More

    ಇಂದಿನಿಂದ ಮಿಸ್ಟರ್ ವರ್ಲ್ಡ್ ಪವನ್ ಓಟ 

    ಬೆಂಗಳೂರು:  ಮಿಸ್ಟರ್ ವರ್ಲ್ಡ್ ಪವನ್ ಶೆಟ್ಟಿ ಜ. 3ರಂದು ಚಿತ್ರಮಂದಿರಗಳಲ್ಲಿ ಓಡಲಿದ್ದಾರೆ. ಅಂದರೆ ಅವರ ಅಭಿನಯದ ‘ರನ್ 2’ ಸಿನಿಮಾ ಶುಕ್ರವಾರ ಬಿಡುಗಡೆ ಆಗುತ್ತಿದೆ. 2015ರಲ್ಲಿ ಮಿಸ್ಟರ್ ವರ್ಲ್ಡ್ ಆಗುವ ಜತೆಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಪವನ್ ಶೆಟ್ಟಿ, ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

    ನಾಯಕನ ಪ್ರಯಾಣದ ವೇಳೆ ಹುಡುಗಿಯೊಬ್ಬಳ ಕೋರಿಕೆಗೆ ಸ್ಪಂದಿಸಿದ್ದಕ್ಕೆ ಏನೇನು ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಆತ ಅವನ್ನೆಲ್ಲ ಎದುರಿಸಿ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರಕಥೆ. ನಿರ್ದೇಶಕ ಬಿ.ಎಸ್.ಸಂಜಯ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ಮುಂಬೈ ಬೆಡಗಿ ತಾರಾ ಶುಕ್ಲ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕರೇ ಬಂಡವಾಳ ಹೂಡುವ ಮೂಲಕ ನಿರ್ವಪಕರಾಗಿದ್ದಾರೆ. ಎಸ್​ಪಿಬಿ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾದಲ್ಲಿ ಕುರಿರಂಗ, ಜನಾರ್ದನ್, ಮಹೇಶ್​ಕುಮಾರ್ ಕುಮಟ ಮತ್ತಿತರರು ಅಭಿನಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts