ಆರ್​ಸಿಬಿ ಪ್ಲೇ ಆಫ್​​​​​​​​​ಗೆ ಅರ್ಹತೆ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಚಾಹಲ್​​

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್​​ ಪ್ರಿಮೀಯರ್​​ ಲೀಗ್​ (ಐಪಿಎಲ್​​)ನಲ್ಲಿ ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಆಡಿರುವ 8 ಪಂದ್ಯಗಳಲ್ಲಿ ಕೇವಲ ಒಂದು ಜಯ ಸಾಧಿಸಿದರೆ, ಉಳಿದ 7 ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ. ಇನ್ನುಳಿದ ಆರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಜಯ ಸಾಧಿಸಿದರೆ, ಪ್ಲೇ ಆಫ್​​ಗೆ ಆರ್​ಸಿಬಿ ಅರ್ಹತೆ ಪಡೆಯಲಿದೆ ಎಂದು ಆರ್​ಸಿಬಿಯ ಲೆಗ್​​​ ಸ್ಪಿನ್ನರ್​​​ ಯಜುವೇಂದ್ರ ಚಾಹಲ್​​ ಹೇಳಿದ್ದಾರೆ.

ನಮಗೆ ಇನ್ನೂ ಆರು ಪಂದ್ಯಗಳಿವೆ. ಅವುಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್​ಗೆ ಅರ್ಹತೆ ಪಡೆಯುತ್ತೇವೆ ಎಂಬ ವಿಶ್ವಾಸವಿದೆ. ಕಳೆದ ವರ್ಷ 14 ಅಂಕಗಳೊಂದಿಗೆ ತಂಡ ಪ್ಲೇ ಆಫ್​​ ಪ್ರವೇಶಿಸಿತ್ತು. ಕಿಂಗ್ಸ್​​ ಇಲವೆನ್​​ ಪಂಜಾಬ್​​ ಎದುರು ನಮ್ಮ ತಂಡ ಅದ್ಭುತ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಆದರೆ ಮುಂಬೈ ಎದುರು ಸೋಲನುಭವಿಸಿದ್ದು, 19 ರಂದು ಕೋಲ್ಕತ ಎದುರಿನ ಪಂದ್ಯಕ್ಕೆ ತಂಡ ತಯಾರಾಗುತ್ತಿದ್ದು, ಯಶಸ್ವಿ ಪ್ರದರ್ಶನ ನೀಡಲಿದೆ ಎಂದು ಚಾಹಲ್​​​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಯಕ ವಿರಾಟ್​​ ಕೊಹ್ಲಿ ಅವರು ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಆಟವಾಡಿದೆ. ಉಳಿದ ಆರು ಪಂದ್ಯಗಳಲ್ಲಿ ಉತ್ತಮ ಆಟದೊಂದಿಗೆ ಜಯ ಸಾಧಿಸಿ ಪ್ಲೇ ಆಫ್​​​​ ಪ್ರವೇಶಿಸುತ್ತೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇವೆ ಹಾಗೂ 19 ಮತ್ತು 28ರಂದು ಕೋಲ್ಕತ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​​​​​​​ ವಿರುದ್ಧ ನಡೆಯಲಿವೆ. ಇದೇ 21 ರಂದು ಚೆನ್ನೈ ಸೂಪರ್​​ ಕಿಂಗ್ಸ್​​​ ಎದುರು ಹೈವೋಲ್ಟೆಜ್​​ ಪಂದ್ಯ ನಡೆಯಲಿದೆ. (ಏಜನ್ಸೀಸ್​)

Leave a Reply

Your email address will not be published. Required fields are marked *