಳಿದಾಗ ಯಾರು ನಿಮ್ಮ ಜೊತೆಯಲ್ಲಿದ್ರು
ಯುವತಿ : ನನ್ನ ಸ್ನೇಹಿತ ಆಕಾಶ್ ಬಿಟ್ಟರೆ ನನ್ನ ಜತೆ ಯಾರು ಇರಲಿಲ್ಲ
ಎಸ್ಐಟಿ : ಇಷ್ಟು ದಿನಗಳ ಕಾಲ ಹಣಕಾಸಿನ ನೆರವು ಯಾರು ನೋಡಿಕೊಂಡರು..?
ಯುವತಿ : ನಾನೆ ನನ್ನ ದುಡ್ಡನ್ನೇ ತೆಗೆದುಕೊಂಡು ಹೋಗಿದ್ದೆ
ಎಸ್ಐಟಿ : ಇಷ್ಟು ದಿನ ಯಾಕೆ ನೀವು ಎಲ್ಲಿಯೂ ಕಾಣಿಸಿಕೊಂಡಿಲ್ಲ?
ಯುವತಿ : ನನ್ನದೇ ವಿಡಿಯೋ ವೈರಲ್ ಆಗಿತ್ತು. ರಮೇಶ್ ಜಾರಕಿಹೊಳಿ ಅವರಿಂದ ಭಯ ಕೂಡ ಇತ್ತು. ಹಾಗಾಗಿ ನಾನು ಅಜ್ಙಾತ ಸ್ಥಳದಲ್ಲಿ ಇರುವ ಅನಿವಾರ್ಯತೆ ಎದುರಾಯ್ತು
ಎಸ್ಐಟಿ : ವಿಡಿಯೋ ಮಾತ್ರ ರೆಕಾರ್ಡ್ ಮಾಡ್ತಾ ಇದ್ರಿ, ರೆಕಾರ್ಡ್ ಮಾಡ್ತಾ ಇದ್ದಿದ್ದು ಯಾರು…?
ಯುವತಿ : ನನ್ನ ಸ್ನೇಹಿತರ ಮೂಲಕ ರೆಕಾರ್ಡ್ ಮಾಡಿಸ್ತಿದ್ದೆ. ಅವರು ಯಾರು ಅನ್ನೋದು ಬೇಡ. ಅವರಿಗೆ ತೊಂದರೆ ಆಗೋದು ಬೇಡ
ಎಸ್ಐಟಿ : ಹಾಗಾದ್ರೆ ನಿಮ್ಮನ್ನ ಯಾರು ಕಿಡ್ನಾಪ್ ಮಾಡಿಲ್ವಾ?
ಯುವತಿ : ಇಲ್ಲ ನಾನಾಗಿಯೇ ಹೋಗಿದ್ದು ಯಾರು ಕಿಡ್ನಾಪ್ ಮಾಡಿಲ್ಲ
ಎಸ್ಐಟಿ : ಸರಿ ಈಗ ನೀವು ತೆರಳಬಹುದು ಅಗತ್ಯ ಬಿದ್ದರೆ ವಿಚಾರಣೆಗೆ ಕರಿತಿವಿ ಬನ್ನಿ
ಯುವತಿ : ಸರಿ, ಯಾವಾಗ ಕರೆದರು ವಿಚಾರಣೆಗೆ ಬರುತ್ತೇನೆ. ನನಗೆ ನ್ಯಾಯ ಕೊಡಿಸಿ ಪ್ಲೀಸ್
‘ಆ ದಿನ’ ಮೂರ್ನಾಲ್ಕು ಆ್ಯಂಗಲ್ಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಆಗಿದ್ಯಲ್ಲಾ? ಯಾರು ಮಾಡಿದ್ರು?
ಜಾರಕಿಹೊಳಿ ಇಂದೂ ಗೈರು- ಸಿಡಿ ಯುವತಿಯನ್ನು ಎದುರಿಸಲಾಗದೇ ಸಾಹುಕಾರ್ಗೆ ಹುಷಾರ್ ತಪ್ಪಿತಾ?