ಜೈಪುರ: ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಜೈಪುರದಲ್ಲಿ ಇಂದು ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.
ರಾಜಸ್ಥಾನ ರಾಯಲ್ಸ್ ತಂಡ ನೀಡಿದ 158 ರನ್ಗಳ ಗುರಿ ಬೆನ್ನು ಹತ್ತಿದ ಪಂಜಾಬ್ ತಂಡ ಕನ್ನಡಿಗ ಕೆ.ಎಲ್ ರಾಹುಲ್ ಅವರ 95(70) ರನ್ಗಳ ಹೊರತಾಗಿಯೂ ಸೋಲುಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ಜೆ.ಸಿ ಬಟ್ಲರ್ ಅವರ 82(58) ರನ್ಗಳ ನೆರವಿನೊಂದಿಗೆ 158ರನ್ಗಳನ್ನು ಗಳಿಸಿತು. ಬಟ್ಲರ್ ಅವರ ಆಟವನ್ನು ಹೊರತುಪಡಿಸಿದರೆ ರಾಜಸ್ಥಾನದ ಪರ ಯಾರೊಬ್ಬರೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಈ ನಡುವೆ ಸ್ಯಾಮ್ಸನ್ 22 (18) ರನ್ಗಳಿಸಿ ತಂಡಕ್ಕೆ ನೆರವಾದರು. ಮಿಕ್ಕೆಲ್ಲ ಆಟಗಾರರು ಎರಡಂಕಿ ದಾಟುವ ಹೊತ್ತಿಗೆ ಪರದಾಡಿದರು. ಅಂತಿಮವಾಗಿ 20 ಓವರ್ಗಳಲ್ಲಿ ತಂಡ 158ರನ್ಗಳನ್ನು ಗಳಿಸಿತು.
ಈ ಸಾಮಾನ್ಯ ಮೊತ್ತ ಬೆನ್ನುಹತ್ತಿದ ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ರಾಹುಲ್ ಮನೋಜ್ಱ ಆಟ ಪ್ರದರ್ಶಿಸಿದರು. ಒಂದೆಡೆ ರಾಹುಲ್ ವೀರಾವೇಷದ ಆಟ ಪ್ರದರ್ಶಿಸುತ್ತಿದ್ದರೆ ಇನ್ನೊಂದೆಡೆ ಅವರಿಗೆ ಯಾರೊಬ್ಬರಿಂದಲೂ ನೆರವು ಸಿಗಲಿಲ್ಲ. ಎಲ್ಲ ಆಟಗಾರರೂ ಎರಡಂಕಿ ದಾಟಲು ತಿಣುಕಾಡಬೇಕಾಯಿತು. ವಿಕೆಟ್ಗಳು ಒಂದರ ಹಿಂದೊಂದರಂತೆ ಉರುಳಿದವು. ಈ ಇನ್ನಿಂಗ್ಸ್ನಲ್ಲಿ ರಾಜಸ್ಥಾನದ ಬೌಲರ್ಗಳು ಪಾರಮ್ಯ ಮೆರೆದರು. ರಾಹುಲ್ ಔಟಾಗದೇ 95 ರನ್ಗಳಿಸಿದರಾದರೂ, ತಂಡವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ ಪಂಜಾಬ್ ತಂಡ 143ರನ್ಗಳನ್ನಷ್ಟೇ ಗಳಿಸಿ ರಾಜಸ್ಥಾನಕ್ಕೆ ಶರಣಾಯಿತು.
ಇನ್ನು ಬೌಲಿಂಗ್ ವಿಭಾಗದಲ್ಲಿ ಪಂಜಾಬ್ ಪರ ಎಜೆ ಟೈ 4 ವಿಕೆಟ್, ಮುಜೀಬ್ ಉರ್ ರೆಹಮಾನ್ 2 ವಿಕೆಟ್ ಪಡೆದರು ಗಮನ ಸೆಳೆದರು.
ಪಂಜಾಬ್ ಪರ ಗೌತಮ್ 2, ಆರ್ಚರ್, ಉನಾದ್ಗಟ್, ಸ್ಟೋಕ್ಸ್, ಸೋದಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.
IPL 2018JaipurK L RahulKings XI PunjabRajastan Royalsಐಪಿಎಲ್ 2018ಕೆ.ಎಲ್. ರಾಹುಲ್ಜೈಪುರರಾಜಸ್ಥಾನ ರಾಯಲ್ಸ್