ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಮಲಗು ಬಾ ಎಂದ ಎಸಿಪಿ! ಕಾಮುಕ ಪೊಲೀಸ್​ ವಜಾ

ಜೈಪುರ: ಅತ್ಯಾಚಾರಕ್ಕೊಳಗಾದ ಯುವತಿ ತನ್ನ ಮೇಲೆ ಆಗಿರುವ ಅನ್ಯಾಯದ ವಿರುದ್ಧ ದೂರು ದಾಖಲು ಮಾಡಲು ಬಂದರೆ, ಪೊಲೀಸ್​ ಅಧಿಕಾರಿ ದೂರು ದಾಖಲು ಮಾಡಬೇಕಿದ್ದರೆ ನನ್ನ ಜತೆ ಮಲಗು ಎಂದು ಹೇಳಿರುವ ಭಯಾನಕ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಈ ಕಾಮುಕ ಎಸಿಪಿಯ ಹೆಸರು ಕೈಲಾಶ್​ ಬೊಹರಾ. ಮಹಿಳಾ ದೌರ್ಜನ್ಯ ವಿರುದ್ದದ ವಿಶೇಷ ತಂಡದ ಎಸಿಪಿಯಾಗಿದ್ದ ಬೋಹರಾ ಇಂಥದ್ದೊಂದು ನೀಚ ಕೃತ್ಯ ಎಸಗಿದ್ದು, ಈತನ ವಿರುದ್ಧ ಸಂತ್ರಸ್ತೆ ಉನ್ನತ ಅಧಿಕಾರಿಗಳಲ್ಲಿ ದೂರು ದಾಖಲು ಮಾಡಿದ್ದಳು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್​ ಇಲಾಖೆ ಬೊಹರಾನನ್ನು ವಜಾ ಮಾಡಿ ಆದೇಶಿಸಿದೆ. ಈ ವಜಾ ಆದೇಶಕ್ಕೆ ರಾಜ್ಯಪಾಲರು ಕೂಡ ಅನುಮೋದನೆ ನೀಡಿದ್ದಾರೆ.

ಕಳೆದ ತಿಂಗಳು ನನ್ನ ಮೇಲೆ ಅತ್ಯಾಚಾರ ನಡೆದಿತ್ತು. ಇದರ ಬಗ್ಗೆ ದೂರು ದಾಖಲು ಮಾಡಲು ಹೋಗಿದ್ದೆ. ಆ ಸಮಯದಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲು ನನ್ನ ಜತೆ ಲೈಂಗಿಕ ಸಂಪರ್ಕ ಮಾಡು ಎಂದು ಬೊಹರಾ ಹೇಳಿರುವುದಾಗಿ ಯುವತಿ ದೂರಿದ್ದಾಳೆ. ಮೊದಲು ದೂರು ದಾಖಲು ಮಾಡಿಕೊಳ್ಳಲು ನನ್ನ ಬಳಿ ಹಣ ಕೇಳಿದ. ಆದರೆ ನನ್ನ ಬಳಿ ಹಣ ಇರಲಿಲ್ಲ, ಆಗ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.

ಯುವತಿಯ ದೂರನ್ನು ಆಧರಿಸಿ ಎಸಿಬಿ ಪೊಲೀಸರು ಬೊಹರಾನನ್ನು ಬಂಧಿಸಿದ್ದರು. ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷ ಬಿಜೆಪಿ ವಿಧಾನಮಂಡಲ ಅವೇಶನದಲ್ಲಿ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಈತ ಕಾಮುಕ ಎಸಿಪಿ ಕೆಲಸ ಕಳೆದುಕೊಂಡಿದ್ದಾನೆ.

‘ವಿಡಿಯೋ ಮಾಡಿದ್ದು ನಾನೇ… ಸಿಡಿ ವೈರಲ್​ ಆದ್ಮೇಲೆ ಗೆಳೆಯನ ಜತೆ ಗೋವಾಕ್ಕೆ ಹೋದೆ…’

ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‍ಡೌನ್ ಆಗುತ್ತಾ? ಸಚಿವ ಸುಧಾಕರ್​ ಏನು ಹೇಳಿದ್ರು ನೋಡಿ…

ಜಾರಕಿಹೊಳಿ ಇಂದೂ ಗೈರು- ಸಿಡಿ ಯುವತಿಯನ್ನು ಎದುರಿಸಲಾಗದೇ ಸಾಹುಕಾರ್​ಗೆ ಹುಷಾರ್​ ತಪ್ಪಿತಾ?

Share This Article

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

30 ದಿನಗಳಲ್ಲೇ ಸ್ಲಿಮ್ ಆ್ಯಂಡ್​ ಫಿಟ್​ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…