ಶಾಸಕ ರೋಷನ್​ ಬೇಗ್​ ಕಾಂಗ್ರೆಸ್​ನಿಂದ ಅಮಾನತು: ಕೆಪಿಸಿಸಿಯಿಂದ ಆದೇಶ

ಬೆಂಗಳೂರು: ಮಾಜಿ ಸಚಿವ, ಶಿವಾಜಿನಗರ ಕಾಂಗ್ರೆಸ್​ ಶಾಸಕ ರೋಷನ್​ ಬೇಗ್​ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕೆಪಿಸಿಸಿ ಕಾರ್ಯದರ್ಶಿ ಬಿ.ವೈ.ಘೋರ್ಪಡೆ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ರೋಷನ್​ ಬೇಗ್​ ಈ ಹಿಂದೆ ದಿನೇಶ್​ ಗುಂಡೂರಾವ್​, ಮಾಜಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ವೇಣುಗೋಪಾಲ್​ ಅವರ ವಿರುದ್ಧ ಮಾತನಾಡಿದ್ದರು. ರೋಷನ್​ ಬೇಗ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಐಸಿಸಿಗೆ ಕೆಪಿಸಿಸಿ ಮನವಿ ಮಾಡಿತ್ತು.

ಅಲ್ಲದೆ ಇತ್ತೀಚೆಗೆ ನಡೆದ ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಮನ್ಸೂರ್​ ಅವರೊಂದಿಗೆ ಸ್ನೇಹದಿಂದ ಇದ್ದರು ಎಂದು ಹೇಳಲಾಗಿತ್ತು. ಈ ಎಲ್ಲ ಕಾರಣಗಳಿಂದ ಪಕ್ಷದಿಂದ ಅಮಾನತು ಮಾಡಿದ್ದಾಗಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *