VIDEO| ಮರಿ ಟೈಗರ್​ ‘ರಗಡ್’ ಲುಕ್​ಗೆ ಅಭಿಮಾನಿಗಳು ಫಿದಾ: ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​

ಬೆಂಗಳೂರು: ನಟ ವಿನೋದ್​ ಪ್ರಭಾಕರ್ ಪಕ್ಕಾ​ ‘ರಗಡ್’ ಲುಕ್​​ನಲ್ಲಿ ಮತ್ತೊಮ್ಮೆ ಪ್ರವೇಶ ನೀಡಿದ್ದಾರೆ. ಈ ಬಾರಿ 8 ಪ್ಯಾಕ್ ಮಾಡ್ಕೊಂಡು ಮಾಸ್​ ಅವತಾರದಲ್ಲಿ ಮರಿ ಟೈಗರ್ ಅಖಾಡಕ್ಕೆ ಇಳಿದಿದ್ದಾರೆ.

ರಗಡ್ ಟೈಟಲ್​​ಗೆ ತಕ್ಕಂತೆ ಟ್ರೇಲರ್ ತುಂಬಾನೇ ರಗಡ್ ಆಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ವಿನೋದ್​ಗೆ ನಾಯಕಿಯಾಗಿ ಚೈತ್ರಾ ರೆಡ್ಡಿ ಅಭಿನಯಿಸಿದ್ದು, ಮಹೇಶ್ ಗೌಡ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇಂದು ಬಿಡುಗಡೆಯಾಗಿರುವ ರಗಡ್​ ಚಿತ್ರದ ಟ್ರೇಲರ್ ಅನ್ನು​ ಈಗಾಗಲೇ ಯೂಟ್ಯೂಬ್​ನಲ್ಲಿ 34 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಟ್ರೇಲರ್​ ನೋಡಿದವರು ಇದು ಪಕ್ಕಾ ಮಾಸ್​ ಚಿತ್ರವಾಗಿದ್ದು, ಮನರಂಜನೆ ಖಂಡಿತವಾಗಿ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)