More

    ರನ್ ಫಾರ್ ನೇಚರ್ 4ರಂದು,ವಿಶ್ವ ಪರಿಸರ ದಿನದಂಗವಾಗಿ ಆಯೋಜನೆ

    ಹುಬ್ಬಳ್ಳಿ: ನಗರದ ಕಾಟವೆ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮುಖ್ಯ ಪ್ರಾಯೋಜಕತ್ವ ಹಾಗೂ ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಸುಂಧರಾ ಫೌಂಡೇಷನ್ ಹಾಗೂ ವೀ ಕೇರ್ ಫೌಂಡೇಷನ್ ವತಿಯಿಂದ ಪರಿಸರ ಸಂರಕ್ಷಣೆಗಾಗಿ “ರನ್ ಫಾರ್ ನೇಚರ್’ ನಡಿಗೆ ಕಾರ್ಯಕ್ರಮವನ್ನು ಜೂನ್ 4ರಂದು ಬೆಳಗ್ಗೆ 6ಕ್ಕೆ ಆಯೋಜಿಸಲಾಗಿದೆ.

    ಕನ್ನಡದ ನಂಬರ್ 1 ಪತ್ರಿಕೆ “ವಿಜಯವಾಣಿ’ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಿರುವ ರನ್ ನಗರದ ತೋಳನಕೆರೆ ಹತ್ತಿರ ಆರಂಭವಾಗಿ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಸಂಚರಿಸಲಿದೆ. ಆಸಕ್ತರು 6 ಕಿ.ಮೀ. ಹಾಗೂ 3 ಕಿ.ಮೀ. ವಿಭಾಗದಲ್ಲಿ ಪಾಲ್ಗೊಳ್ಳಬಹುದು.

    ಹುಬ್ಬಳ್ಳಿ ಫಿಟ್ನೆಸ್ ಕ್ಲಬ್ ಸಹಯೋಗ ನೀಡಿದ್ದು, ಸ್ವರ್ಣಾ ಗ್ರುಪ್ ಆಫ್ ಕಂಪನೀಸ್, ಎಸ್.ಸಿ. ಶೆಟ್ಟರ್ ಆ್ಯಂಡ್ ಸನ್ಸ್ ಪೆವೇಟ್ ಲಿಮಿಟೆಡ್, ಪಂಚಾಮೃತ ಡೀಲಕ್ಸ್ ರೈಸ್ ಸಹ ಪ್ರಾಯೋಜಕತ್ವ ಹಾಗೂ ಹಲವು ಸಂಸ್ಥೆಗಳು ಈ ನಡಿಗೆಗೆ ಪ್ರಾಯೋಜಕತ್ವ ವಹಿಸಿವೆ.

    ಮಣ್ಣು ಸಂರಕ್ಷಣೆ:
    ಖ್ಯಾತ ಪರಿಸರವಾದಿ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಹಾಗೂ ಟ್ರೀ ಡಾಕ್ಟರ್ ಎಂದೇ ಖ್ಯಾತರಾದ ಬೆಂಗಳೂರಿನ ವಿಜಯ ನಿಶಾಂತ ಅವರು ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವರು.
    ಮಣ್ಣು ಸಂರಕ್ಷಣೆಯ ಉದ್ದೇಶದಿಂದ 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುತ್ತಿದೆ.

    ಮನೆ ಆವರಣ, ಬಡಾವಣೆಗಳ ಉದ್ಯಾನದಲ್ಲಿ ಸಸಿ ನೆಟ್ಟು ಪೋಷಿಸಲಾಗುತ್ತದೆ. ಇದಕ್ಕಾಗಿ ಉಚಿತವಾಗಿ ಸಸಿ ನೀಡಲಾಗುತ್ತದೆ. ಆಸಕ್ತ ಮನೆ ಮಾಲೀಕರು, ಉದ್ಯಾನಗಳ ನಿರ್ವಹಣೆ ಮಾಡುವವರಿಗೆ ಇವುಗಳ ಜವಾಬ್ದಾರಿ ನೀಡಲಾಗುತ್ತದೆ.

    ಮನೆ ಆವರಣದಲ್ಲಿ ದಾಸವಾಳ, ತುಳಸಿ, ಕರಿಬೇವು, ಪೇರು, ಅಲೋವೇರಾ, ಪಾರಿಜಾತ, ಸಂಪಿಗೆ, ಲಿಂಬೆ, ಬೆಟ್ಟದ ನೆಲ್ಲಿ, ಕಡಗೋಲು ನೆಲ್ಲಿ ಸಸಿ ಹಚ್ಚಬಹುದು. ಉದ್ಯಾನದಲ್ಲಿ ಹೊಂಗೆ, ಬಸವನ ಪಾದ, ಕದಂಬ, ತಪಸೆ, ನೀರಲ, ಬೇವು ಮುಂತಾದ ಗಿಡಗಳನ್ನು ಬೆಳೆಸಬಹುದು.

    ಅವಳಿನಗರದ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸಿ ಎಲ್ಲೆಡೆ ಹಸಿರು ಕಾಣುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು ಮೂರು ತಿಂಗಳು ನಿರಂತರವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ವಸುಂಧರಾ ಫೌಂಡೇಷನ್ ನ ಮೇಘರಾಜ ಕೆರೂರು ತಿಳಿಸಿದರು.

    ನಾಗರಿಕರಲ್ಲಿ ಪರಿಸರ ಪ್ರಜ್ಞೆ ಮೂಡಬೇಕು, ಪ್ರತಿಯೊಬ್ಬರೂ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಬೇಕು. ನೀರು ಉಳಿಸಬೇಕು, ಮಣ್ಣಿನ ಸಂರಕ್ಷಣೆಯಾಗಬೇಕು. ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕು. ಹುಬ್ಬಳ್ಳಿ ಧಾರವಾಡ ಗ್ರೀನ್ ಸೀಟಿ ಆಗಬೇಕು ಎಂಬ ಉದ್ದೇಶದಿಂದ ಜಾಗೃತಿ ಆಂದೋಲನ ಕೈಗೊಳ್ಳಲಾಗಿದೆ ಎಂದು ಆಯೋಜಕರಾದ ಚನ್ನು ಹೊಸಮನಿ, ಗಂಗಾಧರ ಗುಜಮಾಗಡಿ ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts