ಮದುವೆಯಾದ ಕೆಲವೇ ದಿನದಲ್ಲಿ ಕಾಣೆಯಾಗಿದ್ದ ಪತ್ನಿ ಮತ್ತೆ ಪತ್ತೆಯಾಗಿದ್ದನ್ನು ಕಂಡು ಪತಿಗೆ ಶಾಕ್!

ಜೈಪುರ: ಮದುವೆಯಾದ ಬಳಿಕ ನಾಪತ್ತೆಯಾಗಿದ್ದ ರಾಜಸ್ಥಾನ ಮೂಲದ ನವವಿವಾಹಿತೆಯೊಬ್ಬಳು 23 ದಿನಗಳ ಬಳಿಕ ತನ್ನ ಸ್ನೇಹಿತೆಯೊಂದಿಗೆ(ಸಲಿಂಗಿ) ಹರಿಯಾಣದಲ್ಲಿ ಕಾಣಿಸಿಕೊಂಡಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಶಹನಾಜ್​ಪುರದಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ಮದುವೆಯ ನಂತರ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ದೂರನ್ನು ದಾಖಲಿಸಿದ್ದನು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆಕೆ ಹರಿಯಾಣದ ಮನೆಸಾರ್​ನಲ್ಲಿ ತನ್ನ ಸಲಿಂಗಿ ಸ್ನೇಹಿತೆಯೊಂದಿಗೆ ಸೋಮವಾರ ಪತ್ತೆಯಾಗಿದ್ದಾಳೆ.

ತನ್ನ ಸಲಿಂಗಿ ಸ್ನೇಹಿತೆಯೊಂದಿಗೆ ಜೀವನ ನಡೆಸಲು ಜೂನ್​ 1ರಂದು ಆಕೆ ತನ್ನ ಪತಿಯ ಮನೆಯನ್ನು ತೊರೆದಿದ್ದಳು. ಕಳೆದ ನಾಲ್ಕು ವರ್ಷಗಳಿಂದ ಅವರಿಬ್ಬರು ಸಂಬಂಧದಲ್ಲಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇಬ್ಬರು ಮಹಿಳೆಯರನ್ನು ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಅವರನ್ನು ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ವಯಸ್ಕರಾಗಿರುವುದರಿಂದ ಅವರಿಗೆ ಆಯ್ಕೆಯ ಸ್ವಾತಂತ್ರ್ಯ ಇರುವುದರಿಂದ ಈ ಪ್ರಕರಣದಲ್ಲಿ ಅವರಿಗೆ ನ್ಯಾಯ ಸಿಗುವ ಸಾಧ್ಯತೆ ಇದೆ. ಅಲ್ಲದೆ, ಪೊಲೀಸರ ಬಳಿ ನವವಿವಾಹಿತೆ ನನ್ನನ್ನು ಬಲವಂತವಾಗಿ ಮದುವೆ ಮಾಡಲಾಯಿತು ಎಂದು ದೂರನ್ನು ನೀಡಿದ್ದಾಳೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *