VIDEO: ಬಾಲಾಕೋಟ್​ ಏರ್​ಸ್ಟ್ರೈಕ್​ ಸಾಕ್ಷಿ ಕೇಳಿದವರಿಗೆ ಪಾಕ್​ ನೀಡಿದೆ ಸ್ಫೋಟಕ ಮಾಹಿತಿ- ನೀವೂ ಕೇಳಿ…

ನವದೆಹಲಿ: 2019ರ ಫೆಬ್ರುವರಿ 26, ಎಂದರೆ ಸುಮಾರು ಎರಡು ವರ್ಷಗಳ ಹಿಂದಿನ ಮಾತಿದು. ಪಾಕಿಸ್ತಾನ ಪೋಷಿತ ಉಗ್ರರ ಶಿಬಿರಗಳಿದ್ದ ಬಾಲಾಕೋಟ್‌ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಉರಿ ಸೆಕ್ಚರ್​ನಲ್ಲಿನ ಪಾಕಿಸ್ತಾನದ ಉಗ್ರರು ನಡೆಸಿದ್ದ ದಾಳಿಯಲ್ಲಿ 30 ಯೋಧರು ಹುತಾತ್ಮರಾಗಿದ್ದ ಸೇಡಿಗೆ ಪ್ರತಿಯಾಗಿ ಭಾರತ ಈ ದಾಳಿ ನಡೆಸಿತ್ತು.

ಈ ದಾಳಿಯಲ್ಲಿ ತಮಗೆ ಏನೂ ಆಗಿಲ್ಲ ಎಂದು ಪಾಕಿಸ್ತಾನ ಪೋಸ್​ ಕೊಡುತ್ತಲೇ ಬಂದಿದ್ದರೆ, ಭಾರತೀಯರಾದಿಯಾಗಿ ಹಲವರು ಉಗ್ರರು ಸತ್ತಿರುವುದಕ್ಕೆ ಸಾಕ್ಷಿ ಕೊಡಿ ಎನ್ನುತ್ತಲೇ ಇದ್ದರು. ಇದೀಗ ಪಾಕಿಸ್ತಾನವೇ ದಾಳಿಯ ಕುರಿತು ಮಾಹಿತಿ ಬಿಚ್ಚಿಟ್ಟಿದೆ. 

ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಹಾಕಿದ್ದ ಕ್ಯಾಂಪ್ ಮೇಲೆ ಭಾರತೀಯ ಸೇನೆ ಏರ್ ಸ್ಟ್ರೈಕ್ ನಡೆಸಿತ್ತು. ಈ ಕುರಿತು ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾಲಿ ಈ ದಾಳಿಯಲ್ಲಿ ತಮ್ಮ ರಾಷ್ಟ್ರ 300ಕ್ಕೂ ಅಧಿಕ ಮಂದಿಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ”ಭಾರತ ಪಾಕಿಸ್ತಾನದ ಗಡಿ ದಾಟಿ ಬಂದಿದ್ದು ನಿಜ. ಅಷ್ಟೇ ಅಲ್ಲ, 300ಕ್ಕೂ ಹೆಚ್ಚು ಉಗ್ರರನ್ನು ಆ ದಾಳಿ ವೇಳೆ ಭಾರತೀಯ ಸೇನೆ ಹತ್ಯೆಗೈದಿದೆ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು’ ಎನ್ನುವ ಮೂಲಕ ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ.

”ಬಾಲಾಕೋಟ್‌ ವಾಯುದಾಳಿಯು ನಿಜವಾದ ಅರ್ಥದಲ್ಲಿ ಭಾರತವು ಎಸಗಿದ ಯುದ್ಧದ ಕೃತ್ಯವಾಗಿದೆ. ಆದರೆ ಪಾಕಿಸ್ತಾನ ಸರಕಾರ ಮತ್ತು ಸೇನೆ ದಿಟ್ಟ ಉತ್ತರ ನೀಡುವಲ್ಲಿ ವಿಫಲವಾದವು. ಈ ವಿಚಾರದಲ್ಲಿ ದಿಟ್ಟ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲೇ ಇಲ್ಲ. ಭಾರತದ ದಾಳಿಗೆ ನಾವು ನೀಡಿದ ಪ್ರತಿಕ್ರಿಯೆಯಂತೂ ತೀರಾ ದುರ್ಬಲವಾಗಿತ್ತು” ಎಂದು ಅವರು ಹೇಳಿದ್ದಾರೆ.

ಇನ್ನು ಇದೇ ವೇಳೆ ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದ್ದು ನಾವೆ ಎಂದು ಹಿಲಾಲಿ ಒಪ್ಪಿಕೊಂಡಿದ್ದಾರೆ. ಭಾರತ ಅಂತಾರಾಷ್ಟ್ರೀಯ ಗಡಿಯನ್ನ ದಾಟಿ ದಾಳಿ ನಡೆಸಿತ್ತು. ಇದರಲ್ಲಿ 300 ಸಾವುಗಳಾಗಿದ್ದವು. ನಮ್ಮ ಗುರಿ ಅವರ ಗುರಿಗಿಂತಲೂ ವಿಭಿನ್ನವಾಗಿತ್ತು. ನಾವು ಅವರ ಹೈಕಮಾಂಡ್​ನ್ನು ಗುರಿಯಾಗಿಸಿದ್ದೆವು. ನಮ್ಮದು ನ್ಯಾಯಯುತ ಗುರಿಯಾಗಿತ್ತು. ನಾನು ಪರೋಕ್ಷವಾಗಿ ಸರ್ಜಿಕಲ್ ಸ್ಟ್ರೈಕ್​ನ್ನು ಒಪ್ಪಿಕೊಂಡಿದ್ದೇವೆ. ಅದರಲ್ಲಿ ಯಾವುದೇ ಸಾವು ನೋವಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಅಘಾ ಹಿಲಾಲಿ ಏನು ಹೇಳಿದ್ದಾರೆ ನೀವೂ ಕೇಳಿ (credit: Bharat First Jai Hind)

TAGGED:
Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…