ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರಿನ ಮೈಸೂರು ರಸ್ತೆನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಸ್ಯಾಟ್ ಲೈಟ್ ನಿಲ್ದಾಣದ ಬಳಿ ಕ್ಯಾಂಟರ್, ಟೆಂಪೋ, ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದೆ.
ಬಿಎಂಟಿಸಿ ಹಾಗೂ ಟೆಂಪೋ ನಡುವೆ ಆಟೋ ಸಿಲುಕಿ ಆಟೋ ಸಂಪೂರ್ಣ ಜಖಂಗೊಂಡಿದೆ. ಆಟೋದಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆಗೆ ಹರಸಾಹಸ ಪಟ್ಟು ಸ್ಥಳೀಯರು ಹೊರ ತೆಗೆದಿದ್ದಾರೆ. ಅರ್ಧಗಂಟೆಗಳ ಕಾಲ ಹರಸಾಹಸದ ಬಳಿಕ ಆಟೋ ಚಾಲಕನನ್ನು ಹೊರ ತೆಗೆಯಲಾಗಿದೆ.
ಆಟೋ ಚಾಲಕನ ಸ್ಥಿತಿ ಬಹಳ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು. ಸದ್ಯಕ್ಕೆ ಚಾಲಕನ ಕಾಲುಗಳು ತುಂಡಾಗಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತದಿಂದ ಮೈಸೂರು ರಸ್ತೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸದ್ಯ ಅಪಘಾತ ಆದ ನಾಲ್ಕು ವಾಹನಗಳನ್ನು ಪೊಲೀಸರು ತೆರವು ಮಾಡುತ್ತಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಪರದಾಡುತ್ತಿದ್ದಾರೆ.
ಚಾಮರಾಜನಗರದ ದರ್ಗಾದಲ್ಲಿ ನಡೆದ ಕೊಲೆ ಹಿಂದಿರೋದು ಮಹಿಳೆ! ರಹಸ್ಯ ಭೇದಿಸಿದ ಪೊಲೀಸರು
ಬೆಂಗಳೂರಿನ ಹೋಟೆಲ್ನಲ್ಲಿ ಡ್ರಗ್ಸ್ ನಶೆಯಲ್ಲಿ ಸಿಕ್ಕಿಬಿದ್ದು ಅರೆಸ್ಟ್ ಆದ ಖ್ಯಾತ ನಟ ಇವರೇ ನೋಡಿ…