23.2 C
Bangalore
Saturday, December 14, 2019

ಕರ್ನಾಟಕ ಆಧರಿಸಿದ ಕೆವಿ ಸಿದ್ಧಾರ್ಥ್

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡನೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

| ಇಮಾಮಹುಸೇನ್ ಗೂಡುನವರ

ಬೆಳಗಾವಿ: ನಾಯಕ ವಿನಯಕುಮಾರ್ ಅಲಭ್ಯತೆ ಹಾಗೂ ಅನುಭವಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ವೈಫಲ್ಯದಿಂದಾಗಿ ಮುಂಬೈ ವಿರುದ್ಧದ ಹೈವೋಲ್ಟೇಜ್ ರಣಜಿ ಮುಖಾಮುಖಿಯಲ್ಲಿ ಹಿನ್ನಡೆ ಕಾಣುವ ಹಂತದಲ್ಲಿದ್ದ ಕರ್ನಾಟಕ ತಂಡವನ್ನು ಯುವ ಬ್ಯಾಟ್ಸ್ ಮನ್ ಕೆವಿ ಸಿದ್ಧಾರ್ಥ್ ಆಧರಿಸಿದರು. 264 ನಿಮಿಷಗಳ ಕಾಲ ಮುಂಬೈನ ಬೌಲಿಂಗ್ ಎದುರಿಸಿ ನಿಂತ ಸಿದ್ಧಾರ್ಥ್, ಇನ್ನೆರಡು ದಿನಗಳಲ್ಲಿ 26ನೇ ವರ್ಷಕ್ಕೆ ಕಾಲಿಡಲಿರುವ ಸಂಭ್ರಮವನ್ನು ಚೊಚ್ಚಲ ರಣಜಿ ಶತಕದೊಂದಿಗೆ ಆಚರಿಸಿದರು.

ಆಟೋನಗರದ ಕೆಎಸ್​ಸಿಎ ಮೈದಾನದಲ್ಲಿ ಮಂಗಳವಾರ ಆರಂಭವಾದ ಪಂದ್ಯದಲ್ಲಿ ಹಂಗಾಮಿ ನಾಯಕ ಶ್ರೇಯಸ್ ಗೋಪಾಲ್ ನೇತೃತ್ವದಲ್ಲಿ ಕಣಕ್ಕಿಳಿದ ಕರ್ನಾಟಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭದಲ್ಲಿ ಹಿನ್ನಡೆ ಕಂಡರೂ, ಕೇವಲ 2ನೇ ರಣಜಿ ಪಂದ್ಯ ಆಡುತ್ತಿರುವ ಕೆವಿ ಸಿದ್ಧಾರ್ಥ್ (104*ರನ್, 184 ಎಸೆತ, 13 ಬೌಂಡರಿ, 2 ಸಿಕ್ಸರ್) ತಾಳ್ಮೆಯ ಶತಕ ಹಾಗೂ ಮಿರ್ ಕೌನೇನ್ ಅಬ್ಬಾಸ್ ಅರ್ಧಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ 88 ಓವರ್​ಗಳಲ್ಲಿ 4 ವಿಕೆಟ್​ಗೆ 263 ರನ್ ಗಳಿಸಿತು.

ಅನುಭವಿ ಆಟಗಾರರ ಅನುಪಸ್ಥಿತಿ ನಡುವೆಯೇ ಮೈದಾನಕ್ಕಿಳಿದ ಕರ್ನಾಟಕ 6ನೇ ಓವರ್​ನಲ್ಲಿ ಶಿಶಿರ್ ಭವಾನಿ (5) ವಿಕೆಟ್ ಕಳೆದುಕೊಂಡಿತು. 3 ವರ್ಷಗಳ ಬಳಿಕ ರಣಜಿ ಪಂದ್ಯ ಆಡಿದ ಶಿಶಿರ್ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಕಳೆದ ಪಂದ್ಯದ ಶತಕವೀರ ಆರಂಭಿಕ ನಿಶ್ಚಲ್ ಡಿ. ಕೂಡ 27ನೇ ಓವರ್​ನಲ್ಲಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು. ಸೋಮವಾರ ಮಳೆ ಸುರಿದಿದ್ದರಿಂದ ಆರಂಭದಲ್ಲಿ ಪಿಚ್ ಬೌಲರ್​ಗಳಿಗೆ ನೆರವೀಯಿತು. ಶಿವಂ ದುಬೆ ಪಿಚ್​ನ ನೆರವನ್ನು ಉತ್ತಮವಾಗಿ ಬಳಸಿಕೊಂಡರು. 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದ್ದ ಆತಿಥೇಯ ತಂಡ ಇಕ್ಕಟ್ಟಿಗೆ ಸಿಲುಕಿತ್ತು. ಎಸೆತಗಳು ಹೆಚ್ಚಾಗಿ ಬೌನ್ಸ್ ಆಗುತ್ತಿದ್ದ ಕಾರಣ ಕರ್ನಾಟಕ ತಂಡ ಬೇಗನೆ ಆಲೌಟಾಗುವ ಲಕ್ಷಣ ಗೋಚರಿಸಿತ್ತು. ಈ ಹಂತದಲ್ಲಿ ಜತೆಯಾದ ಸಿದ್ಧಾರ್ಥ್ ಹಾಗೂ ಕೌನೇನ್ ಅಬ್ಬಾಸ್ (64 ರನ್, 154 ಎಸೆತ, 10 ಬೌಂಡರಿ) 3ನೇ ವಿಕೆಟ್​ಗೆ 104 ರನ್​ಗಳ ಸೇರಿಸಿ ತಂಡವನ್ನು ಆಧರಿಸಿದರು. ಈ ನಡುವೆ, 58ನೇ ಓವರ್​ನಲ್ಲೇ ದುಬೆ ಬೌಲಿಂಗ್​ನಲ್ಲಿ ಕೌನೇನ್ ಅಬ್ಬಾಸ್, ಕೀಪರ್ ಆದಿತ್ಯ ತಾರೆಗೆ ಕ್ಯಾಚ್ ನೀಡಿ ಹೊರನಡೆದರೆ, ನಿರೀಕ್ಷೆ ಇರಿಸಿದ್ದ ಸ್ಟುವರ್ಟ್ ಬಿನ್ನಿ ಆರಂಭದಲ್ಲೇ ಕೈಕೊಟ್ಟರು. 175ಕ್ಕೆ 4 ವಿಕೆಟ್ ಕಳೆದುಕೊಂಡ ತಂಡ ಇಕ್ಕಟ್ಟಿಗೆ ಸಿಲುಕಿತು. ಆಗ ಸಿದ್ಧಾರ್ಥಗೆ ಜತೆಯಾದ ನಾಯಕ ಶ್ರೇಯಸ್ ಗೋಪಾಲ್ (47*) ನೆರವಿನಿಂದ ತಂಡ ಚೇತರಿಕೆ ಕಂಡಿತು. 5ನೇ ವಿಕೆಟ್​ಗೆ 88 ರನ್ ಸೇರಿಸಿರುವ ಈ ಜೋಡಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಇದು ನನಗೆ ಮೊದಲ ರಣಜಿ ಟೂರ್ನಿ. ನಾಗ್ಪುರದಲ್ಲಿ ಪದಾರ್ಪಣೆ ಮಾಡಿದ್ದೆ. ಈ ಪಂದ್ಯಕ್ಕಾಗಿ ಗೇಮ್ ಪ್ಲಾನ್ ಮಾಡಿದ್ದೆ. ಆದರೆ, ಶತಕ ಬಾರಿಸುವ ನಿರೀಕ್ಷೆ ಇರಲಿಲ್ಲ. ದೀರ್ಘ ಅವಧಿಯವರೆಗೆ ಕ್ರೀಸ್​ನಲ್ಲಿ ನಿಂತು ಆಟವಾಡುವ ಇಂಗಿತ ಹೊಂದಿದ್ದೆ.

| ಕೆವಿ ಸಿದ್ಧಾರ್ಥ್

ವಿನಯ್ ಗೈರು

ಪಂದ್ಯಕ್ಕೆ ಫಿಟ್ ಎಂದು ಹೇಳಿದ್ದ ವಿನಯ್ಕುಮಾರ್ ಪಂದ್ಯ ಆರಂಭವಾಗುವ ಹಂತದಲ್ಲಿ ಬೆನ್ನುನೋವಿನ ಕಾರಣದಿಂದಾಗಿ ಹಿಂದೆ ಸರಿದರು. ಶ್ರೇಯಸ್ ಗೋಪಾಲ್ ಹಂಗಾಮಿ ನಾಯಕರಾಗಿ ಕಣಕ್ಕಿಳಿದರೆ, ವಿನಯ್ ಬದಲು ರೋನಿತ್ ಮೋರೆ ಆಡಿದರು. ಕರುಣ್, ಸಮರ್ಥ್ ಸ್ಥಾನದಲ್ಲಿ ಕೌನೇನ್ ಅಬ್ಬಾಸ್, ಶಿಶಿರ್ ಭವಾನಿ ಕಣಕ್ಕಿಳಿದರು.

ಮೊದಲ ದಿನ 9 ಶತಕ

3ನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಒಟ್ಟು 9 ಶತಕಗಳು ದಾಖಲಾದವು. ಹಾಲಿ ಚಾಂಪಿಯನ್ ವಿದರ್ಭ ಪರ ವಾಸಿಂ ಜಾಫರ್(131*), ಫಯಾಜ್ ಫಜಲ್(124*), ಮೇಘಾಲಯದ ಯೋಗೇಶ್ ನಗರ್(166), ರಾಜ್ ಬಿಸ್ವಾ(111), ಮಿಜೋರಾಂನ ತರುವರ್ ಕೊಹ್ಲಿ (100), ಉತ್ತರಾಖಂಡದ ಸೌರಭ್ ರಾವತ್(115*), ರಜತ್ ಭಾಟಿಯಾ(121), ಪಂಜಾಬ್​ನ ಜೀವನ್​ಜೋತ್ ಸಿಂಗ್(123), ಹೈದರಾಬಾದ್​ನ ತನ್ಮಯ್ ಅಗರ್ವಾಲ್(113) ಮೊದಲ ದಿನ ಸೆಂಚುರಿ ಸಂಭ್ರಮ ಕಂಡರು.

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...