ರೌಡಿ ಲಕ್ಷ್ಮಣ್​ ಕೊಲೆಯ ಹಿಂದೆ ಯುವತಿಯೊಬ್ಬಳ ಕೈವಾಡ?

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ರೌಡಿಶೀಟರ್​ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಣ್​ ಪತ್ನಿ ಚೈತ್ರಾ ಪೊಲೀಸರಿಗೆ ದೂರು ನೀಡಿದ್ದು, ಯುವತಿಯೊಬ್ಬಳ ಹೆಸರನ್ನು ಉಲ್ಲೇಖಿಸಿದ್ದಾಳೆ.

ವರ್ಷಿಣಿ ಎಂಬ ಯುವತಿಯ ವಿರುದ್ಧ ದೂರು ದಾಖಲಾಗಿದ್ದು, ಆಕೆಯ ಬಗ್ಗೆ ಚೈತ್ರಾ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಲಕ್ಷ್ಮಣನ ಮನೆಯ ಪಕ್ಕದಲ್ಲೇ ವರ್ಷಿಣಿ ವಾಸವಿದ್ದಳು. ಕೊಲೆಯಾದ ದಿನ ವಾಟ್ಸ್​ಆ್ಯಪ್​ ಕರೆ ಮಾಡಿ ರಹಸ್ಯ ಸ್ಥಳಕ್ಕೆ ಕರೆಸಿಕೊಂಡಿದ್ದಳು ಎಂದು ಚೈತ್ರಾ ಮಾಹಿತಿ ನೀಡಿದ್ದಾರೆ.

ಆರೋಪಿಗಳ ಬಂಧನ
ವರ್ಷಿಣಿ ಸೇರಿ ರೌಡಿಶೀಟರ್ ಹೇಮಿ, ಕ್ಯಾಟ್ ರಾಜ, ರೂಪೇಶ್ ಸೇರಿ 6 ಆರೋಪಿಗಳನ್ನು ಬಂಧಿಸಲಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆದರೆ, ಯಾವ ವಿಚಾರಕ್ಕೆ ಹತ್ಯೆ ನಡೆದಿದೆ ಎಂಬುದು ಇನ್ನು ತಿಳಿದುಬಂದಿಲ್ಲ ಎಂದು ಡಿಸಿಪಿ ಗಿರೀಶ್​ ತಿಳಿಸಿದ್ದಾರೆ.

ವರ್ಷಿಣಿ ಯಾರು?
ಆರೋಪಿ ವರ್ಷಿಣಿ ಜೆಡಿಎಸ್ ನಾಯಕಿ ಪದ್ಮಾ ಅವರ ಮಗಳು. ಪದ್ಮಾ ಮದ್ದೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದಾರೆ. (ಏಜೆನ್ಸೀಸ್​)