ತಿರುವನಂತಪುರ: ಹೆಲ್ಮೆಟ್ ಧರಿಸಿಲ್ಲ ಅಂತ ಹೇಳಿ ಆಟೋ ಡ್ರೈವರ್ ಒಬ್ಬರಿಗೆ 500 ರೂ. ದಂಡ ವಿಧಿಸಿರುವ ವಿಚಿತ್ರ ಘಟನೆ ಕೇರಳದ ತಿರುವನಂತಪುರದ ಬಲರಾಮಪುರದಲ್ಲಿ ನಡೆದಿದೆ. ಈ ಪ್ರಕರದಿಂದ ಅಸಮಾಧಾನಗೊಂಡಿರುವ ಆಟೋ ಚಾಲಕ ಇದೀಗ ಹೆಲ್ಮೆಟ್ ಧರಿಸಿ ಡ್ರೈವಿಂಗ್ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಟೋ ನಂಬರ್ KL20R 6843 ವಿರುದ್ಧ ಪೊಲೀಸರು ಈ ವಿಚಿತ್ರ ಕ್ರಮ ತೆಗೆದುಕೊಂಡಿದ್ದಾರೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಸಂಚಾರಿ ಪೊಲೀಸರು ಸಫರುಲ್ಲಾಗೆ ಕಳೆದ ವರ್ಷ ಡಿಸೆಂಬರ್ 3 ರಂದು 500 ರೂಪಾಯಿ ದಂಡ ಪಾವತಿಸಲು ಚಲನ್ ನೀಡಿದ್ದರು. ಕ್ಯಾಮೆರಾ ಅಳವಡಿಸುವ ಮುನ್ನವೇ ಈ ಘಟನೆ ನಡೆದಿದ್ದು, ಪೊಲೀಸರ ಕಡೆಯಿಂದ ಸಣ್ಣ ತಪ್ಪಾಗಿರಬಹುದು ಅಂದುಕೊಂದು ಸಫರುಲ್ಲಾ ದಂಡ ಕಟ್ಟಿರಲಿಲ್ಲ.
ಇದನ್ನೂ ಓದಿ: ವ್ಯಕ್ತಿಯ ಮುಖ, ದೇಹಕ್ಕೆ ಮಲ ಸುರಿದು ವಿಕೃತಿ: ಅಮಾನವೀಯ ಕೃತ್ಯ ಎಸಗಿದ ಆರೋಪಿಯ ಬಂಧನ
ದಂಡ ಕಟ್ಟದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ನೋಟಿಸ್ ಯಾವಾಗ ಬಂತೋ ಅದರಿಂದ ಆಘಾತಕ್ಕೆ ಒಳಗಾದ ಸಫರುಲ್ಲಾ, ಇದೀಗ ಹೆಲ್ಮೆಟ್ ಧರಿಸಿ ಹೆಲ್ಮೆಟ್ ಧರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ, ಪೊಲೀಸರು ಆಟೋ ಚಾಲಕರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಆಟೋ ಬಲರಾಮಪುರಂ ಮೂಲದ ಶೇಮೀರ್ ಅವರದ್ದು. ಈ ನಡುವೆ ಬಲರಾಮಪುರಂ ಪೊಲೀಸರು ಚಲನ್ ನೀಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಟ್ರಾಫಿಕ್ ಘಟಕದಿಂದ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದು ಕ್ಲೆರಿಕಲ್ ಮಿಸ್ಟೇಕ್ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ನಿಮ್ಮ ಕಣ್ಣಿಗೊಂದು ಸವಾಲ್: ಎರಡರಲ್ಲಿ ಯಾವ ಕುದುರೆಗೆ ಸೇರಿದ ತಲೆ ಎಂಬುದನ್ನು ಗೆಸ್ ಮಾಡುವಿರಾ?
ಟ್ವಿಟರ್ ಬರ್ಡ್ಗೆ ವಿದಾಯ: ಲೋಗೋ ಬದಲಾಯಿಸಿ ರೀಬ್ರ್ಯಾಂಡ್ ಮಾಡಲು ಎಲನ್ ಮಸ್ಕ್ ಪ್ಲ್ಯಾನ್