ಸ್ನೇಹಿತರೊಂದಿಗೆ ಊಟಕ್ಕೆ ಹೋಗಿ ಅವರಿಂದಲೇ ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್​​

ಬೆಂಗಳೂರು: ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಯಶವಂತಪುರದಲ್ಲಿ ನಡೆದಿದೆ.

ನಂದಿನಿ ಲೇಔಟ್​​ ನಿವಾಸಿ ವಿಜಯ್​​​ ಆಲಿಯಾಸ್​​​​ ವಿಜಿ ಎಂಬಾತನನ್ನು ತನ್ನ ಗೆಳೆಯರು ಕ್ಷುಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಶನಿವಾರ ನುಸುಕಿನ ಜಾವ ಮೂರು ಗಂಟೆಗೆ ವಿಜಯ್​​​ ತನ್ನ ಗೆಳೆಯರೊಂದಿಗೆ ಊಟ ಮಾಡಲು ಯಶವಂತಪುರ ಮಸೀದಿ ಬಳಿ ಬಂದಿದ್ದರು. ಈ ವೇಳೆ ತನ್ನ ಜತೆಗಿದ್ದವರೊಂದಿಗೆ ವಿಜಯ್​​​​ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಅವರೆಲ್ಲಾ ಒಂದಾಗಿ ತಮ್ಮ ಬಳಿ ಇದ್ದ ಮಾರಕಾಸ್ತ್ರಗಳಿಂದ ವಿಜಯನ್​ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್​​ ಮೂಲಗಳಿಂದ ತಿಳಿದು ಬಂದಿದೆ.

ಯಶವಂತಪುರ ಡಿಸಿಪಿ ಶಶಿಕುಮಾರ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *