ಲ್ಯಾಂಡಿಂಗ್‌ ಆಗದೇ ಆಕಾಶದಲ್ಲೇ ಗಂಟೆಗಟ್ಟಲೆ ಹಾರಿದ ಸಂಸದ ಅನಂತ್‌ಕುಮಾರ್‌ ಇದ್ದ ವಿಮಾನ

ಹುಬ್ಬಳ್ಳಿ: ರಾಜ್ಯದ ಹಲವು ನಗರಗಳಲ್ಲಿ ಇಂದು ಕೂಡ ಧಾರಾಕಾರ ಮಳೆ ಮುಂದುವರೆದಿದೆ. ಇದರಿಂದ ಹಲವು ಕಡೆಗಳಲ್ಲಿ ವಿಮಾನ ಹಾರಾಟಗಳ ಸಂಚಾರದಲ್ಲಿಯೂ ಅಸ್ತವ್ಯಸ್ತ ಉಂಟಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ ಇಂಡಿಗೋ ವಿಮಾನವನ್ನು ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲಾಗದೆ ಆಕಾಶದಲ್ಲೇ ಕೆಲಕಾಲ ಹಾರಾಟ ನಡೆಸಬೇಕಾಯಿತು. ಇದರಿಂದ ಕೆಲಕಾಲ ಆತಂಕ ವಾತಾವರಣವೂ ಸೃಷ್ಟಿಯಾಗಿತ್ತು. ಈ ವಿಮಾನದಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರೂ ಪ್ರಯಾಣಿಸುತ್ತಿದ್ದರು. ಇವರ ಜತೆ ಇನ್ನೂ 46 ಪ್ರಯಾಣಿಕರು ಇದ್ದರು. ಈ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿ ಬೆಳಗ್ಗೆ 8:55ಕ್ಕೆ ಲ್ಯಾಂಡ್ … Continue reading ಲ್ಯಾಂಡಿಂಗ್‌ ಆಗದೇ ಆಕಾಶದಲ್ಲೇ ಗಂಟೆಗಟ್ಟಲೆ ಹಾರಿದ ಸಂಸದ ಅನಂತ್‌ಕುಮಾರ್‌ ಇದ್ದ ವಿಮಾನ