More

    ಐಷಾರಾಮಿ ಕಾರಿಗೆ ತೆರಿಗೆ ಕಟ್ಟದೇ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದ ನಟನೀಗ ಸ್ವಲ್ಪ ನಿರಾಳ

    ಚೆನ್ನೈ: ಐಷಾರಾಮಿ ಕಾರು ಆಮದು ಮಾಡಿಕೊಂಡು ಪೇಚಿಗೆ ಸಿಲುಕಿದ್ದ, ಚೆನ್ನೈ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಖ್ಯಾತ ನಟ ವಿಜಯ್‌ ಈಗ ಸ್ವಲ್ಪ ನಿರಾಳರಾಗಿದ್ದಾರೆ. ಐಷಾರಾಮಿ ಕಾರನ್ನು ಆಮದು ಮಾಡಿಕೊಂಡು ಅದಕ್ಕೆ ತೆರಿಗೆ ಕಟ್ಟದ ಕಾರಣ ಚೆನ್ನೈನ ಹೈಕೋರ್ಟ್​ ಏಕಸದಸ್ಯ ಪೀಠದಿಂದ ಛೀಮಾರಿ ಹಾಕಿಸಿಕೊಂಡು, ಒಂದು ಲಕ್ಷ ರೂಪಾಯಿ ದಂಡವನ್ನೂ ಕಟ್ಟುವ ಸ್ಥಿತಿ ಬಂದಿದ್ದ ವಿಜಯ್​ಗೆ ಇದರಿಂದ ಮದ್ರಾಸ್ ವಿಭಾಗೀಯ ಪೀಠ ಮುಕ್ತಿ ನೀಡಿದೆ.

    2012ರಲ್ಲಿ ಇಂಗ್ಲೆಂಡ್‌ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ವಿಜಯ್​ ಆಮದು ಮಾಡಿಕೊಂಡಿದ್ದರು. ಆದರೆ ಶೇ. 80ರಷ್ಟು ಪ್ರವೇಶ ತೆರಿಗೆಯನ್ನು ಕಟ್ಟದೇ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಕಂಪೆನಿಯು ನೋಟಿಸ್​ ನೀಡಿತ್ತು. ಇದನ್ನು ಪ್ರಶ್ನಿಸಿ ವಿಜಯ್​ ಕೋರ್ಟ್​ ಮೆಟ್ಟಿಲೇರಿದ್ದರು.

    ಐಷಾರಾಮಿ ಕಾರು ಕೊಂಡದ್ದೂ ಅಲ್ಲದೇ, ಅದರ ತೆರಿಗೆ ಕಟ್ಟದ ಕಾರಣ, ಏಕಸದಸ್ಯಪೀಠವು ಅವರಿಗೆ ಛೀಮಾರಿ ಹಾಕಿತ್ತು ಜತೆಗೆ ಇದನ್ನು ಪ್ರಶ್ನಿಸಿದ್ದ ಕಾರಣಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ತೆರಿಗೆ ಕಟ್ಟಲು ವಿಜಯ್​ ಹಿಂದೇಟು ಹಾಕಿದ್ದಾರೆ. ತೆರಿಗೆ ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ. ಇದು ದೇಶವಿರೋಧಿ ಮನಸ್ಥಿತಿ. ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸ್​ಗೆ ಉತ್ತರಿಸಿ ಕೂಡಲೇ ಒಂದು ವಾರದೊಳಗೆ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಈ ಆದೇಶವನ್ನು ವಿಜಯ್​ ಅವರು ಮೇಲ್ಮನವಿಯ ಮೂಲಕ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು. ಇದೀಗ ದಂಡದ ಮೊತ್ತವನ್ನು ರದ್ದು ಮಾಡಿರುವ ವಿಭಾಗೀಯ ಪೀಠವು, ಏಕಸದಸ್ಯಪೀಠ ಅವರಿಗೆ ಹಾಕಿದ್ದ ಛೀಮಾರಿ ಆದೇಶದಿಂದ ಮುಕ್ತಿ ನೀಡಿದೆ. ಇಲ್ಲದಿದ್ದರೆ ತೀರ್ಪಿನಲ್ಲಿ ಇದು ಉಲ್ಲೇಖವಾಗಿರುವ ಕಾರಣ, ವಿಜಯ್​ ಅವರ ಭವಿಷ್ಯಕ್ಕೆ ಇದೊಂದು ಕಪ್ಪುಚುಕ್ಕೆಯಾಗುತ್ತಿತ್ತು. ಆದರೆ ಅವರು ಕೂಡಲೇ ತೆರಿಗೆಯನ್ನು ಪಾವತಿಸಬೇಕು ಎಂದು ವಿಭಾಗೀಯ ಪೀಠ ಹೇಳಿದೆ.

    ಕಾರುಗಳ ಕುರಿತು ಕ್ರೇಜ್​ ಹೊಂದಿರುವ ವಿಜಯ್ ಅವರು 410 ಕೋಟಿ ರೂ. ಆಸ್ತಿಯ ಒಡೆಯ. ಅವರ ವಾರ್ಷಿಕ ಆದಾಯ 100ರಿಂದ 120 ಕೋಟಿ ಎನ್ನಲಾಗಿದೆ.

    ಮಗಳ ಲವರ್​ ಜತೆ ತಾಯಿಯ ಅಕ್ರಮ ಸಂಬಂಧ! ಈ ರಹಸ್ಯ ಭೇದಿಸಲು ಹೋದವನ ಬರ್ಬರ ಹತ್ಯೆ

    ಭಿಕ್ಷೆ ಬೇಡದೇ ಬೇರೆ ಆಯ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್​ ಭಿಕ್ಷಾಟನೆ ತಡೆಗೆ ನಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts