ಮಾಸ್ಕೋ: ಯೂಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಇದೀಗ ತನ್ನದೇ ನಗರವೊಂದರ ಮೇಲೆ ಬಾಂಬ್ ಸ್ಫೋಟಿಸಿದೆ. ರಷ್ಯಾದ ಯುದ್ಧ ವಿಮಾನ ಆಕಸ್ಮಿಕವಾಗಿ ಯೂಕ್ರೇನ್ ಬಳಿ ಇರುವ ತನ್ನದೇ ಬೆಲ್ಗೊರೋಡ್ ನಗರದ ಮೇಲೆ ಬಾಂಬ್ ದಾಳಿ ನಡೆಸಿದ್ದು, ಸಾಕಷ್ಟು ಹಾನಿ ಸಂಭವಿಸಿದೆ ಎಂದು ಸರ್ಕಾರಿ ಒಡೆತನದ ಟಾಸ್ ನ್ಯೂಸ್ ವರದಿ ಮಾಡಿದೆ.
ಬಾಂಬ್ ಸ್ಫೋಟದಿಂದಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 20 ಮೀಟರ್‌ಗಳಷ್ಟು ಕುಳಿ ರೂಪುಗೊಂಡಿತು ಎಂದು ಬೆಲ್ಗೊರೊಡ್‌ನ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಹೇಳಿದ್ದಾರೆ. ಅಲ್ಲದೆ, ಸ್ಫೋಟದ ಬೆನ್ನಲ್ಲೇ ತುರ್ತು ಪರಿಸ್ಥಿತಿಯನ್ನೂ ಘೋಷಿಸಿದ್ದಾರೆ.
ಇದನ್ನೂ ಓದಿ: ಕಾಟನ್ಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ; 70ಕೆಜಿ ಗಾಂಜಾ-ಪೆಡ್ಲರ್ ವಶಕ್ಕೆ
ಯೂಕ್ರೇನ್‌ನಿಂದ ಗಡಿಯುದ್ದಕ್ಕೂ ಇರುವ ಬೆಲ್ಗೊರೊಡ್ ನಗರದ ಮೇಲೆ ರಷ್ಯಾ ವಾಯುಪಡೆಯ ಸುಖೋಯ್ ಸು-34 ಯುದ್ಧ ವಿಮಾನವು ಹಾರಾಟ ನಡೆಸುವಾಗ “ಆಕಸ್ಮಿಕವಾಗಿ” ಮದ್ದುಗುಂಡುಗಳನ್ನು ವಿಮಾನ ಬಿಡುಗಡೆ ಮಾಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ವ್ಯಾಚೆಸ್ಲಾವ್ ಗ್ಲಾಡ್ಕೋವ್ ಮಾಹಿತಿ ನೀಡಿದರು.
ಘಟನೆಯಲ್ಲಿ ಒಳಗೊಂಡಿರುವ ಶಸ್ತ್ರಾಸ್ತ್ರವನ್ನು ರಷ್ಯಾ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿಲ್ಲ. ಟಾಸ್ ನ್ಯೂಸ್ ಪ್ರಕಾರ ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಸ್ಫೋಟದಲ್ಲಿ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ರಷ್ಯಾ ಹೇಳಿದೆ.
2022ರ ಫೆಬ್ರವರಿಯಲ್ಲಿ ಯೂಕ್ರೇನ್‌ನೊಂದಿಗೆ ರಷ್ಯಾ ಯುದ್ಧ ಆರಂಭಿಸಿದ್ದು, ಇಂದಿಗೂ ಮುಂದುವರಿದುಕೊಂಡು ಬಂದಿದೆ. (ಏಜೆನ್ಸೀಸ್)
ಅವನ್ಯಾರು ಎಂದು ಕೇಳಿದ್ದ ಸಿದ್ದರಾಮಯ್ಯಗೆ ಹಳೇ ಘಟನೆ ಕೆದಕಿ ತಿರುಗೇಟು ನೀಡಿದ ವಿ. ಸೋಮಣ್ಣ
ಅಕ್ರಮ ಮದರಸಾಗಳ ವಿರುದ್ಧ ಕ್ರಮ; ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ಕ್ರಮ