More

    ಐದು ದಿನಗಳ ಆರ್​ಎಸ್​ಎಸ್​ ಅಖಿಲ ಭಾರತ ಕಾರ್ಯನಿರ್ವಾಹಕ ಸಭೆ ಮೋಹನ್​ ಭಾಗವತ್ ಅಧ್ಯಕ್ಷತೆಯಲ್ಲಿ​ ಆರಂಭ

    ನವದೆಹಲಿ: ಐದು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ್​ ಸಂಘದ ಅಖಿಲ ಭಾರತ ಕಾರ್ಯನಿರ್ವಾಹಕಾ ಸಭೆಯು ಗುರುವಾರದಿಂದ ಮಧ್ಯಪ್ರದೇಶದ ಇಂದೋರ್​ನಲ್ಲಿ ಆರಂಭವಾಗಿದ್ದು, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದಾರೆ.

    ರಾಷ್ಟ್ರದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶದೆಲ್ಲಡೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಒಂದು ಸಭೆ ಮಹತ್ವ ಪಡೆದುಕೊಂಡಿದೆ.

    ಆರ್​ಎಸ್​ಎಸ್​ ಸಂಘವು ಮಾಳ್ವಾ ವಲಯದ ಇಂದೋರ್​ನಲ್ಲಿ ಸಾಕಷ್ಟು ಪ್ರಭಾವ ಹೊಂದಿರುವುದಿಂದ ಸಾಕಷ್ಟು ಸಭೆಗಳು ಇಲ್ಲಯೇ ನಡೆಯುತ್ತದೆ. ಮೂಲಗಳ ಪ್ರಕಾರ ಅಖಿಲ ಭಾರತ ಕಾರ್ಯನಿರ್ವಾಹಕ ಸಭೆ ಮೊದಲು ಮೂರು ದಿನ ನಡೆಯಲಿದೆ. ಬಳಿಕ ಎಲ್ಲಾ 56 ಅಂಗಸಂಸ್ಥೆಗಳ ಉನ್ನತ ಅಧಿಕಾರಿಗಳು ಮುಂದಿನ ಎರಡು ದಿನಗಳವರೆಗೆ ರಾಷ್ಟ್ರೀಯ ನಾಯಕತ್ವದೊಂದಿಗೆ ಅಧಿವೇಶನ ನಡೆಸಲಿದ್ದಾರೆ. ಈ ಅಧಿವೇಶ ಮಧ್ಯಪ್ರದೇಶದ ಆರ್​ಎಸ್​ಎಸ್​ ಘಟಕದ ಪ್ರಚಾರಕರಿಗೆ ಮಾತ್ರ ಸೀಮಿತವಾಗಿರುತ್ತದೆ.

    ಸಭೆಯಲ್ಲಿ ಆರ್​​ಎಸ್​ಎಸ್​ ಶಾಖೆಗಳನ್ನು ಗ್ರಾಮೀಣ ಭಾಗದಲ್ಲೂ ವಿಸ್ತರಿಸುವ ಕುರಿತು ಚರ್ಚೆ ಹಾಗೂ ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪೂರ್ವ ತಯಾರಿ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಎನ್​ಆರ್​ಸಿ ಮತ್ತು ಸಿಎಎ ಕುರಿತು ಜಾಗೃತಿ ಮೂಡಿಸುವ ಬಗ್ಗೆಯೂ ಚರ್ಚೆಯಾಗಲಿದೆ.

    ಬಿಜೆಪಿಯ ಉನ್ನತ ನಾಯಕರುಗಳಾದ ಜೆಪಿ.ನಡ್ಡಾ, ಬಿ.ಎಲ್​.ಸಂತೋಷ್​, ರಾಮ್​ ಮಾಧವ್​, ಪಿ. ಮುರಳೀಧರ್​ ರಾವ್​, ಅನಿಲ್​ ಜೈನ್​, ವಿನಯ್​ ಸಹಸ್ತ್ರಬುದ್ಧೆ, ಭೂಪೇಂದ್ರ ಯಾದವ್​, ವಿ. ಸತೀಶ್​, ಶಿವ ಪ್ರಕಾಶ್​, ಸೌದಾನ್​ ಸಿಂಗ್​, ಥಾವರಚಂದ್​ ಗೆಹ್ಲೊಟ್​, ನರೇಂದ್ರ ಸಿಂಗ್​ ತೋಮರ್​, ಪ್ರಹ್ಲಾದ್​ ಪಟೇಲ್​, ಪ್ರಕಾಶ್​ ಜಾವಡೇಕರ್​ ಮತ್ತು ಕೈಲಾಶ್​ ವಿಜಯವರ್ಗಿಯ ಮುಂತಾದವರುಕೊನೆಯ ಹಂತದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts