ಬಹಮಾಸ್: ಕೆರೆಬಿಯನ್ ದೇಶದಲ್ಲಿರುವ ಬಹಮಾಸ್ ದ್ವೀಪ ಸೌಂದರ್ಯಕ್ಕೆ ಹೆಸರುವಾಸಿ. ನವ ಜೋಡಿಗಳಿಗೆ ಹೇಳಿ ಮಾಡಿಸಿದ ತಾಣವಿದು. ಇಲ್ಲಿನ ಸೌಂದರ್ಯ ಸವಿಯುವುದಕ್ಕಾಗಿಯೇ ದೇಶ- ವಿದೇಶಗಳಿಂದ ಹಲವಾರು ಜೋಡಿಗಳು ಇಲ್ಲಿ ಬರುತ್ತವೆ.
ಇಂಥದ್ದೊಂದು ದ್ವೀಪಕ್ಕೆ ಹೋಗಲು ಲಕ್ಷಾಂತರ ರೂಪಾಯಿ ಖರ್ಚು ಆಗುತ್ತದೆ. ಆದರೆ ನೀವು ಈ ದ್ವೀಪಕ್ಕೆ ಹೋಗಿ ಅಲ್ಲಿಯೇ ಉಳಿದರೆ ವರ್ಷಕ್ಕೆ 88 ಲಕ್ಷ ರೂಪಾಯಿ ಸಿಗುತ್ತದೆ ಎಂದು ಹೇಳಿದರೆ ಹೇಗಾಗಬೇಡ? ಅಷ್ಟೇ ಅಲ್ಲದೇ ಸಂಭಾವನೆ ಜತೆಗೆ, ವೈದ್ಯಕೀಯ ಸೌಲಭ್ಯ ಹಾಗೂ ಓಡಾಟಕ್ಕೆ ಕಾರನ್ನು ನೀಡಲಾಗುವುದು ಎಂದರೆ? ಇದು ಸುಳ್ಳು ಎಂದೇ ಹೇಳಬಹುದು.
ಆದರೆ ನಿಜಕ್ಕೂ ವರ್ಷಕ್ಕೆ ಇಷ್ಟೊಂದು ಪ್ರಮಾಣದ ಹಣವನ್ನು ನೀಡಲು ಈ ದ್ವೀಪದ ಮಾಲೀಕರು ತಯಾರು ಇದ್ದಾರೆ. ಏಕೆಂದರೆ, ಇದೊಂದು ಖಾಸಗಿ ದ್ವೀಪ. ಬಹಮಾಸ್‌ನ ಶ್ರೀಮಂತ ಕುಟುಂಬವೊಂದು ಇದನ್ನು ನಡೆಸುತ್ತಿದೆ. ಆದರೆ ಈ ದ್ವೀಪ ನೋಡಿಕೊಳ್ಳಲು ಅವರಿಗೆ ಈಗ ಒಂದು ಜೋಡಿ ಬೇಕಿದೆ. ಆದ್ದರಿಂದ ವರ್ಷಕ್ಕೆ 88 ಲಕಷ ರೂಪಾಯಿ ಸಂಭಾವನೆ ನೀಡಲು ಕುಟುಂಬ ತಯಾರಾಗಿದ್ದು ಇದಕ್ಕಾಗಿ ಸೂಕ್ತರನ್ನು ಹುಡುಕುತ್ತಿದೆ.
ಈ ದ್ವೀಪದ ಜತೆಗೆ, ಕುಟುಂಬವನ್ನು ಫ್ಲೋರಿಡಾ ಹಾಗೂ ನಪ್ಲೆಸ್ನಲ್ಲಿ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದು, ಅದನ್ನೂ ನೋಡಿಕೊಳ್ಳಬೇಕಿದೆ. ಜಾಹೀರಾತು ನೀಡಿದ ವಾರದೊಳಗೆ ಸಾವಿರಾರು ಅರ್ಜಿಗಳು ಬಂದಿದ್ದು, ಈ ಕುಟುಂಬವೀಗ ಫೈನಲ್ ಮಾಡಬೇಕಿದೆಯಂತೆ.
ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ
ಶ್ವಾನಗಳ ಮಾಲೀಕರೇ ಹುಷಾರ್- ಬೀದಿಗೆ ಹೋದ ನಿಮ್ಮ ನಾಯಿಯೂ ಆಗಬಹುದು ಅರೆಸ್ಟ್!
ಕರೊನಾ ರೂಲ್ಸ್ ಫಾಲೋ ಮಾಡಿ ಮದ್ವೆಯಾದರೂ ಇಲ್ಲಿ ಮನೆಬಾಗಿಲು ಬಡೀತಿದ್ದಾರೆ ಪೊಲೀಸ್ರು!