ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ವೈಫಲ್ಯಕ್ಕೆ ಕೆಟ್ಟ ಆಯ್ಕೆಯೇ ಕಾರಣ : ಕುಂಬ್ಳೆ

ಬೆಂಗಳೂರು: 2019ನೇ ಇಂಡಿಯನ್​​ ಪ್ರೀಮಿಯರ್​​ ಲೀಗ್​​ (ಐಪಿಎಲ್​)ನಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ವೈಫಲ್ಯಕ್ಕೆ ಆಟಗಾರರ ಕೆಟ್ಟ ಆಯ್ಕೆಯೇ ಕಾರಣ ಎಂದು ಆರ್​ಸಿಬಿ ಮಾಜಿ ನಾಯಕ ಅನಿಲ್​​ ಕುಂಬ್ಳೆ ಅವರು ಅಸಮಾಧನ ವ್ಯಕ್ತಪಡಿಸಿದ್ದಾರೆ.

ಲೀಗ್​​ನ 14 ಪಂದ್ಯಗಳಲ್ಲಿ ತಂಡ ಕೇವಲ ಐದರಲ್ಲಿ ಜಯ ಸಾಧಿಸಿ 11 ಅಂಕಗಳೊಂದಿಗೆ ಪ್ಲೇ ಆಫ್​​ ಪ್ರವೇಶಿಸುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರನಡೆದಿದೆ. ಇನ್ನೂ ಅಂಕಪಟ್ಟಿಯ ಕೊನೆಯ ಸ್ಥಾನಕ್ಕಿಳಿಯುವ ಮೂಲಕ ಭಾರಿ ಮುಖಭಂಗಕ್ಕೊಳಗಾಗಿದೆ.

ತಂಡದ ಬಗ್ಗೆ ಮಾತನಾಡಿದ ಅನಿಲ್​​ ಕುಂಬ್ಳೆ ಆಟಗಾರರ ಕೆಟ್ಟ ಆಯ್ಕೆಯಿಂದಲೇ ತಂಡ ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಆಟವಾಡುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್​​ ವಿಭಾಗಲ್ಲಿ ನಾಯಕ ವಿರಾಟ್​​ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​ ನಂತರ ಇತರೆ ಬ್ಯಾಟ್ಸ್​​ಮನ್​ಗಳು ವೈಫಲ್ಯ ಅನುಭವಿಸಿದ್ದಾರೆ. ಇನ್ನೂ ಬೌಲಿಂಗ್​ನಲ್ಲಿಯೂ ತಂಡ ಕಳಪೆ ಪ್ರದರ್ಶನ ತೋರಿದೆ. ಉಮೇಶ್​​ ಯಾದವ್​​​​​ ತೀರಾ ಕಳಪೆ ಪ್ರದರ್ಶನ ಹಾಗೂ ಮೊಹಮ್ಮದ್​​ ಸಿರಾಜ್​​ ಅವರ ಕಳಪೆ ಫಿಲ್ಡಿಂಗ್​​​​​​​​​​ ತಂಡಕ್ಕೆ ಭಾರಿ ನಷ್ಟ ಉಂಟುಮಾಡಿದೆ. ಯಜುವೇಂದ್ರ ಚಾಹಲ್​​​​ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ.

ಟೂರ್ನಿಯ ಮಧ್ಯೆದಲ್ಲಿ ಮೊಯಿನ್​​ ಆಲಿ ಮತ್ತು ಮಾರ್ಕಸ್​​ ಸ್ಟೋನಿಸ್​​ ವಿಶ್ವಕಪ್​​​​​ ಅಭ್ಯಾಸಕ್ಕೆ ತಮ್ಮ ತವರಿಗೆ ಮರಳಿದ್ದರಿಂದ ತಂಡಕ್ಕೆ ಭಾರಿ ನಷ್ಟ ಉಂಟಾಯಿತು. ಇನ್ನೂ ಶ್ರೇಷ್ಠ ಬೌಲರ್​​​​ ಡೇಲ್​​ ಸ್ಟೇನ್​​​​ ಗಾಯದ ಸಮಸ್ಯೆ ಕಾಡಿರುವುದು ತಂಡಕ್ಕೆ ದುರಾದೃಷ್ಟಕರವಾಗಿತ್ತು ಎಂದು ಕುಂಬ್ಳೆ ಹೇಳಿದ್ದಾರೆ.

ಯುವ ಆಟಗಾರರಾದ ಶಿವಂ ದುಬೆ ಹಾಗೂ ಅಕ್ಷದೀಪ್​​​​​ನಾಥ್​​​​​ ನಿರೀಕ್ಷಿತ ಆಟವಾಡುವಲ್ಲಿ ವಿಫಲವಾಗಿದ್ದಾರೆ. ಇನ್ನೂ ತಂಡದ ಬಗ್ಗೆ ಧನತ್ಮಕವಾಗಿ ಮಾತನಾಡಿದ ಕುಂಬ್ಳೆ ಕೊನೆಯ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​​​​​​​​ ಆಟಗಾರ ಶಿಮ್ರೋನ್​​ ಹೇಟ್ಮೆರ್​​ ಮತ್ತು ಗುರ್​​​​​ಕೀರಾತ್​​ ಉತ್ತಮ ಜತೆಯಾಟವಾಡಿದ್ದರು. ಅಲ್ಲದೇ ಆರಂಭಿಕ ಪಾರ್ಥಿವ್​​ ಪಟೇಲ್​​​​ ಟೂರ್ನಿಯುದ್ದಕ್ಕೂ ಮಿಂಚಿದ್ದಾರೆ ಎಂದು ಅವರು ತಿಳಿಸಿದ್ದಾರೆ. (ಏಜನ್ಸೀಸ್​)