More

    ರಾಯಬಾಗ: ಆರ್‌ಟಿಒ ಕಚೇರಿ ಪ್ರಾರಂಭಿಸಿ

    ರಾಯಬಾಗ: ತಾಲೂಕನ್ನು ಉದ್ದೇಶಿತ ಅಥಣಿ ರಸ್ತೆ ಸಾರಿಗೆ ಅಧಿಕಾರಿಗಳ ಕಾರ್ಯಾಲಯಕ್ಕೆ ಸೇರಿಸುವುದನ್ನು ಕೈಬಿಡಬೇಕು. ಮತ್ತು ರಾಯಬಾಗ ಪಟ್ಟಣದಲ್ಲಿ ರಸ್ತೆ ಸಾರಿಗೆ (ಆರ್‌ಟಿಒ) ಕಾರ್ಯಾಲಯ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಸ್ಥಳೀಯ ವಕೀಲರ ಸಂಘದ ಸದಸ್ಯರು ಶನಿವಾರ ಪಟ್ಟಣದ ಝೇಂಡಾ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

    ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಮಾತನಾಡಿ, ಅಥಣಿ ಪಟ್ಟಣ ರಾಯಬಾಗದಿಂದ ಸುಮಾರು 55 ಕಿ.ಮೀ. ದೂರದಲ್ಲಿರುವುದರಿಂದ ಅಥಣಿ ಪಟ್ಟಣದಲ್ಲಿ ಪ್ರಾರಂಭಿಸಲಿರುವ ಆರ್‌ಟಿಒ ಕಾರ್ಯಾಲಯಕ್ಕೆ ಹೋಗಿ ಬರಲು ಸಾರ್ವಜನಿಕರಿಗೆ ತೊಂದರೆಯಾಗುವುದರ ಜತೆಗೆ ಸಮಯ, ಹಣವು ವ್ಯರ್ಥವಾಗುತ್ತದೆ. ರಾಯಬಾಗ ಪಟ್ಟಣದಲ್ಲಿ ಆರ್‌ಟಿಒ ಕಾರ್ಯಾಲಯ ಪ್ರಾರಂಭಿಸಿ ತಾಲೂಕಿನ ಜನರಿಗೆ ಅನುಕೂಲ ಮಾಡಿಕೊಡಬೇಕು. ಅದು ಸಾಧ್ಯವಾಗದಿದ್ದರೆ 25 ಕಿ.ಮೀ. ಅಂತರದಲ್ಲಿರುವ ಚಿಕ್ಕೋಡಿ ಪಟ್ಟಣದಲ್ಲಿರುವ ಆರ್‌ಟಿಒ ಅಧಿಕಾರಿಗಳ ಮೂಲಕ ರಾಯಬಾಗ ತಾಲೂಕಿನ ವಾಹನಗಳ ನೋಂದಣಿ, ತೆರಿಗೆ ಪಾವತಿ ಹಾಗೂ ಚಾಲನಾ ಪತ್ರ ಪೂರೈಕೆ ಆಗುವಂತೆ ಕ್ರಮಕೈಗೊಳ್ಳಬೇಕು.

    ಜತೆಗೆ ಸದ್ಯ ಇರುವಂತೆ ಚಿಕ್ಕೋಡಿ ಆರ್‌ಟಿಒ ಕಾರ್ಯಾಲಯ ವ್ಯಾಪ್ತಿಯಲ್ಲಿ ರಾಯಬಾಗ ತಾಲೂಕನ್ನು ಮುಂದುವರಿಸಬೇಕು ಎಂದು
    ಎಂದು ಆಗ್ರಹಿಸಿದರು.  ಮನವಿಗೆ ಸಾರಿಗೆ ಸಚಿವರು ಮತ್ತು ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ತಾಲೂಕಿನ ಸಂಘಟನೆಗಳು ಮತ್ತು ಸಾರ್ವಜನಿಕರು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನ್ಯಾಯವಾದಿ ಟಿ.ಕೆ.ಶಿಂಧೆ ಮಾತನಾಡಿದರು.

    ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು. ಪ್ರತಿಭಟನೆಯಿಂದ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ವಾಹನ ಸವಾರರು ಪರದಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಂ.ಮಡಿವಾಳ, ಕಾರ್ಯದರ್ಶಿ ಆರ್.ಎಸ್.ಹೊಳೆಪ್ಪಗೊಳ, ಆರ್.ಎಸ್.ಶಿರಗಾವೆ, ವಿ.ಎಸ್.ಪೂಜಾರಿ, ಆರ್.ಟಿ.ನಾಗರಾಳೆ, ಎ.ಬಿ.ಮಂಗಸೂಳೆ, ಎಸ್.ಕೆ.ರೆಂಟೆ, ಕೆ.ಆರ್.ಕೋಟಿವಾಲೆ, ಟಿ.ಕೆ.ಶಿಂಧೆ, ಆರ್.ಬಿ.ಪವಾರ, ಎನ್.ಎಸ್.ಒಡೆಯರ,
    ಎನ್.ಎಂ.ಯಡವನ್ನವರ, ಆರ್.ಎಚ್.ಗೊಂಡೆ, ಬಿ.ಬಿ.ಈಟಿ, ಪಿ.ಆರ್.ಗುಡೊಡಗಿ, ಬಿ.ಎನ್.ಬಂಡಗಾರ ಇತರರು ಉಪಸ್ಥಿತರಿದ್ದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts