More

    ಎರಡು ಮಕ್ಕಳು ಸಾಕು ಎನ್ನುವ ನೀತಿ ತರುವುದು ಇಂದಿನ ಅಗತ್ಯ: ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​

    ಮುಂಬೈ: ಎರಡು ಮಕ್ಕಳು ಮಾತ್ರ ಎಂಬ ನಿಯಮ ದೇಶಾದ್ಯಂತ ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ರಾಷ್ಟ್ರೀಯ ಸೇವಾ ಸಂಘ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್​ ಭಾಗವತ್​ ಅಭಿಪ್ರಾಯ ಪಟ್ಟಿದ್ದಾರೆ.

    ಮೊರದಾಬಾದ್​ನ ಇನ್​ಸ್ಟಿಟ್ಯೂಟ್​ ಆಪ್​ ಟೆಕ್ನಾಲಜಿಯಲ್ಲಿ ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ಕುರಿತು ಹಿರಿಯ ಸ್ವಯಂಸೇವಕರ ಸಭೆಯಲ್ಲಿ ಮಾತನಾಡಿದರು.

    ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಆದರೆ ಜನಸಂಖ್ಯಾ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕವಲ್ಲ. ಆರ್​ಎಸ್​ಎಸ್​ ಎರಡು ಮಕ್ಕಳ ನೀತಿ ಜಾರಿಗೆ ಹೇಳುತ್ತಿದೆ. ಆದರೆ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು ಎಂದರು.

    ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು 370ನೇ ವಿಧಿ ರದ್ದುಗೊಳಿಸಿರುವುದನ್ನು ವಾಪಸ್​ ಪಡೆಯುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಈ ತೀರ್ಮಾನಗಳಿಗೆ ಆರ್​ಎಸ್​ಎಸ್​ ಬೆಂಬಲಿಸುತ್ತದೆ ಎಂದರು. ಇದರ ಬಗ್ಗೆ ಇನ್ನು ಜಾಗೃತಿ ಮೂಡಿಸ ಬೇಕಿದೆ ಎಂದು ಅಭಿಪ್ರಾಯಪಟ್ಟರು.

    ಎನ್​ಸಿಪಿ ಮುಖಂಡ ನವಾಬ್​ ಮಲಿಕ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ಕಾನೂನು ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ ಇದನ್ನು ಕಡ್ಡಾಯಗೊಳಿಸಲು ಸಾಧ್ಯವಾಗಲಾರದು. ಈ ಹಿಂದೆ ಕಾಂಗ್ರೆಸ್​ ನೀತಿ ಜಾರಿಗೆ ತಂದಾಗ 60 ಲಕ್ಷಕ್ಕೂ ಹೆಚ್ಚು ಪುರುಷರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದು ನೆನಪಿಸಿದರು.

    ಮೋಹನ್​ ಭಾಗವತ್​ ಅವರಿಗೆ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ತಿಳಿದಿಲ್ಲ. ಅವರು ಸಂತಾನಹರಣ ಕಾನೂನನ್ನು ಜಾರಿಗೊಳಿಸಬೇಕು ಎಂದರೆ ಪ್ರಧಾನಿ ಮೋದಿ ಅವರು ಮಾಡಲಿ ಎಂದು ವ್ಯಂಗ್ಯವಾಡಿದರು.

    ಮಹಾರಾಷ್ಟ್ರದಲ್ಲಿ ಮೂರನೇ ಮಗುವಿದ್ದರೆ ಸ್ಥಳಿಯ ಚುನಾವಣೆಗಳಲ್ಲಿ ಸ್ಪಧಿಸುವಂತಿಲ್ಲ. ಸರ್ಕಾರಿ ನೇಮಕಾತಿಯಲ್ಲಿ ಅವಕಾಶವಿಲ್ಲ. ಅಲ್ಲದೆ ಸರ್ಕಾರದ ಕೆಲ ಸವಲತ್ತುಗಳು ಅಂತಹವರಿಗೆ ದೊರೆಯುವುದಿಲ್ಲ ಎಂಬ ಕಾನೂನಿದೆ ಎಂದು ಅವರು ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts