ಬೆಂಗಳೂರು: ‘ಕೆಜಿಎಫ್’ ಚಿತ್ರದಲ್ಲಿ ನಟಿಸಿದ ಬಳಿಕ ಹಲವು ಸಿನಿಮಾ ಅವಕಾಶಗಳನ್ನು ಪಡೆಯುತ್ತಿರುವ ನಟಿ ರೂಪಾ ರಾಯಪ್ಪ, ಇದೀಗ ಕನ್ನಡದ ಜತೆಗೆ ತೆಲುಗು, ಹಿಂದಿಯಲ್ಲಿಯೂ ಸಕ್ರಿಯರಾಗಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಪುನೀತ್ ರಾಜಕುಮಾರ್ ಅವರ ಪಿಆರ್ಕೆ ಬ್ಯಾನರ್ನ ಸಿನಿಮಾಕ್ಕೂ ಆಯ್ಕೆಯಾಗಿದ್ದು, ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಅಷ್ಟೇ ಅಲ್ಲ ಹಿಂದಿಯ ವೆಬ್ಸಿರೀಸ್ವೊಂದರಲ್ಲಿಯೂ ಅವರು ನಾಯಕಿಯಾಗಿ ನಟಿಸಿದ್ದಾರೆ. ‘ಡಾ. ರಾಜಕುಮಾರ್ ಅವರ ಕುಟುಂಬದವರ ಜತೆಗೆ ನಟಿಸಲು ಅವಕಾಶ ಸಿಗುವುದೇ ಅಪರೂಪ. ಅಂಥದರಲ್ಲಿ ಪುನೀತ್ ಹೋಮ್ ಬ್ಯಾನರ್ನಲ್ಲಿ ಸಿದ್ಧವಾಗುತ್ತಿರುವ ‘ಒನ್ ಕಟ್ ಟು ಕಟ್’ ಚಿತ್ರದಲ್ಲಿ ವಿಶೇಷ ಪಾತ್ರವೊಂದು ಸಿಕ್ಕಿದೆ. ಹಾಗಾಗಿ ಖುಷಿ ಇಮ್ಮಡಿಯಾಗಿದೆ’ ಎನ್ನುವ ರೂಪಾ, ‘ಒನ್ ಕಟ್ ಟು ಕಟ್’ ಚಿತ್ರದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಂಶಿಧರ್ ಭೋಗರಾಜು ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ದಾನಿಶ್ ಸೇಠ್ ಕಲಾ ವಿಭಾಗದ ಶಿಕ್ಷಕನಾದರೆ, ಸಂಯುಕ್ತಾ ಹೊರನಾಡು ವಿಜ್ಞಾನ ವಿಷಯದ ಟೀಚರ್ ಆಗಿ ನಟಿಸುತ್ತಿದ್ದಾರೆ. ಇವರಿಬ್ಬರ ನಡುವೆ ರೂಪಾ ಅವರದ್ದು ಉತ್ತರ ಭಾರತದ ಹುಡುಗಿಯ ಪಾತ್ರ. ಈ ಸಿನಿಮಾ ಹೊರತುಪಡಿಸಿ, ಕನ್ನಡದಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಗಿರಿರಾಜ್ ಬಿ.ಎಂ, ಹಿಂದಿಯಲ್ಲಿಯೂ ಥ್ರಿಲ್ಲರ್ ಎಳೆಯ ವೆಬ್ಸರಣಿಯೊಂದನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ರೂಪಾ ರಾಯಪ್ಪ ನಾಯಕಿಯಾಗಿದ್ದು, ಅದರ ಬಹುತೇಕ ಕೆಲಸ ಮುಕ್ತಾಯವಾಗಿದೆ. ‘ಒಕ ಅಮ್ಮಾಯಿ ಇದ್ದರು ಅಬ್ಬಾಯಿ’ ಚಿತ್ರದ ಮೂಲಕ ಟಾಲಿವುಡ್ಗೂ ರೂಪಾ ಪ್ರಯಾಣ ಬೆಳೆಸಿದ್ದಾರೆ.
ಅವಳಿಗೆ ಈಗ ತಾನು ಹೆಂಗಸಂತಲೇ ಅನಿಸುತ್ತಿಲ್ಲವಂತೆ!; ಉಲ್ಟಾ ಹೊಡೆಯಿತು ಸೌಂದರ್ಯಚಿಕಿತ್ಸೆ…
ಇದಿನ್ನೂ ಟ್ರೇಲರ್, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್!? ಈ ಭಾಗದ ಸಚಿವರ ಸಿಡಿ ರಿಲೀಸ್ ಆಗೋ ಸಾಧ್ಯತೆ!