ಅಮೆರಿಕ-ಇರಾನ್ ಸಂಘರ್ಷದ ಹೊರತಾಗಿಯೂ ಡಾಲರ್ ಎದುರು ಚೇತರಿಕೆ ದಾಖಲಿಸಿದ ಭಾರತೀಯ ರೂಪಾಯಿ

blank

ಮುಂಬೈ: ಜಾಗತಿಕ ಮಾರುಕಟ್ಟೆ ಮೇಲೆ ಅಮೆರಿಕ-ಇರಾನ್ ಸಂಘರ್ಷದ ಕರಿನೆರಳು ವ್ಯಾಪಿಸಿದ್ದು, ಷೇರುಪೇಟೆ ಇಳಿಕೆಯ ಹಾದಿಯಲ್ಲಿದ್ದರೆ, ಕರೆನ್ಸಿ ಮಾರುಕಟ್ಟೆಯಲ್ಲೂ ತಲ್ಲಣ ಇದೆ. ಭಾರತೀಯ ರೂಪಾಯಿ ಮೇಲೂ ಇದರ ಪರಿಣಾಮ ಆಗಿದ್ದು, ಇಳಿಕೆಯಲ್ಲಿದ್ದ ರೂಪಾಯಿ ಬುಧವಾರದ ವಹಿವಾಟಿನಲ್ಲಿ ಡಾಲರ್ ಎದುರು ದಿನದ ಅಂತ್ಯಕ್ಕೆ 12 ಪೈಸೆ ಏರಿಕೆ ದಾಖಲಿಸಿ 71.70 ದರದಲ್ಲಿ ವಹಿವಾಟು ಮುಗಿಸಿದೆ.

ಇಂಟರ್ ಬ್ಯಾಂಕ್ ಫಾರಿನ್​ ಎಕ್ಸ್​ಚೇಂಜ್​ನಲ್ಲಿ ಭಾರತೀಯ ರೂಪಾಯಿ ಅಮೆರಿಕದ ಡಾಲರ್ ಎದುರು ಬೆಳಗ್ಗೆ ವಹಿವಾಟು ಆರಂಭವಾದಾಗ 72.05ರ ದರ ದಾಖಲಿಸಿತ್ತು. ಬುಧವಾರ ದಿನದ ಅಂತ್ಯಕ್ಕೆ ಡಾಲರ್ ಎದುರು 71.82ರ ದರದಲ್ಲಿ ರೂಪಾಯಿ ವಹಿವಾಟು ಮುಗಿಸಿತ್ತು. ಬುಧವಾರದ ದಿನದ ವಹಿವಾಟಿನ ವೇಳೆ ರೂಪಾಯಿ ದರ 72.07 ಮತ್ತು 71.69ರ ನಡುವೆಯೇ ನಡೆದಿತ್ತು. ಕೊನೆಗೆ 12 ಪೈಸೆ ಏರಿಕೆ ದಾಖಲಿಸಿ 71.70ರಲ್ಲಿ ವಹಿವಾಟು ಮುಗಿಸಿದೆ.

ಇನ್ನು, ಅಮೆರಿಕ- ಇರಾನ್ ಸಂಘರ್ಷದ ಕಾರಣ ಬ್ರೆಂಟ್ ಕಚ್ಚಾ ತೈಲದರ ಬ್ಯಾರೆಲ್​ಗೆ 68.34 ಡಾಲರ್ ಆಗಿತ್ತು.ಡಾಲರ್ ಸೂಚ್ಯಂಕ ಆರು ಕರೆನ್ಸಿಗಳ ವಿರುದ್ಧ ಶೇಕಡ 12 ಏರಿಕೆ ದಾಖಲಿಸಿದೆ. (ಏಜೆನ್ಸೀಸ್​) 

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…