ಫೋಟೋ ಕಳುಹಿಸಿ ಸ್ಪಾಟ್​ಗೆ ಕರೆಸಿದ್ದ ಸ್ನೇಹಿತೆ

ಬೆಂಗಳೂರು: ಹೋಟೆಲ್ ರೂಮ್ ಬುಕ್ ಮಾಡಿ ಕಾಯುತ್ತಿದ್ದ ರೌಡಿ ಲಕ್ಷ್ಮಣ್​ನನ್ನು ವಾಟ್ಸ್​ಆಪ್ ಕಾಲ್ ಮಾಡಿ ವರ್ಷಿಣಿ ಹೊರಗೆ ಕರೆದು ಹಂತಕರಿಗೆ ಸಹಕರಿಸಿದ್ದಳು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಮಾ.7ರಂದು ಆರ್​ಎಂಸಿ ಯಾರ್ಡ್ ಸೋಪ್ ಕಾರ್ಖಾನೆ ಬಳಿಯ ರಸ್ತೆಯಲ್ಲಿ ನಡೆದ ರೌಡಿ ಲಕ್ಷ್ಮಣ್ (42) ಹತ್ಯೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವರ್ಷಿಣಿ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಪ್ರಮುಖ ಪಾತ್ರ ವಹಿಸಿರುವ ವರ್ಷಿಣಿಯನ್ನು ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ ಹಲವು ವಿಚಾರಗಳು ಬಹಿರಂಗವಾಗಿವೆ.

ಪ್ರಮುಖ ಆರೋಪಿ ರೂಪೇಶ್​ನಿಗೂ ಮೊದಲೇ ಲಕ್ಷ್ಮಣ್​ನಿಗೆ ವರ್ಷಿಣಿ ಪರಿಚಯವಿತ್ತು. ಆ ನಂತರ ರೂಪೇಶ್ ಮೇಲೆ ಆಕೆಗೆ ಪ್ರೀತಿ ಬೆಳೆದಿತ್ತು. ವರ್ಷಿಣಿ ತಾಯಿ ವಿರೋಧಿಸಿ ರೂಪೇಶ್​ಗೆ ಬುದ್ಧಿವಾದ ಹೇಳುವಂತೆ ಲಕ್ಷ್ಮಣ್​ಗೆ

ಹೇಳಿದ್ದಳು. ಅದಕ್ಕಾಗಿ ರೂಪೇಶ್​ನನ್ನು ಕರೆದು ಲಕ್ಷ್ಮಣ್ ಬೆದರಿಕೆ ಹಾಕಿದ್ದ. ಆದರೂ ಇವರಿಬ್ಬರು ಗುಟ್ಟಾಗಿ ಓಡಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಲಕ್ಷ್ಮಣ್, ಏರಿಯಾ ಬಿಟ್ಟು ದೂರ ಹೋಗುವಂತೆ ರೂಪೇಶ್​ಗೆ ತಾಕೀತು ಮಾಡಿದ್ದ. ಇದರಿಂದ ಆಕ್ರೋಶಗೊಂಡಿದ್ದ ವರ್ಷಿಣಿ ಮತ್ತು ರೂಪೇಶ್ 4 ತಿಂಗಳ ಹಿಂದೆಯೇ ಲಕ್ಷ್ಮಣ್​ಗೆ ಕೊಲೆಗೆ ಸಂಚು ರೂಪಿಸಿದ್ದರು. ಮಳ್ಳವಳಿ ಶಾಸಕ ಅನ್ನದಾನಿ ಮನೆ ಕಳ್ಳತನ ಪ್ರಕರಣದಲ್ಲಿ 2018ರ ಮೇನಲ್ಲಿ ರೂಪೇಶ್ ಜೈಲು ಸೇರಿದ್ದ. ರೌಡಿ ಕ್ಯಾಟ್ ರಾಜ ಸೇರಿ ಹಲವರು ಪರಿಚಯವಾಗಿ ಲಕ್ಷ್ಮಣ್ ಹತ್ಯೆಗೆ ಕೈ ಜೋಡಿಸುವುದಾಗಿ ಹೇಳಿದ್ದರು. ಲಕ್ಷ್ಮಣ್ ಒಂಟಿಯಾಗಿ ಬರುವಂತೆ ಮಾಡುವುದು ನಿನ್ನ ಕೆಲಸ, ಹತ್ಯೆ ನನ್ನ ಕೆಲಸವೆಂದು ರೂಪೇಶ್​ಗೆ ಕ್ಯಾಟ್ ರಾಜ ಹೇಳಿದ್ದ. ಅದಕ್ಕೆ ಒಪ್ಪಿದ ರೂಪೇಶ್, ತನ್ನ ಪ್ರೇಯಸಿ ವರ್ಷಿಣಿಗೆ ವಿಷಯ ಮುಟ್ಟಿಸಿದ್ದ. ಮಾ.7ರ ಬೆಳಗ್ಗೆ 9 ಗಂಟೆಗೆ ಲಕ್ಷ್ಮಣನಿಗೆ ವಾಟ್ಸ್​ಆಪ್​ನಲ್ಲಿ ಕರೆ ಮಾಡಿದ್ದ ವರ್ಷಿಣಿ, ನಾನು ನಿನ್ನನ್ನು ಭೇಟಿಯಾಗಲು ಲಂಡನ್​ನಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ಏಕಾಂತದಲ್ಲಿ ಮಾತನಾಡೋಣ ಎಂದು ಹೇಳಿದ್ದಳು.

ಆಕೆ ತನ್ನವಳಾಗುವ ಕಾಲ ಬಂತು ಎಂದು ಖುಷಿಯಾಗಿದ್ದ ಲಕ್ಷ್ಮಣ, ಬೆಳಗ್ಗೆಯೇ ಪತ್ನಿಗೆ 2 ದಿನ ಬರುವುದಿಲ್ಲ ಎಂದು ಹೇಳಿ ಬಟ್ಟೆ ಪ್ಯಾಕ್ ಮಾಡಿಕೊಂಡು ಇನೋವಾ ಕಾರಿನಲ್ಲಿ ಹೊರಬಂದಿದ್ದಾನೆ. ಮಾರ್ಗಮಧ್ಯೆಯೇ ಹತ್ಯೆ ಮಾಡಬೇಕೆಂದು ಕ್ಯಾಟ್ ರಾಜ ಸ್ಕೆಚ್ ಹಾಕಿದ್ದ. ಆದರೆ, ಹಂತಕರಿಗೆ ಲಕ್ಷ್ಮಣ್​ನನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಇತ್ತ ಲಕ್ಷ್ಮಣ, ಕೊಠಡಿ ಕಾಯ್ದಿರಿಸಿಕೊಂಡು ವರ್ಷಿಣಿಗೆ ಕಾಯುತ್ತಿದ್ದ. ಮಧ್ಯಾಹ್ನವಾದರೂ ಲಕ್ಷ್ಮಣ ಹೊರಗೆ ಬಾರದೆ ಇದ್ದಾಗ ರಸ್ತೆಯಲ್ಲೇ ಕಾಯುತ್ತಿದ್ದ ಆರೋಪಿಗಳು, ‘ರಾಯಲ್ ಟಯರ್ ಶಾಪ್’ ಅಂಗಡಿ ಫೋಟೋ ತೆಗೆದು ವರ್ಷಿಣಿಗೆ ರವಾನಿಸುತ್ತಾರೆ. ಆಕೆ ಲಕ್ಷ್ಮಣ್ ಮೊಬೈಲ್ ವಾಟ್ಸ್​ಆಪ್​ಗೆ

ಮಾಡಿ ಇಲ್ಲೇ ಕಾಯುತ್ತಿದ್ದೇನೆ ಬೇಗ ಬಂದು ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಲಕ್ಷ್ಮಣ್ ಕಾರು ತೆಗೆದುಕೊಂಡು ಹೋಟೆಲ್​ನಿಂದ ಹೊರಬಂದಾಗ ಮತ್ತೊಂದು ಕಾರಿನಲ್ಲಿ ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಬ್ಬ ರೌಡಿಗೆ ಗುಂಡೇಟು

ರೌಡಿ ಲಕ್ಷ್ಮಣ್ ಹತ್ಯೆ ಪ್ರಕರಣದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಮತ್ತೊಬ್ಬ ರೌಡಿ ಆಕಾಶ್ ಅಲಿಯಾಸ್ ಮಾಮ (24) ಎಂಬಾತನಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆಕಾಶ್ ಬಲಗಾಲಿಗೆ ಗುಂಡೇಟು ತಗಲಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಾ.7ರ ಮಧ್ಯಾಹ್ನ 1.35ರಲ್ಲಿ ರೌಡಿ ಲಕ್ಷ್ಮಣ್​ನನ್ನು ಹತ್ಯೆ ಪ್ರಕರಣದ ಬಂಧಿತರು ನೀಡಿದ ಮಾಹಿತಿ ಆಧರಿಸಿ ಆಕಾಶ್ ಪತ್ತೆಗೆ ಶೋಧ ನಡೆಸಲಾಗಿತ್ತು. ಕೃತ್ಯದ ಬಳಿಕ ಪರಾರಿಯಾಗಿದ್ದ ಆಕಾಶ್, ಬುಧವಾರ ಉತ್ತರಹಳ್ಳಿಯ ಪೂರ್ಣಪ್ರಜ್ಞನಗರದಲ್ಲಿ ಅಡಗಿರುವ ಮಾಹಿತಿ ಆಧರಿಸಿ ಬೆಳಗಿನ ಜಾವ 5 ಗಂಟೆಗೆ ಇನ್​ಸ್ಪೆಕ್ಟರ್ ಮುರುಗೇಂದ್ರಯ್ಯ, ಮುಖ್ಯಪೇದೆಗಳಾದ ಅರುಣ್, ಶಾಂತರಾಜು ಮತ್ತು ಸತೀಶ್ ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಬೆನ್ನಟ್ಟಿ ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಖ್ಯಪೇದೆ ಅರುಣ್​ಗೆ

ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಆಕಾಶ್​ಗೆ ಮುರುಗೇಂದ್ರಯ್ಯ ಗಾಳಿಯಲ್ಲಿ 1 ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಬಳಿಕವೂ ಚಾಕು ಹಿಡಿದು ಪೊಲೀಸರತ್ತ ಆಕಾಶ್ ನುಗ್ಗಿದ್ದ. ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದಾರೆ. ಆ ಗುಂಡು ಬಲಗಾಲಿಗೆ ತಗುಲಿ ಆಕಾಶ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ನಂತರ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು ಇರಿತದಿಂದ ಕೈಗೆ ಗಾಯವಾಗಿರುವ ಮುಖ್ಯಪೇದೆ ಅರುಣ್ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಚನ್ನಪಟ್ಟಣ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ಇರುವ ಆಕಾಶ್, 1 ಕೊಲೆ, 1 ಕೊಲೆ ಯತ್ನ ಡಕಾಯಿತಿ ಸೇರಿ 4ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪ್ರಕರಣಗಳನ್ನು ಖುಲಾಸೆ ಮಾಡಿಸಿಕೊಡುವುದಾಗಿ ಆಕಾಶ್​ಗೆ ಭರವಸೆ ಕೊಟ್ಟಿದ್ದರು. ಅದಕ್ಕಾಗಿ ಆತ ರೌಡಿ ಲಕ್ಷ್ಮಣ್ ಕೊಲೆಗೆ ಸಾಥ್ ನೀಡಿದ್ದ ಎನ್ನಲಾಗಿದೆ.

ಲೈಂಗಿಕ ದೌರ್ಜನ್ಯ ಎಸಗಿದ್ದ

ಕುಟುಂಬ ಸದಸ್ಯರಿಗೆ ಪರಿಚಯವಿದ್ದ ಲಕ್ಷ್ಮಣ್, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದ. ಪದೇಪದೆ ಒಂಟಿಯಾಗಿ ಬರುವಂತೆ ಕರೆಯುತ್ತಿದ್ದ. ಇಲ್ಲವಾದರೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಇದನ್ನು ರೂಪೇಶ್​ಗೆ ತಿಳಿಸಿ ಸಹಾಯ ಕೋರಿದ್ದೆ ಎಂದು ವರ್ಷಿಣಿ ಅಳಲು ತೋಡಿಕೊಂಡಿದ್ದಾಳೆ.