ತಿರುಪತಿ ವೆಂಕಟೇಶ್ವರ ಸ್ವಾಮಿ ಮೊರೆ ಹೋದ ರೋಹಿತ್​​, ಕಾರ್ತಿಕ್​​

ತಿರುಪತಿ: ಭಾರತ ತಂಡದ ಉಪನಾಯಕ ರೋಹಿತ್​ ಶರ್ಮಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​​​​​​ ದಿನೇಶ್​​ ಕಾರ್ತಿಕ್​​ ಅವರು ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.

ಇಂಡಿಯನ್​​ ಪ್ರೀಮಿಯರ್​​ ಲೀಗ್​ (ಐಪಿಎಲ್​​)ನಲ್ಲಿ ನಿರತವಾಗಿದ್ದ ರೋಹಿತ್​​ ಹಾಗೂ ದಿನೇಶ್ ಕಾರ್ತಿಕ್​​​​​​​​ ಅವರು ತಮ್ಮ ಕುಟುಂಬ ಸಮೇತ ದೇವರ ಮೊರೆ ಹೋಗಿದ್ದಾರೆ. ರೋಹಿತ್​​​​​​​​ ಶರ್ಮಾ ತನ್ನ ಪತ್ನಿ ರಿಟಿಕಾ ಸಜ್ದಾ ಹಾಗೂ ತಮ್ಮ ಮುದ್ದಿನ ಮಗುವೊಂದಿಗೆ ದೇವರ ಕೃಪೆಗೆ ಪಾತ್ರರಾದರು.

ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಅವರು 2019ನೇ ಆವೃತ್ತಿಯಲ್ಲಿ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಮೂಲಕ ಫೈನಲ್​​ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ತಂಡ ಫೈನಲ್​​ ಪ್ರವೇಶಿಸಿದ್ದು, ಅಂತಿಮ ಘಟ್ಟದಲ್ಲಿ ಚೆನ್ನೈ ಅಥವಾ ಡೆಲ್ಲಿಯನ್ನು ಎದುರಿಸಲಿದೆ.

ಕೋಲ್ಕತ ನೈಟ್​​ ರೈಡಸ್​ರ್ ತಂಡದ ನಾಯಕ ದಿನೇಶ್​ ಕಾರ್ತಿಕ್​​​​​​ ಐಪಿಎಲ್​ನಲ್ಲಿ ಉತ್ತಮ ಆಟವಾಡಿದರೂ ತಂಡ ಪ್ಲೇ ಆಫ್​​ ಪ್ರವೇಶಿಸುವಲ್ಲಿ ವಿಫಲವಾಗಿತ್ತು. (ಏಜನ್ಸೀಸ್​)

Leave a Reply

Your email address will not be published. Required fields are marked *