ರುದ್ರಾಪುರ: ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಿ

ರುದ್ರಾಪುರ: ಗುಣಮಟ್ಟದ ಶಿಕ್ಷಣ ಎಂದರೆ ಕೇವಲ ಓದಿ, ಬರಹಕ್ಕೆ ಸೀಮಿತವಲ್ಲ. ಆದರೆ, ತಮ್ಮ ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ರಕ್ಷಿಸಬೇಕು ಎಂದು ರುದ್ರಾಪುರ ಪರಿವರ್ತನ ಸಂಸ್ಥೆ ಅಧ್ಯಕ್ಷ ಸುನೀಲ ಜಮನಾಳ ಹೇಳಿದ್ದಾರೆ.

ಸಮೀಪದ ಕಲಕುಪ್ಪಿ ಗ್ರಾಮದ ಪರಿವರ್ತನ ಸಂಸ್ಥೆಯ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 2018-19ನೇ ವಿದ್ಯಾರ್ಥಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಸಹ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು ಎಂದರು. ಜಿಪಂ ನಿಂಗಪ್ಪ ಅರಕೇರಿ, ಎಸ್.ಬಿ.ವಾಲಿ, ಗ್ರಾ.ಪಂ. ಸದಸ್ಯ ಮಲ್ಲಪ್ಪ ಅರಕೇರಿ, ರಮೇಶ ಗೊಂಗಡಿ, ಬಿ.ಎಫ್.ಶಿರೋಮನಿ, ಎಪಿಎಂಸಿ ಸದಸ್ಯ ಭರಮಪ್ಪ ಸತ್ಯನ್ನವರ, ಎಸ್.ಎಂ.ಹೂಗಾರ, ಮಲಗೌಡ ಪಾಟೀಲ, ಬಸವರಾಜ ಪಾಟೀಲ, ಮಹಾಂತೇಶ ಮೋರೆ, ಕಾಶೀಮ್ ಜಮಾದಾರ, ಮಲ್ಲಪ್ಪ ಹುನಕುಪ್ಪಿ, ಸಂತೋಷ ಪಾಟೀಲ ಇತರರು ಇದ್ದರು.