ಮಣ್ಣು ಪರೀಕ್ಷೆಯಂತೆ ಬೆಳೆಗೆ ಪೋಷಕಾಂಶ ನೀಡಿ

1 nrp 2 sabhe

ಎನ್.ಆರ್.ಪುರ: ರೈತರು ಪ್ರತಿ ಮೂರು ವರ್ಷಕ್ಕೊಮ್ಮೆ ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿದರೆ ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆಯಿದೆ ಎಂಬುದು ತಿಳಿಯಲಿದ್ದು ಅದರ ಆಧಾರದ ಮೇಲೆ ಬೆಳೆಗೆ ಪೋಷಕಾಂಶಗಳನ್ನು ನೀಡಬೇಕು ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಪುನೀತ್ ರೈತರಿಗೆ ಸಲಹೆ ನೀಡಿದರು.
ರೋಟರಿ ಭವನದಲ್ಲಿ ರೋಟರಿ ಕ್ಲಬ್ ಮತ್ತು ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ವಾರದ ಸಭೆಯಲ್ಲಿ ಅಡಕೆ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.
ಗಿಡಗಳಿಗೆ ಎನ್‌ಪಿಕೆ ಜತೆಗೆ ಮೈಕ್ರೋ ನ್ಯೂಟ್ರೆಟ್ಸ್ ನೀಡುವುದು ಉತ್ತಮ. ಮಳೆಗಾಲ ಆರಂಭಕ್ಕೂ ಮುನ್ನ ಬೋರ್ಡೋ ದ್ರಾವಣ ಸಿಂಪರಣೆ ಮಾಡಿದರೆ ಅಡಕೆಗೆ ತಗಲುವ ಕೊಳೆ ರೋಗ ನಿಯಂತ್ರಿಸಬಹುದು. ಭತ್ತ ಬೆಳೆಯುವ ಗದ್ದೆಗಳಲ್ಲಿ ಅಡಕೆ ತೋಟ ಮಾಡಿದ್ದರೆ ಅಲ್ಲಿ ಬೇರುಹುಳದ ಬಾಧೆ ಹೆಚ್ಚಾಗಿ ಕಂಡುಬರುತ್ತದೆ. ಬೇರು ಹುಳು ನಿಯಂತ್ರಿಸಲು ಬೇವಿನ ಹಿಂಡಿಯನ್ನು ಎರಡರಿಂದ ಮೂರು ವರ್ಷ ಸತತವಾಗಿ ಗಿಡಕ್ಕೆ ಹಾಕಿದರೆ ಬೇರು ಹುಳು ನಿಯಂತ್ರಿಸಬಹುದು ಎಂದರು.
ಅಡಕೆಗೆ ತಗಲುವ ಹಳದಿ ಎಲೆ ರೋಗ ನಿಯಂತ್ರಣಕ್ಕೆ ಇದುವರೆಗೆ ಯಾವುದೇ ಪರಿಣಾಮಕಾರಿ ಔಷಧ ಸಂಶೋಧನೆಯಾಗಿಲ್ಲ. ಅಡಕೆ ಸಸಿಗಳನ್ನು ಮಾಡುವಾಗ ಹಳದಿ ಎಲೆ ರೋಗ ಬಾಧಿತ ತೋಟದ ಅಡಕೆ ಕಾಯಿಯನ್ನು ಬಳಸಬಾರದು. ರೋಗವಿಲ್ಲದ ಅಡಕೆಯ ತೋಟದ ಸಸಿಯನ್ನು ಹೊಸ ತೋಟಗಳಲ್ಲಿ ನೆಡುವುದು ಉತ್ತಮ. ಅಡಕೆ ಹಳದಿ ಎಲೆ ಬಾಧಿತ ತೋಟಗಳಲ್ಲಿ ಪರ್ಯಾಯವಾಗಿ ಬೆಣ್ಣೆಹಣ್ಣು, ಜಾಯಿಕಾಯಿ, ಲವಂಗ, ಏಲಕ್ಕಿ, ಕಾಫಿ ಬೆಳೆಯಬಹುದು. ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಎಲ್ಲ ರೀತಿಯ ಹಣ್ಣುಗಳು, ತರಕಾರಿ, ಸಾಂಬಾರು ಪದಾರ್ಥಗಳು, ಔಷಧ ಬೆಳೆಗಳು ಬರುತ್ತವೆ. ವಾರ್ಷಿಕ ಬೆಳೆಗಳು ಕೃಷಿ ಇಲಾಖೆ ವ್ಯಾಪ್ತಿಗೆ ಬರುತ್ತವೆ ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದು ವಿಜಯ್ ಮಾತನಾಡಿ, ಸೆ.11ರಂದು ಇನ್ನರ್‌ವ್ಹೀಲ್ ಕ್ಲಬ್ ಗೌರ್ನರ್ ತಾಲೂಕು ಕೇಂದ್ರಕ್ಕೆ ಭೇಟಿ ನೀಡಲಿದ್ದು ಅಂದು ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ಸದಸ್ಯರೂ ಭಾಗವಹಿಸಬೇಕು ಎಂದರು. ರೋಟರಿ ಕ್ಲಬ್ ಕಾರ್ಯದರ್ಶಿ ಮಧು ವೆಂಕಟೇಶ್, ರೋಟರಿ, ಇನ್ನರ್‌ವ್ಹೀಲ್ ಕ್ಲಬ್ ಪದಾಧಿಕಾರಿಗಳು ಭಾಗವಹಿಸಿದ್ದರು.

Share This Article

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…