ರೌಡಿಶೀಟರ್​​ ಲೋಕನಾಥ್ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಆನೇಕಲ್: ರೌಡಿಶೀಟರ್​​ ಲೋಕನಾಥ್ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಅನೇಕಲ್​​ ಪೋಲಿಸಲು ಬಂಧಿಸಿದ್ದಾರೆ.


ಬೆಂಗಳೂರು ನಗರ ಜಿಲ್ಲೆ ಅನೇಕಲ್​​​​​​ನ ಬಹದ್ದೂರ್​​​​ಪುರದ ಬೀದಿಯಲ್ಲಿ ಏ.12 ರಂದು ಪುಡಿ ರೌಡಿ ಲೋಕನಾಥ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಈ ಘಟನೆ ನಡೆದ ನಂತರ ಆರೋಪಿಗಳು ಪೋಲಿಸರ ಕೈಗೆ ಸಿಗದಂತೆ ತಲೆಮರೆಸಿಕೊಂಡಿದ್ದರು.


ಈ ಪ್ರಕರಣವನ್ನು ಬೆನ್ನಟ್ಟಿದ ಅನೇಕಲ್​​ ಪೋಲಿಸರು ಭಾನುವಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರೀಶ್​ ಮತ್ತು ಅರುಣ್​​ ಕುಮಾರ್​ ಬಂಧಿತ ಆರೋಪಿಗಳು. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೋಲಿಸರು ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಪೋಲಿಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *