ರಿಯಲ್‌ ಎಸ್ಟೇಟ್‌ ಉದ್ಯಮಿ ಅಪಹರಣ: ₹5 ಕೋಟಿಗೆ ಬೇಡಿಕೆ

blank

ಬೆಳಗಾವಿ: ಮೂಡಲಗಿ ತಾಲ್ಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿರೊಬ್ಬರನ್ನು ಅವರ ಕೃಷಿಭೂಮಿ ಬಳಿ ಫೆ.14ರಂದು ರಾತ್ರಿ 11.30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಹಣಕ್ಕಾಗಿ ಅಪಹರಿಸಿ, ಬಿಡುಗಡೆಗಾಗಿ ₹5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.
ಬಸವರಾಜ ನೀಲಪ್ಪ ಅಂಬಿ(48) ಅಪಹರಣಕ್ಕೆ ಒಳಗಾದವು. ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಗೋಕಾಕ ತಾಲ್ಲೂಕಿನ ದಾನಾಪುರದಲ್ಲಿ ಇರುವ ಕೃಷಿ ಜಮೀನಿನ ಬಳಿ ಅವರನ್ನು ಅಪಹರಿಸಲಾಗಿದೆ.
‘ಬಸವರಾಜ ಅಂಬಿ ಅವರನ್ನು ಅಪಹರಿಸಿದ ಅಪರಿಚಿತರು, ಫೆ.15ರಂದು ಬಸವರಾಜ ಪತ್ನಿ ಶೋಭಾ ಅವರಿಗೆ ಕರೆಮಾಡಿ ₹5 ಕೋಟಿಗೆ ಬೇಡಿಕೆ ಇಟ್ಟರು. ಬಸವರಾಜ ಅವರ ಪುತ್ರ ಹುಲಿರಾಜ ಹಾಗೂ ಕೆಲವರು ನಿಪ್ಪಾಣಿಯಲ್ಲಿ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ರಸ್ತೆಯಲ್ಲಿರುವ ಹೋಟೆಲ್‌ ಬಳಿ, ಸುಮಾರು ₹10 ಲಕ್ಷ ಪಾವತಿಸಲು ಹೋಗಿದ್ದರು. ಆದರೆ, ಅಪಹರಣಕಾರರು ಬಸವರಾಜ ಅವರನ್ನು ಬಿಡುಗಡೆ ಮಾಡಲಿಲ್ಲ. ಹಣ ನೀಡಲು ಹೋಗಿದ್ದವರ ಮುಂದೆ ನೋಂದಣಿ ಸಂಖ್ಯೆ ಹೊಂದಿರದ ವಾಹನವೊಂದು ಹಾದುಹೋಯಿತು. ಅದರಲ್ಲಿ ಕೆಲವರಷ್ಟೇ ಕುಳಿತಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…