ಮೋದಿ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾವಣೆ ಪ್ರಚಾರ: ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್ ಅತೃಪ್ತಿ

ಮಡಿಕೇರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾವಣಾ ಪ್ರಚಾರ ನಡೆಸುತ್ತಿರುವುದಕ್ಕೆ ಆರ್‌ಎಸ್‌ಎಸ್‌ ಮುಖಂಡ ಡಾ. ಪ್ರಭಾಕರ ಭಟ್ ಅತೃಪ್ತಿ ವ್ಯಕ್ತ ಪಡಿಸಿದ್ದಾರೆ.

ಸಂಘದಲ್ಲಿ ವ್ಯಕ್ತಿ ಪೂಜೆ ಮಾಡುವುದಿಲ್ಲ. ದೇಶದ ಭವಿಷ್ಯದ ಹಿತಾಸಕ್ತಿಯಿಂದ ವ್ಯಕ್ತಿ ಆರಾಧಾನೆ ಸರಿ ಅಲ್ಲ ಎಂದು ಶನಿವಾರ ಮಡಿಕೇರಿ ಬಾಲಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಷ್ಟ್ರದ ಚುನಾವಣೆ ಆಗಿರುವುದರಿಂದ ಪ್ರಧಾನಿ ಮತ್ತು ಅವರ ಸಚಿವ ಸಂಪುಟದವರು ಮಾಡಿರುವ ಕೆಲಸದ ಚರ್ಚೆ ನಡೆಯಬೇಕು. ಬಿಜೆಪಿ ಅಭ್ಯರ್ಥಿಗಳು ತಾವು ಮಾಡಿರುವ ಕೆಲಸದ ಆಧಾರದಲ್ಲಿ ಮತ ಕೇಳಬೇಕು. ದೇಶ ಭಕ್ತರು ಹಾಗೂ ದೇಶ ವಿರೋಧಿಗಳ ನಡುವೆ ಚುನಾವಣೆ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.

Leave a Reply

Your email address will not be published. Required fields are marked *