ಮಹಾಲಿಂಗಪುರ: ರನ್ನಬೆಳಗಲಿಯಲ್ಲಿ ಫೆ.22 ಮತ್ತು ಮುಧೋಳದಲ್ಲಿ 23, 24ರಂದು ಜರುಗಲಿರುವ ರನ್ನ ವೈಭವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗದಾಯುದ್ಧ ಪ್ರಸಂಗದ ಕರ್ತೃ ಕವಿ ರನ್ನ ಜಾಗೃತಿ ರಥ ಯಾತ್ರೆಗೆ ಪಟ್ಟಣದ ಬಂದಲಕ್ಷ್ಮಿದೇವಸ್ಥಾನದ ಹತ್ತಿರ ಗುರುವಾರ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು.
ಜಿಲ್ಲಾ, ತಾಲೂಕಾಡಳಿತ ಹಾಗೂ ಸಾವಿರಾರು ರನ್ನ ಅಭಿಮಾನಿಗಳ ಸಮಕ್ಷಮ ಸ್ಥಳೀಯ ರನ್ನ ಪ್ರತಿಷ್ಠಾನ ಸದಸ್ಯರಾದ ಸಿದ್ಧರಾಮ ಶ್ರೀಗಳು ರನ್ನನ ಬೃಹತ್ ಮೂರ್ತಿಗೆ ಪೂಜೆ ಸಲ್ಲಿಸಿ ರಥ ಯಾತ್ರೆಗೆ ಪೂಜೆ ಸಲ್ಲಿಸಿದರು. ಉಸ್ತುವಾರಿ ಸಚಿವರು ಆರ್.ಬಿ. ತಿಮ್ಮಾಪೂರ ರನ್ನ ರಥ ತಂಡದ ಸದಸ್ಯರಿಂದ ರನ್ನನ ಗದೆಯನ್ನು ಹಸ್ತಾಂತರ ಮಾಡಿಕೊಂಡು ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ಮೂಲಕ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಿದರು.
ಬಂದಲಕ್ಷ್ಮೀ ದೇವಸ್ಥಾನದಿಂದ ಬೆಳಗಲಿ ಪಟ್ಟಣದ ಹೊರವಲಯದವರೆಗೂ ಶಾಲಾ, ಕಾಲೇಜು, ಸಂಘ-ಸಂಸ್ಥೆಗಳು ಮತ್ತು ಪ್ರಮುಖರು ಸೇರಿ ಸಾಗುವ ಮಾರ್ಗದುದ್ದಕ್ಕೂ ರನ್ನ ರಥಕ್ಕೆ ಭವ್ಯ ಸ್ವಾಗತ ಕೋರಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಮಖಂಡಿ ಎಸಿ ಶ್ವೇತಾ ಬೀಡಿಕರ, ರನ್ನ ವೈಭವ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಪುನೀತ, ರನ್ನ ರಥಯಾತ್ರೆ ಅಧ್ಯಕ್ಷ ಜಿಪಂ ಮಾಜಿ ಅಧ್ಯಕ್ಷ ಎಸ್ ಎಸ್. ಮಲಘಾಣ, ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗಲಿಕರ, ಮುಖ್ಯಾಧಿಕಾರಿ ಎನ್.ಎ. ಲಮಾಣಿ, ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ಶಿವನಗೌಡ ಪಾಟೀಲ, ಉದಯ ಸಾರವಾಡ, ಸದುಗೌಡ ಪಾಟೀಲ, ರಾಜು ಭಾಗವಾನ, ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ, ಸಂಗಪ್ಪ ಅಮಾತಿ, ಪ್ರವೀಣ ಪಾಟೀಲ, ಆನಂದ ಪಾಟೀಲ, ಸದುಗೌಡ ಪಾಟೀಲ, ಸಿದ್ದು ಧಡೂತಿ, ಶಿವನಗೌಡ ಪಾಟೀಲ, ಸಿ.ಎಂ.ಮಠಪತಿ, ಜಿ.ಎಸ್. ಡೋಣಿ, ಸಿದ್ದಣ್ಣ ಬಾಡಗಿ, ಸಂಗಮೇಶ ನೀಲಗುಂದ, ಆರ್.ಎಸ್. ನಿಡೋಣಿ, ಐ.ಎಂ ಧಾರವಾಡಮಠ, ಸಿದ್ದು ಸಾಂಗಲಿಕರ, ಮಲ್ಲು ಕ್ವಾನ್ಯಾಗೋಳ, ಗುರು ಗುಳೇದ, ಪ್ರಮೋದ್ ಹೊಸಪೇಟೆ, ಸಪ್ನಾ ಅನಿಗೋಳ, ಬಸವರಾಜ ಜಮಖಂಡಿ, ಈರಪ್ಪ ಕಿತ್ತೂರ, ಲಕ್ಕಪ್ಪ ಮೇಡ್ಯಾಗೋಳ, ಸದಾಶಿವ ಹೊಸಟ್ಟಿ, ಕೆ.ಬಿ. ಕುಂಬಾಳೆ, ಕೆ.ಎಂ. ದಡೂತಿ ಮುಂತಾದವರಿದ್ದರು.