‘ಶೂಟೌಟ್​ ಮಾಡಿ’ ಹೇಳಿಕೆ ಆಧಾರದ ಮೇಲೆ ಸಿಎಂ ವಿರುದ್ಧ ಮಾನವಹಕ್ಕು ಉಲ್ಲಂಘನೆ ಕೇಸು ದಾಖಲು

ಬೆಂಗಳೂರು: ಮಂಡ್ಯದ ಜೆಡಿಎಸ್​ ಮುಖಂಡ ತೊಪ್ಪನಹಳ್ಳಿ ಪ್ರಕಾಶ್​ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಪೊಲೀಸ್​ ಅಧಿಕಾರಿಗಳೊಂದಿಗೆ ಮಾತನಾಡನಾಡುತ್ತಾ ಶೂಟೌಟ್​ ಮಾಡಿ ಎಂದು ಹೇಳಿದ್ದರ ವಿರುದ್ಧ ಕೇಸು ದಾಖಲಾಗಿದೆ.

ಆರ್​ಟಿಐ ಕಾರ್ಯಕರ್ತರ ನರಸಿಂಹಮೂರ್ತಿ ಎಂಬುವವರು ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಮುಖ್ಯಮಂತ್ರಿ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಡಿ.24 ರಂದು ಮಧ್ಯಾಹ್ನ ಮಂಡ್ಯದ ಮದ್ದೂರಿನಲ್ಲಿ ತೊಪ್ಪಹಳ್ಲಿ ಪ್ರಕಾಶ್ ಅವರನ್ನು ಅವರ ಕಾರಿನಲ್ಲಿಯೇ ಹತ್ಯೆಗೈಯಲಾಗಿತ್ತು. ವಿಜಯಪುರದಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಕಾಶ್​ ಅವರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್​ ಅಧಿಕಾರಿಗಳೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ,”ಅವರು ಯಾರಾಗಿದ್ದರೂ ಸರಿ ಶೂಟೌಟ್​ ಮಾಡಿ ತಲೆ ಕೆಡಿಸಿಕೊಳ್ಳುವುದಿಲ್ಲ,”ಎಂದು ಮೌಖಿಕ ಆದೇಶ ನೀಡಿದ್ದರು.

ಸಿಎಂ ಅವರ ಅವರ ಮಾತಿಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮುಂದುವರಿದು, ಇಂದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.