ಈ ಮೊದಲು ತಪ್ಪಿಸಿಕೊಂಡಿದ್ದ ರೌಡಿಶೀಟರ್​ನನ್ನು ಬಂಧಿಸಿದ ಕೋರಮಂಗಲ ಪೊಲೀಸರು

ಕುಣಿಗಲ್​: ಬೆಂಗಳೂರಿನ ರೌಡಿಶೀಟರ್​ ಕುಣಿಗಲ್​ ಗಿರಿಯನ್ನು ಇಂದು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಗಿರಿ ತನ್ನ ಬರ್ತ್​ ಡೇ ಯನ್ನು ಡ್ಯಾನ್ಸ್​ ಬಾರ್​ನಲ್ಲಿ ಆಚರಿಸಿಕೊಳ್ಳುತ್ತಿದ್ದ. ಆಗ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಆದರೆ ಅಂದು ಕುಣಿಗಲ್​ ಗಿರಿ ಪೊಲೀಸರ ಕಣ್ಣ ತಪ್ಪಿಸಿ ಓಡಿ ಹೋಗಿದ್ದ. ಈತ ಹಲವು ಪ್ರಕರಣಗಳಲ್ಲಿ ಬೇಕಾದ ಆರೋಪಿಯಾಗಿದ್ದ.

ಅಂದಿನಿಂದಲೂ ಗಿರಿ ಬಂಧನಕ್ಕೆ ಪೊಲೀಸರು ಕಾಯುತ್ತಿದ್ದರು. ಬಾರ್​, ಪಬ್​ಗಳ ಮೇಲೆ ವಿಶೇಷ ನಿಗಾ ಇಟ್ಟಿದ್ದರು. ಇಂದು ಕುಣಿಗಲ್​ ಗಿರಿ ಜತೆ ಅತನ ನಾಲ್ವರು ಸಹಚರರನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *