ಐಡಿ ಕಾರ್ಡ್ ಇಲ್ಲದೆ ಫೆಡರರ್​ಗೂ ನೋ ಎಂಟ್ರಿ!

ಮೆಲ್ಬೋರ್ನ್: 20 ಗ್ರಾಂಡ್ ಸ್ಲಾಂ ಪ್ರಶಸ್ತಿ, 6 ಬಾರಿ ಮೆಲ್ಬೋರ್ನ್ ಪಾರ್ಕ್​ನಲ್ಲೇ ಪ್ರಶಸ್ತಿ ಗೆಲುವು, ವಿಶ್ವದಾಖಲೆಯ 310 ವಾರಗಳ ಕಾಲ ವಿಶ್ವ ನಂ. 1 ಪಟ್ಟ ಅಲಂಕರಿಸಿರುವ ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಯಾವ ಕ್ರೀಡಾಪ್ರೇಮಿಗೆ ಗೊತ್ತಿಲ್ಲ ಹೇಳಿ? ಆದರೆ, ಐಡಿ ಕಾರ್ಡ್ ಇಲ್ಲದಿದ್ದರೆ ಅವರಿಗೂ ಆಸ್ಟ್ರೇಲಿಯನ್ ಓಪನ್​ನ ಲಾಕರ್ ರೂಮ್ೆ ಎಂಟ್ರಿ ಸಿಗುವುದಿಲ್ಲ! ಯಾಕೆಂದರೆ ಟೂರ್ನಿಯ ಭದ್ರತೆ ಅಷ್ಟೊಂದು ಬಿಗಿಯಾಗಿದೆ. ಟೂರ್ನಿಯ ಆಟಗಾರರು, ಕೋಚ್, ಅಧಿಕಾರಿಗಳಿಗೆ ನೀಡಲಾಗುವ ಗುರುತುಪತ್ರ ಇಲ್ಲದೆ ಲಾಕರ್ ರೂಮ್ ಪ್ರವೇಶಿಸಲು ಯತ್ನಿಸಿದ ಫೆಡರರ್​ರನ್ನು ಭದ್ರತಾ ಸಿಬ್ಬಂದಿ ತಡೆದ ವಿಡಿಯೋ ಈಗ ವೈರಲ್ ಆಗಿದೆ. ಸಿಬ್ಬಂದಿ ತಡೆದಾಗ ತಾಳ್ಮೆಯಿಂದಲೇ ವರ್ತಿಸಿರುವ ಫೆಡ್, ತಮ್ಮ ಕೋಚಿಂಗ್ ಬಳಗದ ಸದಸ್ಯರು ಬಂದು ಐಡಿ ತೋರಿಸಿದ ಬಳಿಕವೇ ಲಾಕರ್ ರೂಮ್ ಪ್ರವೇಶಿಸಲು ಅವಕಾಶ ಪಡೆದರು. -ಪಿಟಿಐ