RRR 2: 2022ರಲ್ಲಿ ತೆರೆಕಂಡ ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶಿಸಿದ ‘ಆರ್‌ಆರ್‌ಆರ್’ ಸಿನಿಮಾ, ನಿರೀಕ್ಷೆಗೂ ಮೀರಿದ ಗಳಿಕೆ ಮತ್ತು ಮನ್ನಣೆಯನ್ನು ಗಳಿಸಿತು. ಭಾರತೀಯ ಬಾಕ್ಸ್ ಆಫೀಸ್ ಮಾತ್ರವಲ್ಲದೇ ಜಾಗತಿಕವಾಗಿಯೂ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಕಂಡ ಆರ್‌ಆರ್‌ಆರ್ ಚಿತ್ರದ ಗ್ರಾಫಿಕ್ಸ್ ಕೆಲಸಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಪ್ರದರ್ಶನಗೊಂಡ ಈ ಚಿತ್ರವನ್ನು ಸ್ವತಃ ಚಿತ್ರತಂಡವೇ ಖುದ್ದಾಗಿ ಲಂಡನ್ಗೆ ತೆರಳಿ ವೀಕ್ಷಿಸಿದೆ.

ರಾಮ್ ಚರಣ್, ಜೂ. ಎನ್ಟಿಆರ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಹಾಗೂ ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರವು ಇತ್ತೀಚೆಗೆ ಲಂಡನ್‌ನ ಪ್ರಸಿದ್ಧ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ವಿಶೇಷ ಪ್ರದರ್ಶನಗೊಂಡಿತು. ಇದಲ್ಲದೆ, ಚಲನಚಿತ್ರ ಪ್ರದರ್ಶನದ ಜತೆಗೆ ಅದ್ಧೂರಿ ಆರ್ಕೆಸ್ಟ್ರಾವನ್ನು ಸಹ ಏರ್ಪಡಿಸಲಾಗಿತ್ತು. ಈ ವಿಶೇಷ ಸಂದರ್ಭದ ವಿಡಿಯೋ ತುಣುಕನ್ನು ರಾಮ್ ಚರಣ್ ಪತ್ನಿ ಉಪಾಸನಾ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನಟನ ಅಭಿಮಾನಿಗಳನ್ನು ಸೆಳೆದಿದೆ.
ಆರ್‌ಆರ್‌ಆರ್ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದ ನಂತರ ಹಲವರು ಆರ್‌ಆರ್‌ಆರ್ 2 ಬರಲಿದೆಯೇ? ಭಾಗ-2 ಮಾಡಿದರೆ ಯಾರೆಲ್ಲ ನಟಿಸಲಿದ್ದಾರೆ ಎಂಬ ಪ್ರಶ್ನೆಯನ್ನು ಜಾಲತಾಣಗಳ ಮೂಲಕ ನಿರ್ದೇಶಕರ ಮುಂದಿಟ್ಟಿದ್ದರು. ಆದರೆ, ಇದ್ಯಾವುದಕ್ಕೂ ಉತ್ತರಿಸದ ರಾಜಮೌಳಿ, ಇದೀಗ ಉಪಾಸನಾ ಕೇಳಿದ “ಆರ್‌ಆರ್‌ಆರ್-2 ಮಾಡ್ತೀರಾ” ಎಂಬ ಪ್ರಶ್ನೆಗೆ ನಗುತ್ತಲೇ ಹೌದು ಎಂದು ಉತ್ತರಿಸಿದ್ದಾರೆ. ಸದ್ಯ ಈ ಹೇಳಿಕೆ ವೈರಲ್ ಆಗಿದ್ದು, ನಿಜಕ್ಕೂ ಆರ್‌ಆರ್‌ಆರ್ ಭಾಗ 2 ತೆರೆಗೆ ಬರಲಿದ್ಯಾ ಅಥವಾ ತಮಾಷೆಗೆ ಹೇಳಿದ್ರಾ? ಎಂಬ ಕುತೂಹಲ ಹಲವರನ್ನು ಕಾಡಿದೆ,(ಏಜೆನ್ಸೀಸ್).