More

    ರಾಯಲ್ ಎನ್​ಫೀಲ್ಡ್​ನ BS-VI ಅನುಸಾರದ ಕ್ಲಾಸಿಕ್ 350 ಮಾರುಕಟ್ಟೆಗೆ

    ಮುಂಬೈ: ಭಾರತದಲ್ಲಿ ಜನಪ್ರಿಯ ಬೈಕ್​ ನಿರ್ಮಾತೃ ಕಂಪನಿಗಳಲ್ಲಿ ಒಂದಾದ ರಾಯಲ್ ಎನ್​ಫೀಲ್ಡ್​ ಹೊಚ್ಚ ಹೊಸದಾದ ಕ್ಲಾಸಿಕ್ 350 ಬೈಕ್​ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.

    ಹೊಚ್ಚ ಹೊಸ ಕ್ಲಾಸಿಕ್ 350 ಬೈಕ್​ BS-VI ನಿಯಮಾವಳಿ ಪ್ರಕಾರ ಸಿದ್ಧವಾಗಿದೆ. ಹೆಚ್ಚಿನ ಮೆಕಾನಿಕಲ್ ಪರಿಷ್ಕರಣೆ ಜತೆಗೆ ಹೊರನೋಟ ಮತ್ತು ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಯನ್ನು ಈ ಬೈಕ್ ಕಂಡಿದೆ. ಇತರೆ ಮಾದರಿಯ ಬೈಕ್​ಗಳಲ್ಲೂ BS-VI ನಿಯಮಾವಳಿ ಬದಲಾವಣೆ, ಪರಿಷ್ಕರಣೆಗಳು ಶೀಘ್ರವೇ ಆಗಿದೆ ಎಂದು ಕಂಪನಿ ತಿಳಿಸಿದೆ.

    ಎಂಜಿನ್​: ಸರ್ಕಾರ ಜಾರಿಗೊಳಿಸಿರುವ BS-VI ನಿಯಮಾವಳಿ ಪ್ರಕಾರ ಹೊಸ ಎಮಿಷನ್ ನಾರ್ಮ್ಸ್​ಗೆ ಈ ಎಂಜಿನ್ ಹೊಂದಿಕೊಂಡಿದೆ. ಕ್ಲಾಸಿಕ್ 350 ಬೈಕ್​ನ ಎಂಜಿನ್​ 20 PS ನಷ್ಟು ಪವರ್ ಮತ್ತು 28 Nm ನಷ್ಟು ಟಾರ್ಕ್​ ಹೊಂದಿದೆ.

    ಬಣ್ಣ: ಕ್ಲಾಸಿಕ್ 350 ಬೈಕ್​ಗಳು ಸ್ಟೆಲ್ತ್ ಬ್ಲ್ಯಾಕ್​, ಕ್ರೋಮ್​ ಬ್ಲ್ಯಾಕ್​, ಏರ್​ಬೋರ್ನ್​ ಬ್ಲೂ, ಸಿಗ್ನಲ್ಸ್​ ಸ್ಟೋರ್ಮ್ ರೈಡರ್​ ಸ್ಯಾಂಡ್​, ಗನ್​​ಮೆಟಲ್​ ಗ್ರೇ, ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯ ಇವೆ.

    ವಾರೆಂಟಿ: ರಾಯಲ್​ ಎನ್​ಫೀಲ್ಡ್​ ತನ್ನ BS-VI ಮಾಡೆಲ್​ಗಳಿಗೆ ಹೊಸ ಸರ್ವೀಸ್ ಪ್ಯಾಕೇಜನ್ನೂ ಬಿಡುಗಡೆಗೊಳಿಸಿದೆ. ಇದರಂತೆ, ಮೂರು ವರ್ಷಗಳ ವಾರೆಂಟಿ ಮತ್ತು ರಸ್ತೆ ಬದಿ ನೆರವೂ ಸಿಗಲಿದೆ.

    ಬೆಲೆ: ಕ್ಲಾಸಿಕ್​ 350ರ ಎಕ್ಸ್​ಶೋರೂಂ ಬೆಲೆ 1.65 ಲಕ್ಷ ರೂಪಾಯಿಯಿಂದ ಶುರುವಾಗುತ್ತಿದೆ. ದೇಶಾದ್ಯಂತ ಇರುವ ಔಟ್​ಲೆಟ್​ಗಳಲ್ಲಿ 10,000 ರೂಪಾಯಿಸಿ ಮುಂಗಡ ಬುಕ್ಕಿಂಗ್ ಕೂಡ ಮಾಡಲು ಅವಕಾಶ ಕಲ್ಪಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts