ಕೊಪ್ಪ: ಮಕ್ಕಳಿಗೆ ಗುಣಮಟ್ಟದ ಬೋಧನೆ ಮಾಡಿ ಆದರ್ಶ ಪ್ರಜೆಯನ್ನಾಗಿಸುವುದರ ಮೂಲಕ ದೇಶ ಸಮರ್ಥವಾಗಿಸುವ ಕೆಲಸ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ತಹಸೀಲ್ದಾರ್ ಲಿಖಿತಾ ಮೋಹನ್ ಹೇಳಿದರು.
ಪುರಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ದೇಶಕ್ಕೆ ಆಧಾರ ಸ್ತಂಭ. ಶಿಕ್ಷಕರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಮಹಾನ್ ವ್ಯಕ್ತಿಗಳ ಬೆಳವಣಿಗೆಗೆ ಗುರು ಇದ್ದಾರೆ ಎಂದರು.
ದೀಪಾ ಹಿರೇಗುತ್ತಿ ಮಾತನಾಡಿ, ಶಿಕ್ಷಕರು ಸಮಾಜಕ್ಕೆ ಎಲ್ಲವನ್ನೂ ನೀಡುತ್ತಾರೆ. ಬೇರೆಲ್ಲ ವೃತ್ತಿ ಸಮಾಜದಿಂದ ಪಡೆದರೆ, ಶಿಕ್ಷಕ ವೃತ್ತಿ ಮಾತ್ರ ಸಮಾಜಕ್ಕೆ ಕೊಡುಗೆ ನೀಡುತ್ತದೆ. ಶಿಕ್ಷಕರಿರುವ ಸ್ಥಳ ಶಕ್ತಿ ಕೇಂದ್ರಗಳಂತೆ ಎಂದರು.
ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್, ಉಪಾಧ್ಯಕ್ಷ ಗಾಯತ್ರಿ ಶೆಟ್ಟಿ, ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ, ಅಶೋಕ್ ನಾರ್ವೆ, ರಾಜಾಶಂಕರ್ ಇತರರಿದ್ದರು.