More

    ವಧುವಿಲ್ಲದೇ 11 ಕಿ.ಮೀ ಓಡಿಹೋಗಿ ಮದುವೆಯಾದ ವರ: ಗೊಂದಲಕ್ಕೀಡಾಗುವ ಮುನ್ನ ಒಮ್ಮೆ ಓದಿ ಬಿಡಿ…

    ಭೋಪಾಲ್​: ಮದುವೆ ಅಂತ ಬಂದಾಗ ಓಡಿಹೋಗುವುದು ಎಂಬ ಪದ ತಪ್ಪಾದ ಅರ್ಥವನ್ನು ಕೊಡುತ್ತದೆ. ಆದರೆ ಇಂದೋರ್​ನಲ್ಲಿ ನಡೆದ ಮದುವೆ ಓಡಿಹೋಗುವುದನ್ನೇ ವಿಶೇಷವಾಗಿ ಪರಿಗಣಿಸಿದೆ.

    ಹೌದು, ಜಿಮ್​ ತರಬೇತುದಾರನಾಗಿರುವ ಇಂದೋರ್​ ನಿವಾಸಿ ನೀರಜ್ ಮಾಳವೀಯ​ ತನ್ನ ಮದುವೆಯನ್ನು ವಿಶೇಷವಾಗಿ ಮಾಡಬೇಕೊಳ್ಳಬೇಕೆಂದು ನಿರ್ಧರಿಸಿ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಾರೆ.

    ಓಡಿಹೋಗುವುದು ಎಂದರೆ ಹುಡುಗಿಯ ಜತೆಯಲ್ಲ. ಬದಲಾಗಿ ಅದೊಂದು ವಿಶೇಷ ಅಭಿಯಾನವಷ್ಟೇ. ದಸರಾ ಮೈದಾನದಿಂದ ತಮ್ಮ ಬಂಧು ಬಳಗದೊಂದಿಗೆ ಓಡಲು ಆರಂಭಿಸಿ 11 ಕಿ.ಮೀ. ದೂರದ ಸಂಗಮ್​ ನಗರದ ಮಂಟಪದಲ್ಲಿ ನೀರಜ್​ ಮದುವೆ ಆಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ನೀರಜ್​, ನನ್ನ ಧೇಯ್ಯ ಸರಳವಾಗಿದೆ. ಆರೋಗ್ಯಯುತ ಜೀವನ ನಡೆಸಬೇಕೆನ್ನುವುದು ನನ್ನ ಗುರಿಯಾಗಿದೆ. ಹೀಗಾಗಿ ಈ ಅಭಿಯಾನವನ್ನು ಆಯೋಜಿಸಲಾಯಿತು. ಜಾಗಿಂಗ್​ ಮಾಡುವ ಮೂಲಕ ವಿವಾಹದ ಸ್ಥಳವನ್ನು ತಲುಪಿ ವಧುವಿಗೆ ನೀರಜ್​ ಮಾಂಗಲ್ಯಧಾರಣೆ ಮಾಡಿದ್ದಾರೆ. ನೀರಜ್​ ಅಭಿಯಾನವನ್ನು ಅತ್ತೆ-ಮಾವ ಮತ್ತು ವಧು ಕೂಡ ಮೆಚ್ಚಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts